Friday, 22nd November 2024

ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧ ವಾಪಸ್‌: ಇಂಡೋನೇಷ್ಯಾ ಅಧ್ಯಕ್ಷ

ಜಕಾರ್ತಾ: ಮುಂದಿನ ವಾರವೇ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧ ತೆಗೆದು ಹಾಕುತ್ತದೆ ಎಂದು ಅಧ್ಯಕ್ಷ ಜೋಕೊ ವಿಡೋಡೊ ತಿಳಿಸಿದ್ದಾರೆ.

ಅಡುಗೆ ಎಣ್ಣೆಯ ಪೂರೈಕೆಯ ಆಧಾರದ ಮೇಲೆ ಮತ್ತು ತಾಳೆ ಎಣ್ಣೆ ಉದ್ಯಮದಲ್ಲಿ 17 ಮಿಲಿಯನ್ ಜನರು ಇದ್ದಾರೆ. ರೈತರು ಮತ್ತು ಇತರ ಪೋಷಕ ಕಾರ್ಮಿಕರು, ಅಡುಗೆ ಎಣ್ಣೆ ರಫ್ತುಗಳನ್ನು ಮೇ 23ರಂದು ಪುನಃ ತೆರೆಯುವುದಕ್ಕೆ ನಿರ್ಧರಿಸಿದ್ದೇನೆ ಎಂದು ವಿಡೋಡೊ ಹೇಳಿದ್ದಾರೆ.

ದೇಶದಲ್ಲಿ ಬೇಡಿಕೆಗೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿ ತೈಲವನ್ನು ಪೂರೈಸುವುದಕ್ಕೆ ಸರ್ಕಾರವು ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಪಾಮ್ ಆಯಿಲ್ ರಫ್ತು ನಿಷೇಧ ಆದೇಶವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಇಂಡೋನೇಷ್ಯಾ ನೌಕಾಪಡೆಯು ಈ ತಿಂಗಳ ಆರಂಭ ದಲ್ಲಿ ಆದೇಶವನ್ನು ಉಲ್ಲಂಘಿಸಿ ದೇಶದಿಂದ ತಾಳೆ ಎಣ್ಣೆಯನ್ನು ಸಾಗಿಸುತ್ತಿದ್ದ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿತ್ತು.  ಎಣ್ಣೆಯನ್ನು ಅಡುಗೆ ಎಣ್ಣೆಯಿಂದ ಸಂಸ್ಕರಿಸಿದ ಆಹಾರಗಳು, ಸೌಂದರ್ಯ ವರ್ಧಕಗಳು ಮತ್ತು ಜೈವಿಕ ಇಂಧನಗಳವರೆಗೆ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.

ಕಳೆದ ಏಪ್ರಿಲ್ 28ರಂದು ನಿಷೇಧವು ಜಾರಿಗೆ ಬಂದ ನಂತರ ದೇಶೀಯ ಪೂರೈಕೆ ಮತ್ತು ಅಡುಗೆ ಎಣ್ಣೆಯ ಬೆಲೆ ಸುಧಾರಿಸಿದೆ. ಈ ಹಿನ್ನೆಲೆ ನಿಷೇಧವನ್ನು ತೆರವುಗೊಳಿಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಹೇಳಿದರು.

ಇಂಡೋನೆಷ್ಯಾ ಜಗತ್ತಿಗೆ ಸರಬರಾಜು ಮಾಡುವ ಒಟ್ಟು ತಾಳೆ ಎಣ್ಣೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಮ್ ಆಯಿಲ್ ಅನ್ನು ಭಾರತ ಮತ್ತು ಚೀನಾ ರಾಷ್ಟ್ರಗಳೇ ಆಮದು ಮಾಡಿಕೊಳ್ಳುತ್ತವೆ.