Saturday, 14th December 2024

ಖಾಸಗಿ ಬಸ್ ಕಣಿವೆಗೆ ಉರುಳಿ 24 ಮಂದಿ ಸಾವು

ಪೆರು: ಖಾಸಗಿ ಬಸ್ ನಿಯಂತ್ರಣ ತಪ್ಪಿ ಪೆರುವಿನಲ್ಲಿ ಕಣಿವೆಗೆ ಉರುಳಿದ್ದು, ಘಟನೆಯಲ್ಲಿ 24 ಮಂದಿ ಪ್ರಾಣ ಕಳೆದುಕೊಂಡಿದ್ದು, ಉಳಿದ ಪ್ರಯಾಣಿಕರು ಗಾಯ ಗೊಂಡಿರುವ ಭೀಕರ ದುರಂತ ಪೆರುವಿನಲ್ಲಿ ನಡೆದಿದೆ.

ಲಿಮಾದಿಂದ ತುಂಬೆಸ್ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ದುರಂತದ ಪ್ರದೇಶದಲ್ಲಿ ಪರಿಹಾರ ಕಾರ್ಯಗಳನ್ನು ಮುಂದುವರಿಸುವುದು ಕಷ್ಟದ ಕೆಲಸವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾ ಚರಣೆ ನಡೆಸಿವೆ. ಬಸ್ ಅಪಘಾತದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರಕ್ಷಣಾ ತಂಡಗಳು ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗಾಯಗೊಂಡಿರುವ ಪ್ರಯಾಣಿಕರು ಪ್ರವಾಸಿಗರು ಎಂದು ತೋರುತ್ತದೆ. ಅವರಲ್ಲಿ ಹೆಚ್ಚಿನವರು ಹೈಟಿಯವರು ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಹೈಟಿಯಿಂದ ಪೆರುವಿಗೆ ಬರುವ ವಲಸಿಗರ ಸಂಖ್ಯೆಯೂ ಇತ್ತೀಚೆಗೆ ಹೆಚ್ಚುತ್ತಿದೆ.