Thursday, 12th December 2024

Phone call: ಅಪರಿಚಿತ ನಂಬರ್‌ನಿಂದ ಪತ್ನಿಗೆ 100 ಕರೆ ಮಾಡಿ ಜೈಲು ಸೇರಿದ!

Phone call

ಟೋಕಿಯೋ: ಜಪಾನ್ ನ ಅಮಗಸಾಕಿಯಲ್ಲಿ (Amagasaki in japan) ಒಬ್ಬ ವ್ಯಕ್ತಿ ತನ್ನ ಪತ್ನಿಗೆ ಅಪರಿಚಿತ ನಂಬರ್‌ನಿಂದ ದಿನಕ್ಕೆ ನೂರು ಬಾರಿ ಕರೆ ಮಾಡಿ (Phone call) ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮಹಿಳೆಗೆ ಪತಿಯು ಹಲವು ವಾರಗಳ ಕಾಲ ನಿರಂತರ ಕರೆ ಮಾಡಿದ್ದು, ಕರೆ ಸ್ವೀಕರಿಸಿದಾಗ ಆತ ಏನೂ ಹೇಳದೆ ಯಾಮಾರಿಸುತ್ತಿದ್ದರ. ಅಸಮಾಧಾನಗೊಂಡ ಆಕೆ ಪೊಲೀಸರಿಗೆ ದೂರು ನೀಡಿದ್ದಳು.

ಅಮಗಸಾಕಿ ಪಟ್ಟಣದಲ್ಲಿ ವಾಸಿಸುತ್ತಿರುವ 31 ವರ್ಷದ ಮಹಿಳೆಯು ತನಗೆ ಅಪರಿಚಿತ ನಂಬರ್‌ನಿಂದ ಬರುತ್ತಿದ್ದ ಕರೆಯಿಂದ ಬೇಸರಗೊಂಡಿದ್ದಳು. ಪದೇಪದೇ ಅಪರಿಚಿತ ನಂಬರ್‌ನಿಂದ ಕರೆ ಬರುತ್ತಿರುವುದು ನೋಡಿ ಜುಲೈ 10ರಿಂದ ಆಕೆ ಕರೆಯನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾಳೆ. ಆದರೆ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ಕಾಲ್ ಕಟ್‌ ಮಾಡುವ ತನಕ ಮೌನವಾಗಿ ಇರುತ್ತಿದ್ದ.

ಸಂಖ್ಯೆಯನ್ನು ಬ್ಲಾಕ್ ಮಾಡಬೇಕು ಎಂದುಕೊಂಡರೂ ಅದು ಮಹಿಳೆಗೆ ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಮಹಿಳೆಯ ಫೋನ್‌ನಲ್ಲಿ ಡಿಸ್‌ಪ್ಲೇ ಆಗ ಸಂಖ್ಯೆಯಿಂದ ಕರೆಗಳು ಬರುತ್ತಿದ್ದವು. ಇದು ವಾರಗಳವರೆಗೆ ನಡೆಯಿತು. ಬಳಿಕ ಮಹಿಳೆಗೆ ಒಂದೇ ದಿನದಲ್ಲಿ 100 ಕರೆಗಳು ಬಂದವು. ಇದರಿಂದ ಅವಳು ಸಂಪೂರ್ಣ ಬೇಸತ್ತು ಹೋದಳು.

ವಿಚಿತ್ರ ಎಂದರೆ ಅವಳ ಫೋನ್ ಗಂಡನ ಬಳಿ ಇದ್ದಾಗ ಯಾವುದೇ ಕರೆ ಬರುತ್ತಿರಲಿಲ್ಲ. ಅಲ್ಲದೇ ಮಧ್ಯರಾತ್ರಿ ಮಲಗಿದ್ದಾಗಲೂ ಯಾವುದೇ ಕರೆ ಬರುತ್ತಿರಲಿಲ್ಲ. ಇದರಿಂದ ಆಕೆಗೆ ಅನುಮಾನ ಹೆಚ್ಚಾಗತೊಡಗಿತು. ತಕ್ಷಣ ಆಕೆ ಪೊಲೀಸರಿಗೆ ದೂರು ನೀಡಿದಳು. ಸೆಪ್ಟೆಂಬರ್ 4ರಂದು ಪೊಲೀಸರು 38 ವರ್ಷದ ಒಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಮಹಿಳೆಗೆ ತಿಳಿಸಿದ್ದಾರೆ. ಮಹಿಳೆ ಬಂದು ನೋಡಿದಾಗ ಅದು ಆಕೆಯ ಪತಿಯಾಗಿದ್ದ.

ಈ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ ಆತ ತಾನೇ ಪತ್ನಿಗೆ ಕರೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಮ್ಮ ನಡುವೆ ಯಾವುದೇ ಕಲಹಗಲಿಲ್ಲ. ನಾನು ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ. ಹೀಗಾಗಿ ಅವಳಿಗೆ ಹೇಳದೆ ಫೋನ್ ಕರೆಗಳನ್ನು ಮಾಡಿದ್ದೇನೆ ಎಂದು ತಿಳಿಸಿದ್ದಾನೆ.

BAPS Swaminarayan Temple: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ದಾಳಿ; ಖಲಿಸ್ತಾನಿಗಳ ಕೈವಾಡ?

ಒಟ್ಟಿಗೆ ವಾಸಿಸುತ್ತಿದ್ದರೂ ಹೆಂಡತಿಯನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದು ಇದೇ ಮೊದಲು ಎಂದು ಪೊಲೀಸರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.