ಡೋನಾಲ್ಡ್ ಟ್ರಂಪ್ (Donald Trump) ತಮ್ಮ ಮೇಲೆ ಲೈಂಗಿಕ ದೌರ್ಜನ್ಯ (Physical Harassment) ಎಸಗಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ. 1970ರ ದಶಕದ ಉತ್ತರಾರ್ಧದಲ್ಲಿ ವಿಮಾನದೊಳಗೆ ಟ್ರಂಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಅವರ ವಿರುದ್ಧ ಮೊಕದ್ದಮೆ ಹೂಡಲು ಚಿಂತಿಸಿರುವುದಾಗಿ ಜೆಸ್ಸಿಕಾ ಲೀಡ್ಸ್ (Jessica Leeds) ತಿಳಿಸಿದ್ದಾರೆ.
2016ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಮಹಿಳೆಯರಲ್ಲಿ ಲೀಡ್ಸ್ ಕೂಡ ಒಬ್ಬರು. 1970ರ ದಶಕದಲ್ಲಿ ಟ್ರಂಪ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಪಕ್ಕದಲ್ಲಿ ಕುಳಿತಿದ್ದ ಲೀಡ್ಸ್ ಗೆ ಟ್ರಂಪ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಹೇಳಿಕೊಂಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಟ್ರಂಪ್ ಅವರನ್ನು ʼಲೈಂಗಿಕ ಪರಭಕ್ಷಕʼ ಎಂದು ಉಲ್ಲೇಖಿಸಿದ ಲೀಡ್ಸ್, ಅವರ ವಿರುದ್ಧ ಮೊಕದ್ದಮೆ ಹೂಡಲು ಚಿಂತಿಸುತ್ತಿರುವುದಾಗಿ ತಿಳಿಸಿದ್ದರು. ಟ್ರಂಪ್ ಅವರು 50 ವರ್ಷಗಳ ಹಿಂದೆ ನನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದರು ಎಂದು ಹೇಳಿದ್ದರು.
ಜೆಸ್ಸಿಕಾ ಲೀಡ್ಸ್ ಯಾರು?
1979ರಲ್ಲಿ ಫ್ಲೈಟ್‌ನಲ್ಲಿ ಮೊದಲ ದರ್ಜೆಯ ಕ್ಯಾಬಿನ್‌ನಲ್ಲಿ ಒಟ್ಟಿಗೆ ಕುಳಿತಿದ್ದಾಗ ಟ್ರಂಪ್ ಅವರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಲೀಡ್ಸ್ ಆರೋಪಿಸಿದ್ದರು. 2016ರ ಅಧ್ಯಕ್ಷೀಯ ಪ್ರಚಾರದ ಸಮಯದಲ್ಲಿ ಟ್ರಂಪ್ ವಿರುದ್ಧ ತಮ್ಮ ಮೊದಲ ಸಾರ್ವಜನಿಕ ಆರೋಪಗಳನ್ನು ಮಾಡಿದ್ದರು.
ಟ್ರಂಪ್‌ಗೆ ಮತ ಹಾಕಬೇಡಿ ಎಂದು ಜೆಸ್ಸಿಕಾ ಲೀಡ್ಸ್ ಅಮೆರಿಕನ್ನರನ್ನು ಒತ್ತಾಯಿಸುತ್ತಲೇ ಇದ್ದಾರೆ. ಈ ಬಗ್ಗೆ ಮತದಾರರಿಗೆ ನೆನಪಿಸುವುದು ಮುಖ್ಯ ಎಂದು ನಾನು ನಂಬುತ್ತೇನೆ ಎನ್ನುತ್ತಾರೆ. ಫ್ಲೈಟ್‌ನಲ್ಲಿ ಅವರು ನನ್ನನ್ನು ಹಿಡಿದು ಚುಂಬಿಸಲು ಪ್ರಾರಂಭಿಸಿದರು. ಸ್ಕರ್ಟ್ ಎತ್ತಲು ಮುಂದಾದಾಗ ನಾನು ಸೀಟು ಬಿಟ್ಟು ಓಡಿ ಹೋಗಿರುವುದಾಗಿ ಲೀಡ್ಸ್ ಹೇಳಿದ್ದಾರೆ.
Physical Harassment: ಐಎಎಫ್ ವಿಂಗ್ ಕಮಾಂಡರ್‌ನಿಂದ ಅತ್ಯಾಚಾರ; ಮಹಿಳಾ ಅಧಿಕಾರಿಯಿಂದ ದೂರು
ಅಧ್ಯಕ್ಷೀಯ ಚರ್ಚೆಯ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದರು. 2024ರ ಚುನಾವಣೆಗೆ ಮುಂಚಿತವಾಗಿ ಟ್ರಂಪ್‌ಗೆ ಬೆಂಬಲ ನೀಡದಂತೆ ಅಮೆರಿಕನ್ನರಿಗೆ ಮನವಿ ಮಾಡಿರುವ ಲೀಡ್ಸ್ , ನಾವು ಈ ವ್ಯಕ್ತಿಯನ್ನು ಶ್ವೇತಭವನಕ್ಕೆ ಮರಳಿ ತರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.