ಹದಿನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಉಳಿದವುಗಳಿಗಾಗಿ ಶೋಧ ಮುಂದುವರಿದಿದೆ. ಹವಾಮಾನವು ತುಂಬಾ ಕೆಟ್ಟದಾಗಿದೆ. ಬೇರೆ ಯಾವುದೇ ವಿಮಾನ ಹಾರಾಟವು ಸಾಧ್ಯವಾಗಿಲ್ಲ. ವಾಯುವ್ಯ ನೇಪಾಳದ ಮಸ್ಟಾಂಗ್ ಜಿಲ್ಲೆಯ ತಾಸಾಂಗ್ ನ ಸಾನೊ ಸ್ವಾರೆ ಭೀರ್ ಎಂಬಲ್ಲಿ 14,500 ಅಡಿ ಎತ್ತರ ದಲ್ಲಿ ವಿಮಾನ ಕಣ್ಮರೆಯಾದ ಸುಮಾರು 20 ಗಂಟೆಗಳ ನಂತರ ಅಪಘಾತದ ಸ್ಥಳ ಪತ್ತೆಯಾಗಿದೆ.
ತಾರಾ ಏರ್ ನಿರ್ವಹಿಸುತ್ತಿರುವ ಟರ್ಬೋಪ್ರೊಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ಪ್ರವಾಸಿ ನಗರವಾದ ಪೋಖರಾ ದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಸಂಪರ್ಕವನ್ನು ಕಳೆದುಕೊಂಡಿತ್ತು. ಕೆನಡಾ ನಿರ್ಮಿತ ವಿಮಾನವು ಪೋಖರಾ ನಗರದಿಂದ ಮಧ್ಯ ನೇಪಾಳದ ಜನಪ್ರಿಯ ಪ್ರವಾಸಿ ಪಟ್ಟಣವಾದ ಜೋಮ್ಸಮ್ ಗೆ ಹಾರುತ್ತಿತ್ತು.