Monday, 30th December 2024

Plane crash: 180 ಪ್ರಯಾಣಿಕರಿದ್ದ ವಿಮಾನ ಪತನ 47 ಮಂದಿ ದುರ್ಮರಣ

Plane crash

ಸಿಯೋಲ್‌: ದಕ್ಷಿಣ ಕೊರಿಯಾದ (South Korea) ಮುವಾನ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಭಾನುವಾರ 180 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಲ್ಯಾಂಡಿಂಗ್‌ ವೇಳೆ ಬೆಂಕಿ ಹತ್ತಿಕೊಂಡು ಪತನಗೊಂಡಿದೆ. ವಿಮಾನದಲ್ಲಿದ್ದ ಕನಿಷ್ಟ 47 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿಮಾನವು ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿತ್ತು (Plane crash)

ಜೆಜು ಏರ್ ವಿಮಾನವು 175 ಪ್ರಯಾಣಿಕರು ಮತ್ತು ಆರು ಪೈಲೆಟ್‌ಗಳನ್ನು ಹೊತ್ತೊಯ್ಯುತ್ತಿತ್ತು. ಲ್ಯಾಂಡಿಂಗ್ ಗೇರ್‌ ಸಮಸ್ಯೆಯಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಲ್ಯಾಂಡಿಂಗ್ ವಿಫಲವಾದ ಬಳಿಕ ವಿಮಾನವು ನಿಲ್ದಾಣದ ತಡೆಗೋಡೆಗೆ ಅಪ್ಪಳಿಸಿದೆ. ಇದರಿಂದ ದೊಡ್ಡ ಸ್ಫೋಟ ಸಂಭವಿಸಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪಘಾತವಾದಾಗ 27 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ನಂತರ 47 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆ ಇನ್ನೂ ಏರಬಹುದು ಎಂದು ಶಂಕಿಸಲಾಗಿದೆ.

ಕಳೆದ ವಾರ ಕಝಾಕಿಸ್ತಾನ್‌ನ ಅಕ್ಟೌ ಬಳಿ ಸಂಭವಿಸಿದ ಅಜೆರ್‌ಬೈಜಾನ್ ಏರ್‌ಲೈನ್ ವಿಮಾನ ಅಪಘಾತದ ಬೆನ್ನಲ್ಲೇ ಈ ಘಟನೆ ನಡೆದಿದೆ. ಸುಮಾರು 72 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಏಕಾಏಕಿ ಅಕಟು ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ. ಕಝಾಕಿಸ್ತಾನದ ಅಕ್ಟೌ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನವು ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು. ಆದರೆ ಗ್ರೋಜಿಯಲ್ಲಿ ಅತಿಯಾದ ಮಂಜು ಆವರಿಸಿದ ಮಾರ್ಗವನ್ನು ಬದಲಾಯಿಸಲಾಯಿತು. ವಿಮಾನವನ್ನು ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಲ್ಯಾಂಡಿಂಗ್ ಸಾಧ್ಯವಾಗಿಲ್ಲ. ನೇರವಾಗಿ ವಿಮಾನ ನೆಲಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನ ಪತನಗೊಂಡಿದೆ.

ಈ ಸುದ್ದಿಯನ್ನೂ ಓದಿ : Kazakhstan plane crash: ಕಜಕಿಸ್ತಾನದ ವಿಮಾನ ಪತನಕ್ಕೂ ಮುನ್ನ ಏನಾಗಿತ್ತು? ವಿಡಿಯೋ ವೈರಲ್‌