Wednesday, 1st January 2025

Plane Crash : ವಿಮಾನ ಪತನಕ್ಕೂ ಮೊದಲಿನ ವಿಡಿಯೋ ವೈರಲ್‌! ಅಷ್ಟಕ್ಕೂ ಆಗಿದ್ದೇನು ಅಲ್ಲಿ ?

Plane Crash

ಸಿಯೋಲ್‌ : ದಕ್ಷಿಣ ಕೊರಿಯಾದ (South Korea) ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ವಿಮಾನ ದುರಂತದ ಸಾವಿನ ಸಂಖ್ಯೆ 179ಕ್ಕೆ ಏರಿಕೆ ಆಗಿದೆ. ಭೀಕರ ದುರ್ಘಟನೆಯಲ್ಲಿ ಕೇವಲ ಇಬ್ಬರೇ ಬದುಕುಳಿದಿದ್ದಾರೆ. ವಿಮಾನವು ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿದ್ದ ವೇಳೆ ಲ್ಯಾಂಡಿಂಗ್‌ ವೇಳೆ ಬೆಂಕಿ ಹತ್ತಿಕೊಂಡು ಪತನಗೊಂಡಿದೆ ಎಂದು ಹೇಳಲಾಗಿದೆ. (Plane Crash) ಇದೀಗ ಅಪಘಾತಕ್ಕೂ ಮೊದಲಿನ ವಿಡಿಯೋ ಒಂದು ವೈರಲ್‌ ಆಗಿದೆ.

ಜೆಜು ಏರ್ ವಿಮಾನವು 180 ಕ್ಕೂ ಅಧಿಕ ಪ್ರಯಾಣಿಕರು ಮತ್ತು ಆರು ಪೈಲೆಟ್‌ಗಳನ್ನು ಹೊತ್ತೊಯ್ಯುತ್ತಿತ್ತು. ಲ್ಯಾಂಡಿಂಗ್ ಗೇರ್‌ ಸಮಸ್ಯೆಯಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಜೆಟ್‌ನ ಲ್ಯಾಂಡಿಂಗ್ ಗೇರ್‌ನಲ್ಲಿ ಅಸಮರ್ಪಕ ಕಾರ್ಯದ ಹಿಂದೆ ಹಕ್ಕಿ ಡಿಕ್ಕಿ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಅಪಘಾತದ ದೃಶ್ಯಗಳು ಅವಳಿ-ಎಂಜಿನ್ ವಿಮಾನವು ಸ್ಪಷ್ಟವಾದ ಲ್ಯಾಂಡಿಂಗ್ ಗೇರ್ ಇಲ್ಲದೆ ಮುವಾನ್‌ನಲ್ಲಿ ಇಳಿಯುವುದನ್ನು ತೋರಿಸಿದೆ. ವಿಮಾನದಿಂದ ಬೆಂಕಿಯಂತಹ ಉಂಡೆ ಹೊರಹೊಮ್ಮುವುದನ್ನು ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.

ಸದ್ಯ ದಕ್ಷಿಣ ಕೊರಿಯಾದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೋಕ್ ಅವರನ್ನು ನೇಮಕ ಮಾಡಲಾಗಿದೆ.  ಪ್ರಯಾಣಿಕರ ಜೀವ ಉಳಿಸುವುದು ತಮ್ಮ ತುರ್ತು ಮತ್ತು ಪ್ರಾಥಮಿಕ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. “ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಏಜೆನ್ಸಿಗಳು ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.

2005 ರಲ್ಲಿ ಸ್ಥಾಪಿಸಲಾದ ದಕ್ಷಿಣ ಕೊರಿಯಾದ ಅತಿದೊಡ್ಡ ಕಡಿಮೆ-ವೆಚ್ಚದ ವಾಹಕಗಳಲ್ಲಿ ಒಂದಾದ ಜೆಜು ಏರ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಪಘಾತಕ್ಕೆ ಒಳಗಾಗಿದೆ. ಕಳೆದೊಂದು ವಾರದಲ್ಲಿ ಇದು ಎರಡನೇ ವಿಮಾನ ದುರಂತವಾಗಿದೆ. ಬುಧವಾರ ಕಝಕಿಸ್ತಾನದಲ್ಲಿ ವಿಮಾನ ದುರಂತವೊಂದು ಸಂಭವಿಸಿದ್ದು, 38 ಜನ ಅಸುನೀಗಿದ್ದರು.

ಈ ಸುದ್ದಿಯನ್ನೂ ಓದಿ : Kazakhstan plane crash: ಕಜಕಿಸ್ತಾನದ ವಿಮಾನ ಪತನಕ್ಕೂ ಮುನ್ನ ಏನಾಗಿತ್ತು? ವಿಡಿಯೋ ವೈರಲ್‌