Modi-Trump Meeting: ಭಾರತ-ಅಮೆರಿಕ ಸಂಬಂಧಕ್ಕೆ ಮೋದಿ ಸಮೀಕರಣ; MAGA+MIGA=MEGA ಏನಿದರ ಅರ್ಥ?
ಗುರುವಾರ ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಟ್ರಂಪ್ ಅವರ ಪ್ರಸಿದ್ಧ ಘೋಷಣೆಯಾದ 'ಮೇಕ್ ಅಮೆರಿಕ ಗ್ರೇಟ್ ಎಗೇನ್' ನಿಂದ ಪ್ರೇರಿತರಾಗಿ ಮೇಕ್ ಇಂಡಿಯಾ ಗ್ರೇಟ್ ಎಗೇನ್' ಬಗ್ಗೆ ಮಾತನಾಡಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೋದಿ-ಟ್ರಂಪ್

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಅಮೆರಿಕ ಭೇಟಿಯಲ್ಲಿದ್ದು, ಅಧ್ಯಕ್ಷ ಟ್ರಂಪ್ ಅವರ ಜೊತೆ ಮಹತ್ವದ ಮಾತಕತೆ ನಡೆಸಿದ್ದಾರೆ.(Modi-Trump Meeting) ಗುರುವಾರ ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಟ್ರಂಪ್ ಅವರ ಪ್ರಸಿದ್ಧ ಘೋಷಣೆಯಾದ 'ಮೇಕ್ ಅಮೆರಿಕ ಗ್ರೇಟ್ ಎಗೇನ್' (MAGA) ನಿಂದ ಪ್ರೇರಿತರಾಗಿ ಮೇಕ್ ಇಂಡಿಯಾ ಗ್ರೇಟ್ ಎಗೇನ್' (MIGA) ಬಗ್ಗೆ ಮಾತನಾಡಿದ್ದಾರೆ. MAGA' ಮತ್ತು 'MIGA' ಜಂಟಿ ದೃಷ್ಟಿಕೋನವು ಒಂದು ಮೆಗಾ (MEGA) ಪಾಲುದಾರಿಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಮೋದಿ ಅಧ್ಯಕ್ಷ ಟ್ರಂಪ್ ಅವರ 'ಮಗಾ - ಅಮೆರಿಕವನ್ನು ಮತ್ತೆ ಶ್ರೇಷ್ಠರನ್ನಾಗಿ ಮಾಡಿ' ಎಂಬ ಧ್ಯೇಯವಾಕ್ಯದ ಬಗ್ಗೆ ಅಮೆರಿಕದ ಜನರಿಗೆ ಚೆನ್ನಾಗಿ ತಿಳಿದಿದೆ. ಭಾರತದ ಜನರು ಕೂಡ ಪರಂಪರೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುತ್ತಿದ್ದಾರೆ. 2047 ರ ಹೊತ್ತಿಗೆ ವಿಕ್ಷಿತ್ ಭಾರತ್ ದೃಢ ಸಂಕಲ್ಪದೊಂದಿಗೆ ಮುಂದುವರಿಯುತ್ತಿದ್ದಾರೆ. ಅಮೆರಿಕದ ಭಾಷೆಯಲ್ಲಿ, ಇದು ಮೇಕ್ ಇಂಡಿಯಾ ಗ್ರೇಟ್ ಅಗೈನ್ - ಮಿಗಾ. ಅಮೆರಿಕ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಿದಾಗ, ಈ ಮಾಗಾ ಪ್ಲಸ್ ಮಿಗಾ 'ಸಮೃದ್ಧಿಗಾಗಿ ಮೆಗಾ ಪಾಲುದಾರಿಕೆ'ಯಾಗುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.
Make America Great Again (MAGA) + Make India Great Again (MIGA) = MEGA Partnership for Prosperity 🇮🇳🇺🇸 pic.twitter.com/lGBWa8fPRJ
— Piyush Goyal (@PiyushGoyal) February 13, 2025
2030 ರ ವೇಳೆಗೆ 500 ಶತಕೋಟಿ ಯುಎಸ್ ಡಾಲರ್ ವ್ಯಾಪಾರದ ಗುರಿ
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಅವರು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 500 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಗುರಿಯನ್ನು ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿದ ಮೋದಿ ಇಂದು, ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ, 2030 ರ ವೇಳೆಗೆ 500 ಶತಕೋಟಿ ಡಾಲರ್ ತಲುಪುತ್ತೇವೆ ಎಂದು ಹೇಳಿದ್ದಾರೆ. ಭಾರತದ ಇಂಧನ ಭದ್ರತೆ ಮತ್ತು ಇಂಧನ ಮೂಲಸೌಕರ್ಯದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮಾತನಾಡಿದರು. ಪರಮಾಣು ಇಂಧನ ಸಹಯೋಗದ ಬಗ್ಗೆ, ವಿಶೇಷವಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಬಗ್ಗೆ ಅವರು ಮಾತುಕತೆ ನಡೆಸಿದ್ದಾರೆ. ಭಾರತದ ರಕ್ಷಣಾ ಸನ್ನದ್ಧತೆಯಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸುತ್ತದೆ. ಮುಂಬರುವ ದಿನಗಳಲ್ಲಿ, ಹೊಸ ತಂತ್ರಜ್ಞಾನ ಮತ್ತು ಉಪಕರಣಗಳು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ" ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Modi In US : ಬ್ಲೇರ್ ಹೌಸ್‌ನಲ್ಲಿ ಎಲಾನ್ ಮಸ್ಕ್ , ವಿವೇಕ್ ರಾಮಸ್ವಾಮಿಯನ್ನು ಭೇಟಿ ಮಾಡಿದ ಮೋದಿ
ಅಮೆರಿಕ-ಭಾರತ ವ್ಯಾಪಾರ ಒಪ್ಪಂದ
ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ಒಟ್ಟಾರೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿವೆ ಎಂದು ಪ್ರಧಾನಿ ಮೋದಿ ದೃಢಪಡಿಸಿದ್ದಾರೆ. ಇನ್ನು ಟ್ರಂಪ್ ಮಾತನಾಡಿ ಭಾರತಕ್ಕೆ ಎಫ್ -35 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಒದಗಿಸಲು ನಾವು ದಾರಿ ಮಾಡಿಕೊಡುತ್ತಿದ್ದೇವೆ. ಎಫ್ 35 ಜೆಟ್‌ಗಳನ್ನು ವಿಶ್ವದ ಅತ್ಯಂತ ಮಾರಕ, ಬದುಕುಳಿಯಬಹುದಾದ ಮತ್ತು ಸಂಪರ್ಕಿತ ಯುದ್ಧ ವಿಮಾನಗಳು ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತದ ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ಭಾರತ ಮತ್ತು ಅಮೆರಿಕ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.