Thursday, 12th December 2024

ಅಫ್ಘಾನಿಸ್ತಾನ: ರಸ್ತೆ ಬದಿಯ ಬಾಂಬ್ ಸಿಡಿದು ಐದು ಮಂದಿ ಸಾವು

ಆಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ ಶುಕ್ರವಾರ ರಸ್ತೆ ಬದಿಯ ಬಾಂಬ್‌ಗಳು ಸಿಡಿದು ಕನಿಷ್ಠ ಐದು ನಾಗರಿಕರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ.

ಕೊಲ್ಲಲ್ಪಟ್ಟ ಐವರು ಪ್ರಾಂತ್ಯದ ರಾಜಧಾನಿ ಲಷ್ಕರ್ ಗಹ್ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ವರದಿಯಾಗಿದೆ.

ಪ್ರತ್ಯೇಕ ರಸ್ತೆಬದಿಯ ಬಾಂಬ್ ದಾಳಿಯಲ್ಲಿ ಮಿನಿವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಹಿಳೆಯರು ಗಾಯಗೊಂಡಿದ್ದಾರೆ. ತಾಲಿಬಾನ್ ಮತ್ತು ಅಫಘಾನ್ ಸರ್ಕಾರದ ನಡುವಿನ ಕತಾರ್ನಲ್ಲಿ ಶಾಂತಿ ಮಾತುಕತೆಗಳು ಸ್ಥಗಿತಗೊಂಡಿದ್ದರಿಂದ ಅಫ್ಘಾನಿ ಸ್ತಾನದಲ್ಲಿ ದೇಶಾದ್ಯಂತ ಬಾಂಬ್ ಸ್ಫೋಟಗಳು, ಉದ್ದೇಶಿತ ಕೊಲೆಗಳು ಮತ್ತು ಹಿಂಸಾಚಾರ ಹೆಚ್ಚಿದೆ.

ಪೂರ್ವ ನಂಗರ್ಹಾರ್ ಪ್ರಾಂತ್ಯದಲ್ಲಿ ಪೊಲೀಸ್ ಮಹಿಳೆಯೊಬ್ಬಳ ಹತ್ಯೆಯ ಜವಾಬ್ದಾರಿಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily