ಮಾಸ್ಕೋ: ರಷ್ಯಾದ ಪೂರ್ವ ಪ್ರದೇಶದಲ್ಲಿ 28 ಜನರನ್ನು ಹೊತ್ತ ಪ್ರಯಾಣಿಕರ ವಿಮಾನ ಸಂಪರ್ಕ ಕಳೆದುಕೊಂಡಿದೆ.
ಎಎನ್ -26 ವಿಮಾನವು ಕಮ್ಚಟ್ಕಾ ಪೆನಿನ್ಸುಲಾದ ಪೆಟ್ರೊಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯಿಂದ ಪಲಾನಾಗೆ ಹಾರಾಟ ನಡೆಸುತ್ತಿದ್ದಾಗ ನಿಗದಿತ ಕರೆ ಮಾಡಲಿಲ್ಲ. ವಿಮಾನ ಇಳಿಯಲು ಪ್ರಯತ್ನಿಸುತ್ತಿದ್ದಾಗ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕವನ್ನು ಕಳೆದು ಕೊಂಡಿತು ಎಂದು ವರದಿಯಾಗಿದೆ.
ವಿಮಾನದಲ್ಲಿ ಆರು ಸಿಬ್ಬಂದಿಗಳು ಸೇರಿದಂತೆ 28 ಮಂದಿ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರಲ್ಲಿ ಒಬ್ಬರು ಅಥವಾ ಇಬ್ಬರು ಮಕ್ಕಳಿದ್ದಾರೆ ಎಂದು ವರದಿ ತಿಳಿಸಿದೆ. ಶೋಧಕಾರ್ಯ ಆರಂಭಿಸಲಾಗಿದ್ದು ಇದಕ್ಕೆ ಎರಡು ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದ್ದು, ರಕ್ಷಣಾ ಕಾರ್ಯಕರ್ತರು ಸರ್ವಸನ್ನದ್ದ ರಾಗಿದ್ದಾರೆ.
ವಿಮಾನವು ಭೂ ಸ್ಪರ್ಶ ಮಾಡುವ ಪ್ರಯತ್ನದಲ್ಲಿದ್ದಾಗ ವಾಯು ಸಂಚಾರ ನಿಯಂತ್ರಣ ವಿಭಾಗದೊಂದಿಗೆ ಸಂಪರ್ಕವನ್ನು ಕಳೆದು ಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.