Sunday, 15th December 2024

ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ವನ್ನು ಅಮಾನತು ಮಾಡಿ ವಿಶ್ವ ಸಂಸ್ಥೆಯ ಮಹಾ ಸಭೆಯು ಆದೇಶ ಹೊರಡಿಸಿದೆ. ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡುವ ನಿರ್ಣಯವನ್ನು ಮಹಾ ಸಭೆಯಲ್ಲಿ ಮತಕ್ಕೆ ಹಾಕಲಾಗಿತ್ತು.

ಉಕ್ರೇನ್‌ನ ಬುಕಾ ನಗರದಿಂದ ವಾಪಸ್ಸಾಗುವಾಗ ರಷ್ಯಾ ಸೇನೆಯು ನೂರಾರು ನಾಗರಿಕರನ್ನು ಕೊಂದು ಹಾಕಿದೆ ಎಂದು ಉಕ್ರೇನ್‌ ಆರೋಪಿಸಿತ್ತು. ಉಕ್ರೇನ್‌ ನಲ್ಲಿ ರಷ್ಯಾ ಎಸಗಿರಬಹುದಾದ ಯುದ್ಧಾಪರಾಧಗಳ ಕಾರಣ ಮಾನವ ಹಕ್ಕುಗಳ ಮಂಡಳಿಯಿಂದ ಅದನ್ನು ಅಮಾನತು ಮಾಡುವ ನಿರ್ಣಯವನ್ನು ಮಹಾ ಸಭೆ ಮಂಡಿಸಿತ್ತು.

193 ಸದಸ್ಯ ರಾಷ್ಟ್ರಗಳ ಮಹಾ ಸಭೆಯಲ್ಲಿ ಈ ನಿರ್ಣಯವನ್ನು ಗುರುವಾರ ಮತಕ್ಕೆ ಹಾಕಲಾಗಿತ್ತು. ನಿರ್ಣಯದ ಪರವಾಗಿ 93 ದೇಶಗಳು ಮತ ಹಾಕಿದವು. ನಿರ್ಣಯದ ವಿರುದ್ಧವಾಗಿ 24 ದೇಶಗಳು ಮತ ಹಾಕಿದವು. ಭಾರತವೂ ಸೇರಿ 58 ದೇಶಗಳು ಮತದಾನ ದಿಂದ ದೂರ ಉಳಿದವು. 58 ದೇಶಗಳು ಮತದಾನದಿಂದ ದೂರ ಉಳಿದ ಕಾರಣ, ನಿರ್ಣಯದಲ್ಲಿದ್ದ ಸದಸ್ಯ ದೇಶಗಳ ಸಂಖ್ಯೆ 117ಕ್ಕೆ ಕುಸಿದಿತ್ತು. 93 ದೇಶಗಳು ಪರವಾಗಿ ಮತಹಾಕಿದ ಕಾರಣ, ನಿರ್ಣಯವು ಅಂಗೀಕಾರವಾಯಿತು.

58 ದೇಶಗಳು ಮತದಾನದಿಂದ ದೂರ ಉಳಿದುದ್ದರ ಬಗ್ಗೆ ರಷ್ಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.