Monday, 25th November 2024

ರಷ್ಯಾದ ಮೌಂಟ್ ಶಿವೆಲುಚ್ ಜ್ವಾಲಾಮುಖಿ ಸ್ಫೋಟ

ರಷ್ಯಾ: ದೂರದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ರಷ್ಯಾದ ಮೌಂಟ್ ಶಿವೆಲುಚ್ ಜ್ವಾಲಾಮುಖಿ ಮಂಗಳವಾರ ಸ್ಫೋಟ ಗೊಂಡಿದೆ.

ಜ್ವಾಲಾಮುಖಿಯ ಸ್ಫೋಟದಿಂದ ಅದರ ಬೂದಿಯು 10 ಕಿಲೋಮೀಟರ್‌ಗಳಷ್ಟು ಎತ್ತರಕ್ಕೆ ಆವರಿಸಿಕೊಂಡಿದೆ.

ಇದು ವಾಯು ಸಂಚಾರಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಕಮ್ಚಟ್ಕಾ ಜ್ವಾಲಾ ಮುಖಿ ಸ್ಫೋಟ ಪ್ರತಿಕ್ರಿಯೆ ತಂಡ ತಿಳಿಸಿದೆ.

ಏವಿಯೇಷನ್‌ಗಾಗಿ ಕೋಡ್ ಕೆಂಪು ಜ್ವಾಲಾಮುಖಿ ವೀಕ್ಷಣಾಲಯದ ಸೂಚನೆಯನ್ನು ನೀಡಿದ ತಂಡವು ‘ದೊಡ್ಡ ಬೂದಿ ಮೋಡ’ ಜ್ವಾಲಾಮುಖಿಯು ಪಶ್ಚಿಮಕ್ಕೆ ಚಲಿಸುತ್ತಿದೆ ಎಂದು ಗಮನಿಸಿದೆ. 15 ಕಿಲೋಮೀಟರ್‌ಗಳಷ್ಟು ಎತ್ತರದ ಬೂದಿ ಸ್ಫೋಟಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು ಮತ್ತು ‘ಸಾಗುತ್ತಿರುವ ಚಟುವಟಿಕೆಯು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಬಹುದು’ ಎಂದು ಸೂಚನೆ ಹೇಳಿದೆ.