Sunday, 8th September 2024

ರಷ್ಯಾ -ಉಕ್ರೇನ್ ಯುದ್ಧ ಬೇಗ ಕೊನೆಗೊಳ್ಳಬೇಕು: ಪುಟಿನ್

ಮಾಸ್ಕೋ: ರಷ್ಯಾ -ಉಕ್ರೇನ್ ಯುದ್ಧವು ಸಾಧ್ಯವಾದಷ್ಟು ಬೇಗ ಕೊನೆಗೊಳ್ಳಬೇಕು. ಅದ ಕ್ಕಾಗಿ ತ್ವರಿತ ಪರಿಹಾರದ ಗುರಿಯನ್ನ ಹೊಂದಲಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿ ದ್ದಾರೆ.

ಆದರೆ, ಇದಕ್ಕಾಗಿ, ರಾಜತಾಂತ್ರಿಕ ಪರಿಹಾರ ಕಂಡುಹಿಡಿಯಬೇಕಾಗಿದೆ. ಇನ್ನು ಸಂಘರ್ಷ ವನ್ನ ಕೊನೆಗೊಳಿಸುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಪ್ರಯತ್ನಿಸುವುದನ್ನ ಮುಂದುವರಿಸುತ್ತೇವೆ. ಆದ್ದರಿಂದ ಶೀಘ್ರವೇ ಉತ್ತಮ ಸಿಗು ವುದು’ ಎಂದರು.

ಆದಾಗ್ಯೂ, ಪುಟಿನ್ ಅವರ ಹೇಳಿಕೆಗಳು ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳಿಂದ ಅನುಮಾನಗಳನ್ನ ಹುಟ್ಟುಹಾಕಿವೆ. ಉಕ್ರೇನ್ನಲ್ಲಿನ ಸಂಘರ್ಷವನ್ನು ಶೀಘ್ರವಾಗಿ ಕೊನೆ ಗೊಳಿಸುವುದು ಅನಿವಾರ್ಯವಾಗಿ ರಾಜತಾಂತ್ರಿಕ ಪರಿಹಾರವನ್ನ ಒಳಗೊಂಡಿ ರುತ್ತದೆ ಎಂದು ರಷ್ಯಾ ಅಧ್ಯಕ್ಷರು ಹೇಳಿದರು.

ಅಂದ ಹಾಗೆ, ಇತ್ತೀಚಿಗಷ್ಟೇ ಪುಟಿನ್ ಜೊತೆ ಮಾತನಾಡಿದ್ದ ಪ್ರಧಾನಿ ಮೋದಿ, ಯುದ್ಧ ನಿಲ್ಲಿಸುವಂತೆ ಪುಟಿನ್‌ಗೆ ಮನವಿ ಮಾಡಿದ್ದರು. ಯುದ್ಧದಿಂದ ಪರಿಹಾರ ಅಸಾಧ್ಯ, ಶಾಂತಿಯುತ ಮಾತುಕತೆಗೆ ಸಲಹೆ ನೀಡಿದ್ದು, ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ಇದರ ಬೆನ್ನೆಲ್ಲೇ ಪುಟಿನ್ ರಾಜತಾಂತ್ರಿಕ ಮಾತುಕತಗೆ ಒಲವು ತೋರಿದ್ದಾರೆ.

Read E-Paper click here

error: Content is protected !!