Friday, 22nd November 2024

Russian Chef: ಪುಟಿನ್‌ ವಿರುದ್ಧ ಪೋಸ್ಟ್‌ ಮಾಡಿದ್ದ ರಷ್ಯಾದ ಶೆಫ್‌ ಶವವಾಗಿ ಪತ್ತೆ; ಈ ಸಾವಿನ ಹಿಂದೆ ಇದ್ಯಾ ರಣಭೀಕರ ಮಿಸ್ಟ್ರಿ?

Russian Chef

ಮಾಸ್ಕೊ: ರಷ್ಯಾದ ಅಧ್ಯಕ್ಷ (Vladimir Putin) ಅವರನ್ನು ಬಹಿರಂಗವಾಗಿ ಟೀಕಿಸಿದ್ದ ಇಂಗ್ಲೆಂಡ್ ಮೂಲದ ದೂರದರ್ಶನ  ಬಾಣಸಿಗನೊಬ್ಬ (Russian Chef) ಸೆರ್ಬಿಯಾದ ಹೊಟೇಲ್‌ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಲಂಡನ್‌ನ ಈ ಶೆಫ್‌  52 ವರ್ಷದ ಅಲೆಕ್ಸಿ ಝಿಮಿನ್ ರಷ್ಯಾದ ಬ್ರಾಡ್‌ಕಾಸ್ಟರ್ ಎನ್‌ಟಿವಿ ಯಲ್ಲಿ ಜನಪ್ರಿಯ ಅಡುಗೆ ಕಾರ್ಯಕ್ರಮದ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಉಕ್ರೇನ್‌ ಹಾಗೂ ರಷ್ಯಾದ (Ukraine- Russia War)ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆಅವರು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿ ರಷ್ಯಾದ ಅಧ್ಯಕ್ಷ ಪುಟಿನ್‌ ವಿರೋಧಿಸುವುದಾಗಿ ಬರೆದುಕೊಂಡಿದ್ದರು. ನಂತರ ಅವರು ನಡೆಸುತ್ತಿದ್ದ ದೂರದರ್ಶನ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ. ಇದೀಗ ಆತ ನಿಗೂಢವಾಗಿ ಮೃತ ಪಟ್ಟಿದ್ದು ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಟನ್ ಆಂಗ್ಲೋಮೇನಿಯಾ ಬಗ್ಗೆ ತಮ್ಮ ಹೊಸ ಪುಸ್ತಕವನ್ನು ಪ್ರಚಾರ ಮಾಡಲು ಸರ್ಬಿಯಾದ ರಾಜಧಾನಿಗೆ ಪ್ರಯಾಣಿಸಿದ್ದು, ಬೆಲ್‌ಗ್ರೇಡ್‌ನ ಹೋಟೆಲ್ ಕೋಣೆಯಲ್ಲಿ ಝಿಮಿನ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಶವ ಪರೀಕ್ಷೆ ನಡೆಸಲಾಗುತ್ತಿದೆ, ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಸರ್ಬಿಯಾ ಪೊಲೀಸರು ತಿಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿರುವ ಝಿಮಿನ್ ಅವರ ರೆಸ್ಟೋರೆಂಟ್ ಕೂಡ ಅವರ ಸಾವನ್ನು ಇನ್‌ಸ್ಟಾಗ್ರಾಂನಲ್ಲಿ ದೃಢಪಡಿಸಿದೆ.  ಝಿಮಿನ್ ಅವರ ಬಗ್ಗೆ ಬರೆದು “ನಮಗೆ, ಅಲೆಕ್ಸಿ ಝಿಮಿನ್ ಅವರು ಸಹೋದ್ಯೋಗಿ ಮಾತ್ರವಲ್ಲದೆ ಸ್ನೇಹಿತರಾಗಿದ್ದರು, ಅವರೊಂದಿಗೆ ನಾವು ಅನೇಕ ಅನುಭವಗಳನ್ನು ಹಂಚಿಕೊಂಡಿದ್ದೇವೆ. ಈ ನೋವಿನ ವಿಷಯವನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಬೇಸರವಾಗುತ್ತದೆ. ಇಡೀ ಝಿಮಾ ತಂಡವು ಅಲೆಕ್ಸಿ ಅವರ ಕುಟುಂಬಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದೆ.

2022 ರಲ್ಲಿ ಯುದ್ಧದ ಆರಂಭದಲ್ಲಿ ಝಿಮಿನ್ ವಿರೋಧಿ ಹೇಳಿಕೆಗಳನ್ನು ಬರೆದಿದ್ದರು. ನಮ್ಮ ಸೈನಿಕರನ್ನು ಕರೆತನ್ನಿ ಯುದ್ಧ ನಿಲ್ಲಿಸಿ ಎಂದು ಪುಟಿನ್‌ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಿದ್ದರು. ಈ ಘಟನೆಯ ನಂತರ ಅವರು ನಡೆಸಿಕೊಡುತ್ತಿದ್ದ ಅಡುಗೆ ಕಾರ್ಯಕ್ರಮವನ್ನು ನಿಲ್ಲಿಸಲಾಗಿತ್ತು. ನಂತರ ಅವರು ಲಂಡನ್‌ಗೆ ಮರಳಿದ್ದರು. ಅದಾದ ನಂತರ ರಷ್ಯಾಗೆ ಮರಳಿರಲಿಲ್ಲ ಎಂದು ವರದಿಯಾಗಿತ್ತು. ಲಂಡನ್‌ನಲ್ಲಿರುವ ತನ್ನ ರೆಸ್ಟೋರೆಂಟ್‌ಗೆ ಹಲವು ಬಾರಿ ಬೆದರಿಕೆ ಕರೆಗಳು ಬಂದಿದ್ದವು ಎಂದು ಅವರು ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇದೀಗ ಅವರು ನಿಗೂಢವಾಗಿ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ: Penalty to Google: ಯೂಟ್ಯೂಬ್ ನಿಷೇಧ: ರಷ್ಯಾ ನ್ಯಾಯಾಲಯದಿಂದ ಗೂಗಲ್‌ಗೆ ಭಾರಿ ದಂಡ