Sunday, 15th December 2024

ರಷ್ಯಾ ವಿಜ್ಞಾನಿಯ ನಿಗೂಢ ಹತ್ಯೆ; ಆರೋಪಿ ಬಂಧನ

ಮಾಸ್ಕೊ: ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರನ್ನು ಅವರದ್ದೇ ಅಪಾರ್ಟ್​​ಮೆಂಟ್​​ನಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾ ಗಿದೆ.

ಬೆಲ್ಟ್​ನಿಂದ ಅವರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. 47 ವರ್ಷ ವಯಸ್ಸಿನ ಬೊಟಿಕೋವ್ ಅವರು ಗಾಮೇಲೆಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಕಾಲಜಿ ಆಯಂಡ್ ಮ್ಯಾಥಮೆಟಿಕ್ಸ್​​ನ ಹಿರಿಯ ಸಂಶೋ ಧಕರಾಗಿದ್ದರು.

ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಕ್ಕಾಗಿ ಆಂಡ್ರೆ ಬೊಟಿಕೋವ್ ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2021ರಲ್ಲಿ ‘ಆರ್ಡರ್ ಆಫ್​ ಮೆರಿಟ್ ಫಾರ್​ ದಿ ಫಾದರ್​​​ಲ್ಯಾಂಡ್’ ಗೌರವ ನೀಡಿ ಗೌರವಿಸಿದ್ದರು.

ಶಂಕಿತ ವ್ಯಕ್ತಿಯು ಸುಮಾರು 29 ವರ್ಷ ವಯಸ್ಸಿನವನಾಗಿದ್ದು, ಬೆಲ್ಟ್​​ನಿಂದ ವಿಜ್ಞಾನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇಬ್ಬರ ನಡುವೆ ಸಂಘರ್ಷ ಇದ್ದಿರಬೇಕು ಎಂದು ಶಂಕಿಸಲಾಗಿದೆ. ಬಂಧಿತ ಯುವಕ ತಪ್ಪೊಪ್ಪಿ ಕೊಂಡಿದ್ದು, ದೋಷಾರೋಪ ಹೊರಿಸಲಾಗಿದೆ. ಆರೋಪಿಯು ಅಪರಾಧ ಹಿನ್ನೆಲೆಯುಳ್ಳವನಾಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.