Sunday, 15th December 2024

ರಷ್ಯಾದ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: ಹತ್ತು ಮಂದಿಗೆ ಗಾಯ

ರಷ್ಯಾ : ಪರ್ಮ್ ಕ್ರೈ ಪ್ರದೇಶದ ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸೋಮವಾರ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 10 ಜನರು ಗಾಯ ಗೊಂಡಿದ್ದಾರೆ ಎಂದು ಆರ್ ಟಿ ನ್ಯೂಸ್ ವರದಿ ಮಾಡಿದೆ.

ವರದಿಗಳ ಪ್ರಕಾರ, ಅಪರಿಚಿತ ವ್ಯಕ್ತಿಯು ಕಟ್ಟಡವೊಂದರಲ್ಲಿ ಗುಂಡು ಹಾರಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ದಾಳಿಕೋರನಿಂದ ತಪ್ಪಿಸಲು ವಿಶ್ವವಿದ್ಯಾಲಯಗಳ ಸಭಾಂಗಣಗಳಿಗೆ ಲಾಕ್ ಮಾಡಿಕೊಂಡರು. ಕೆಲವು ವಿದ್ಯಾರ್ಥಿ ಗಳು ಕಿಟಕಿಗಳಿಂದ ಹೊರಗೆ ಜಿಗಿದರು ಎಂದು ವರದಿಯಾಗಿದೆ.

ಬಂದೂಕುಧಾರಿಯು ‘ಆಘಾತಕಾರಿ’ ಮಾರಕವಲ್ಲದ ಆಯುಧ ಹೊಂದಿದ್ದು, ಬೆಳಿಗ್ಗೆ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದರು. ಅವರನ್ನು ನಂತರ ಬಂಧಿಸಲಾಯಿತು ಎಂದು ತಿಳಿದು ಬಂದಿದೆ.