Wednesday, 4th December 2024

Sophie Rain: ಓನ್ಲಿ ಫ್ಯಾನ್ಸ್ ತಾರೆ ಸೋಫಿ ರೈನ್ ಆದಾಯ ಊಹೆಗೂ ಮೀರಿದ್ದು; ಈ ಅಡಲ್ಟ್‌ ಕಂಟೆಂಟ್ ಕ್ರಿಯೇಟರ್ ಗಳಿಕೆ ಇಷ್ಟೊಂದಾ?!

Sophie Rain

ವಾಷಿಂಗ್ಟನ್‌: ಓನ್ಲಿ ಫ್ಯಾನ್ಸ್ (OnlyFans) ವೆಬ್‍ಸೈಟ್‍ನಲ್ಲಿ ಅದನ್ನು ಹೋಸ್ಟ್ ಮಾಡಲಾಗುವ ಅಡಲ್ಟ್‌ ಕಂಟೆಂಟ್‍ಗೆ ಮಾತ್ರವಲ್ಲದೆ ಕ್ರಿಯೇಟರ್‌ಗಳು ಕೂಡ ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ. ಹಾಗಾಗಿ ಓನ್ಲಿ ಫ್ಯಾನ್ಸ್ ಕಂಟೆಂಟ್ ಕ್ರಿಯೇಟರ್ ಸೋಫಿ ರೈನ್ (Sophie Rain) ಕೇವಲ ಒಂದು ವರ್ಷದಲ್ಲಿ 367 ಕೋಟಿ ರೂ.ಗಳನ್ನು ಗಳಿಸಿದ್ದಾರೆ. ಅವರು ಎಕ್ಸ್ (ಈ ಹಿಂದೆ ಟ್ವಿಟರ್)ನಲ್ಲಿ ತಮ್ಮ ಗಳಿಕೆಯ ಸ್ಕ್ರೀನ್‍ಶಾಟ್‍ ಅನ್ನು  ಹಂಚಿಕೊಂಡಿದ್ದಾರೆ.

20 ವರ್ಷದ ಅಮೆರಿಕದ ಕಂಟೆಂಟ್ ಕ್ರಿಯೇಟರ್ ಸೋಫಿ ರೈನ್ ಪೋಸ್ಟ್‌ ಮಾಡಿದ ಸ್ಕ್ರೀನ್‌ಶಾಟ್‌ನಲ್ಲಿ 2023ರ ನವೆಂಬರ್ 28ರಿಂದ 2024ರ ನವೆಂಬರ್ 28ರವೆಗಿನ ಅವರ ಒಟ್ಟು ಗಳಿಕೆ  367 ಕೋಟಿ ರೂ. ಎಂದು ಕಂಡು ಬಂದಿದೆ. “ಇಲ್ಲಿ ಒಂದು ವರ್ಷ ಕಳೆದಿದ್ದಕ್ಕಾಗಿ ಧನ್ಯವಾದಗಳು” ಎಂಬ ಶೀರ್ಷಿಕೆಯೊಂದಿಗೆ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.  ಸೋಫಿ ರೈನ್ ಓನ್ಲಿ ಫ್ಯಾನ್ಸ್‌ನಲ್ಲಿ 11 ಮಿಲಿಯನ್, ಇನ್‌ಸ್ಟಾಗ್ರಾಮ್‌ನಲ್ಲಿ 5.2 ಮಿಲಿಯನ್ ಮತ್ತು ಎಕ್ಸ್‌ನಲ್ಲಿ 2.5 ಮಿಲಿಯನ್ ಫಾಲೋವರ್ಸ್‍ನ್ನು ಹೊಂದಿದ್ದಾರೆ.

Sophie Rain

ಸೋಫಿ ರೈನ್ ಯಾರು?
ಸೋಫಿ ರೇನ್ ಅಮೆರಿಕಾದ 20 ವರ್ಷದ ಅಡಲ್ಟ್‌ ಕಂಟೆಂಟ್ ಕ್ರಿಯೇಟರ್. 17ನೇ ವಯಸ್ಸಿನಲ್ಲಿ ಅವರು ರೆಸ್ಟೋರೆಂಟ್‍ನಲ್ಲಿ ಕನಿಷ್ಠ ವೇತನವನ್ನು ಪಡೆಯುವ  ವೈಟರ್ ಆಗಿ ಕೆಲಸ ಮಾಡಿದ್ದಾರೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ತನ್ನ 20 ವರ್ಷದ ಸಹೋದರಿ ಸಿಯೆರಾ ಸಹಾಯದಿಂದ ಕಂಟೆಂಟ್ ಕ್ರಿಯೇಟ್ ಮಾಡಲು ಪ್ರಾರಂಭಿಸಿದ ನಂತರ ಅವರು ಖ್ಯಾತಿ ಪಡೆದಿದ್ದಾರೆ.  ಅವರು ದುಡಿದ ಹಣ ಅವರ ಕುಟುಂಬವು 12 ಲಕ್ಷ ರೂ.ಗಿಂತ ಹೆಚ್ಚಿನ ಆಸ್ತಿ ತೆರಿಗೆ ಸಾಲವನ್ನು ತೀರಿಸಲು ಸಹಾಯ ಮಾಡಿದೆ ಎಂಬುದಾಗಿ ತಿಳಿಸಿದ್ದಾರೆ.

ರೈನ್ ಮೂರು ಕಾರುಗಳನ್ನು ಸಹ ಹೊಂದಿದ್ದಾರೆ ಮತ್ತು ಅವರು ಹೊರಗೆ ಹೋದಾಗ ಊಟ ಮತ್ತು ಬಟ್ಟೆಗಳಿಗಾಗಿ ಅದ್ದೂರಿಯಾಗಿ ಖರ್ಚು ಮಾಡುತ್ತಾರೆ. ಆದರೆ  ಅವರು ತಾವು ದುಡಿದ ಹಣದ ಬಗ್ಗೆ ಹೆಚ್ಚು ಖರ್ಚು ಮಾಡದೇ  ಅವರ ಗಳಿಕೆಯ 70% ಅನ್ನು ಫಂಡ್‍ನಲ್ಲಿ ಹೂಡಿಕೆ ಮಾಡುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಸಪ್ನಾ ಚೌಧರಿ ‘ಥೆಕೆ ಆಲಿ ಗಲಿ’ ಮೋಹಕ ನೃತ್ಯಕ್ಕೆ ಅಭಿಮಾನಿಗಳು ಫಿದಾ! ವಿಡಿಯೊ ಇದೆ

ರೈನ್ ಅವರ ಪೋಸ್ಟ್ ನವೆಂಬರ್ 28ರಂದು ಹಂಚಿಕೊಂಡಾಗಿನಿಂದ 14.6 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಅನೇಕರು ತಮ್ಮ ಆಲೋಚನೆಗಳನ್ನು ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ವ್ಯಕ್ತಪಡಿಸಿದ್ದಾರೆ.