Wednesday, 11th December 2024

ದಕ್ಷಿಣ ಮೆಕ್ಸಿಕೊದಲ್ಲಿ ಟ್ರಕ್​ ಅಪಘಾತ: 10 ವಲಸಿಗರ ಸಾವು

ತಪಾಚುಲಾ(ಮೆಕ್ಸಿಕೊ): ಗ್ವಾಟೆಮಾಲಾ ಗಡಿಯ ಸಮೀಪ ದಕ್ಷಿಣ ಮೆಕ್ಸಿಕೊದ ಹೆದ್ದಾರಿಯಲ್ಲಿ ಸರಕು ಸಾಗಣೆ ಟ್ರಕ್ ಅಪಘಾತಕ್ಕೀಡಾಗಿ ಕ್ಯೂಬಾದ 10 ವಲಸಿಗರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಕ್ಯೂಬನ್ ವಲಸಿಗರೆಲ್ಲರೂ ಮಹಿಳೆಯರಾಗಿದ್ದು, ಒಬ್ಬ ಬಾಲಕಿ ಇದರಲ್ಲಿ ಸೇರಿದ್ದಾಳೆ.

ಗ್ವಾಟೆಮಾಲನ್ ಗಡಿಯಿಂದ ಸುಮಾರು 175 ಕಿಲೋಮೀಟರ್ ದೂರದಲ್ಲಿರುವ ಪಿಜಿಜಿಯಾಪಾನ್ ಪಟ್ಟಣದ ಸಮೀಪವಿರುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಚಿಯಾಪಾಸ್ ರಾಜ್ಯದ ನಾಗರಿಕ ರಕ್ಷಣಾ ಕಚೇರಿ ಸ್ಪಷ್ಟನೆ ನೀಡಿದೆ.

ಅಪಘಾತಗೊಂಡ ಟ್ರಕ್​ 27 ವಲಸಿಗರನ್ನು ಹೊತ್ತೊಯ್ಯುತ್ತಿದ್ದು, ಚಾಲಕ ವೇಗವಾಗಿ ವಾಹನ ಚಲಾವಣೆ ಮಾಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಟ್ರಕ್, ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.