Thursday, 12th December 2024

ಮೂರು ಕಡೆ ಆತ್ಮಾಹುತಿ ಬಾಂಬ್ ಸ್ಪೋಟ: 18 ಮಂದಿ ಸಾವು

ಕಾಬೂಲ್: ಅಪಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಇಂದು ಏಕಕಾಲಕ್ಕೆ ‌ಮೂರು ಕಡೆ ಮಾನವ ಆತ್ಮಾಹುತಿ ಬಾಂಬ್ ಸ್ಪೋಟಗೊಂಡು 18 ಮಂದಿ ಮೃತಪಟ್ಟು, ನೂರಾರು ಜನ ಗಾಯಗೊಂಡಿದ್ದಾರೆ.

ಅಮೇರಿಕಾದ ಸೇನಾಪಡೆಗಳನ್ನು ಗುರಿಯಾಗಿಟ್ಟುಕೊಂಡು ಐಸಿಸ್ ಉಗ್ರರು ಬಾಂಬ್ ಸ್ಪೋಟಿಸಿದ್ದಾರೆ ಎನ್ನಲಾಗಿದೆ. ಬೆನ್ನಲ್ಲೇ ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ತುರ್ತು ಸಭೆ ಕರೆದಿದ್ದಾರೆ. ಭಾರತವು ದೇಶ ದೆಲ್ಲೆಡೆ ಪ್ರಮುಖ ‌ಸ್ಥಳಗಳಲ್ಲಿ ತೀವ್ರ ಕಟ್ಡೆಚ್ಚರ ವಹಿಸಿದೆ.

ತಾಲಿಬಾನಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬ್ರಿಟನ್ ಮಾತ್ರವಲ್ಲದೇ, ಅಮೆರಿಕ ಕೂಡ ಕಾಬೂಲ್ ಏರ್‍ಪೋರ್ಟ್‍ನಿಂದ ದೂರ ಇರುವಂತೆ ಎಚ್ಚರಿಸಿತ್ತು. ಈ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆದಿದೆ. ಸ್ಫೋಟದಿಂದಾಗಿ 18 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಮೂವರು ಅಮೆರಿಕದ ಯೋಧರು ಸೇರಿದಂತೆ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾಗಿ ವರದಿಯಾಗಿದೆ.

ಸಾವಿರಾರು ಜನರು ವಿದೇಶಕ್ಕೆ ತೆರಳಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಭಾರೀ ಸಂಖ್ಯೆ ಯಲ್ಲಿ ಜನ ಸೇರುತ್ತಿರುವ ಹಿನ್ನೆಲೆಯಲ್ಲಿ ಭಯ ಹುಟ್ಟಿಸಲು ಉಗ್ರರು ಈ ಬಾಂಬ್ ದಾಳಿ ನಡೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಕ್ಕೂ ಮುನ್ನ ಅಮೆರಿಕ ಮತ್ತು ಬ್ರಿಟನ್ ಸೈನಿಕರ ಮೇಲೆ ಗುಂಡು ಹಾರಾಟ ನಡೆಯಿತು. ಈ ವೇಳೆ ಸೈನಿಕರು ಪ್ರತಿಯಾಗಿ ಗುಂಡು ಹಾರಿಸಿದರು ಎಂದು ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕಾಬೂಲ್​ ವಿಮಾನನಿಲ್ದಾಣದ ಬಳಿ ಸ್ಫೋಟವಾಗುತ್ತಿದ್ದಂತೆ ಈ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಬರೋನ್ ಹೋಟೆಲ್​ ಬಳಿ ಮತ್ತೊಂದು ಸ್ಫೋಟ ಸಂಭವಿಸಿದೆ.