Wednesday, 25th December 2024

Sunita Williams: ಬಾಹ್ಯಾಕಾಶದಲ್ಲಿಯೇ ಸುನಿತಾ ವಿಲಿಯಮ್ಸ್ ಕ್ರಿಸ್ಮಸ್ ಆಚರಣೆ ; ವಿಡಿಯೊ ಹಂಚಿಕೊಂಡ ನಾಸಾ

Sunita Williams

ವಾಷಿಂಗ್ಟನ್‌: ನಾಸಾ (NASA) ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಈ ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ (International Space Station) ಕ್ರಿಸ್ಮಸ್ (Christmas) ಆಚರಿಸಲಿದ್ದಾರೆ. ಸುನಿತಾ ಹಾಗೂ ಅವರ ಸಿಬ್ಬಂದಿ ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಣೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ಸ್ಪೇಸ್‌ಎಕ್ಸ್ ಡ್ರ್ಯಾಗನ್ ಕ್ಯಾಪ್ಸುಲ್‌ ಕ್ರಿಸ್ಮಸ್ ಸಲುವಾಗಿ ಬಾಹ್ಯಾಕಾಶದಲ್ಲಿರುವವರಿಗೆ ಬೇಕಾದ ಅಗತ್ಯ ವಸ್ತು ಹಾಗೂ ಅವರ ಕುಟುಂಬಸ್ಥರು ನೀಡಿದ್ದ ಉಡುಗೊರೆಗಳನ್ನು ಇತ್ತೀಚೆಗೆ ಪೂರೈಕೆ ಮಾಡಿತ್ತು. ಇದಕ್ಕೆ ಕೃತಜ್ಞತೆ ಸಲ್ಲಿಸಿದ ಸುನಿತಾ ಭೂಮಿಯಿಂದ ದೂರವಿದ್ದರೂ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಾಸಾ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಸುನಿತಾ ಹಾಗೂ ಅವರ ಸಂಗಡಿಗರು ಕ್ರಿಸ್ಮಸ್‌ಗಾಗಿ ಸಿದ್ಧತೆ ಮಾಡಿಕೊಂಡಿರುವುದು ಕಾಣಬಹುದಾಗಿದೆ. ಸುನಿತಾ ವಿಲಿಯಮ್ಸ್ ಮಾತನಾಡಿ “ನಾವು ಕ್ರಿಸ್‌ಮಸ್ ರಜಾದಿನಗಳಿಗೆ ತಯಾರಾಗುತ್ತಿದ್ದೇವೆ. ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಮ್ಮ ಕುಟುಂಬದವರೆಲ್ಲರೊಂದಿಗೆ ಅದನ್ನು ಕಳೆಯಲು ಇದು ಉತ್ತಮ ಸಮಯ. ಇಲ್ಲಿ ನಾವು ಏಳು ಮಂದಿ ಇಲ್ಲಿದ್ದೇವೆ ಮತ್ತು ನಾವು ಒಟ್ಟಿಗೆ ಆನಂದಿಸಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ಕ್ರಿಸ್‌ಮಸ್ ಬಗ್ಗೆ ನಾನು ಇಷ್ಟಪಡುವ ವಿಷಯವೆಂದರೆ ತಯಾರಿ, ಕೇವಲ ತಯಾರಾಗುವುದು, ನಿರೀಕ್ಷೆ ಮತ್ತು ರಜಾದಿನಗಳಿಗಾಗಿ ಎಲ್ಲರೂ ಒಟ್ಟಿಗೆ ಸೇರುವುದು” ಎಂದು ಸುನಿತಾ ಹೇಳಿದ್ದಾರೆ. ಗಗನಯಾತ್ರಿಗಳಿಗೆ ಭೂಮಿಯಿಂದ ತಾಜಾ ಪದಾರ್ಥಗಳು ಹಾಗೂ ಶೇಷ ಊಟವನ್ನು ಕಳುಹಿಸಲಾಗಿದೆ. ಹೆಚ್ಚುವರಿಯಾಗಿ, ಬಾಹ್ಯಾಕಾಶದಲ್ಲಿರುವವರಿಗೆ ತಮ್ಮ ಪ್ರೀತಿಪಾತ್ರರನ್ನು ವೀಡಿಯೊ ಕರೆಗಳ ಮೂಲಕ ಸಂಪರ್ಕ ಹೊಂದಲು ವಿಶೇಷವಾದ ವ್ಯವಸ್ಥೆ ಮಾಡಲಾಗಿದೆ. ಅವರು ತಮ್ಮ ಕ್ರಿಸ್ಮಸ್ ಅನುಭವವನ್ನು ಹಂಚಿಕೊಳ್ಳಬಹುದು.

ಬಾಹ್ಯಾಕಾಶದಲ್ಲಿಯೇ ಹುಟ್ಟುಹಬ್ಬ ಆಚರಣೆ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಎಂಟು ದಿನಗಳ ಭೇಟಿಗಾಗಿ ತೆರಳಿ, ಈಗ ಫೆಬ್ರವರಿವರೆಗೂ ಅಲ್ಲಿ ಕಾಲ ಕಳೆಯಬೇಕಾದ ಸವಾಲಿನ ಸನ್ನಿವೇಶಕ್ಕೆ ಸಿಲುಕಿರುವ ನಾಸಾ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿಯೇ ತಮ್ಮ 59ನೇ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಸೆ 19ರ ಗುರುವಾರ ಅವರು ಬಾಹ್ಯಾಕಾಶ ನಿಲ್ದಾಣದ ಮಹತ್ವದ ನಿರ್ವಹಣಾ ಕಾರ್ಯಗಳಲ್ಲಿ ಮತ್ತು ವೈಜ್ಞಾನಿಕ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹುಟ್ಟುಹಬ್ಬ ಆಚರಿಸಿದರು. ಈಗ ಮಾರ್ಚ್ 2025 ರಲ್ಲಿ ಹಿಂತಿರುಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ : Sunita Williams: ಬಾಹ್ಯಾಕಾಶದಿಂದಲೇ ಸುನಿತಾ ವಿಲಿಯಮ್ಸ್‌ ವೋಟಿಂಗ್‌! ಮತದಾನ ಹೇಗೆ ನಡೆಯುತ್ತೆ ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌