Thursday, 19th September 2024

ಸ್ವೀಡನ್‌’ನ ಮೊದಲ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲೀನಾ ಆಂಡರ್ಸನ್ ಆಯ್ಕೆ

#Sweden First Female Prime Minister

ಜ್ಯೂರಿಚ್: ಸ್ವೀಡಿಷ್ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಪ್ರಧಾನಿಯನ್ನಾಗಿ ಹಣಕಾಸು ಸಚಿವೆ ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ.

ಸ್ವೀಡನ್‌ ಸಂಸತ್ತು ರಿಕ್ಸ್‌ಡಾಗ್ ಬುಧವಾರ ಸ್ವೀಡನ್‌ನ ಸೋಶಿಯಲ್ ಡೆಮಾಕ್ರಟಿಕ್ ಲೇಬರ್ ಪಾರ್ಟಿಯ ನಾಯಕಿ ಯನ್ನು ಆಯ್ಕೆ ಮಾಡಲಾಗಿದ್ದು, ಉನ್ನತ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ದ್ದಾರೆ.

ಸ್ವೀಡನ್‌ನ ಸಂಸತ್ತು ರಿಕ್ಸ್‌ಡಾಗ್ 349 ಸದಸ್ಯ ಬಲ ಹೊಂದಿದ್ದು, ಆಂಡರ್ಸನ್ ಅವರ ಪರವಾಗಿ 117 ಮತ ಚಲಾವಣೆ ಯಾದರೆ, 174 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು ಮತ್ತು 57 ಸದಸ್ಯರು ಗೈರುಹಾಜರಾಗಿದ್ದರು.

ಡೆಮಾಕ್ರಟಿಕ್ ಲೇಬರ್ ಪಕ್ಷದ ನಾಯಕ, ಪ್ರಧಾನಿ ಸ್ಟೀಫನ್ ಲೋಫ್ವೆನ್ ಈ ವರ್ಷಾರಂಭದಲ್ಲಿ ತಮ್ಮ ಸ್ಥಾನ ತ್ಯಜಿಸಿ ದ್ದರು. ಇದೀಗ ಅವರ ಸ್ಥಾನಕ್ಕೆ ಆಂಡರ್ಸನ್ ಅವರನ್ನು ಆಯ್ಕೆಮಾಡಲಾಗಿದೆ.

ಲಿಂಗಸಂಬಂಧಿ ವಿಚಾರಗಳಲ್ಲಿ ಯುರೋಪಿನ ಅತ್ಯಂತ ಪ್ರಗತಿಪರ ರಾಷ್ಟ್ರಗಳಲ್ಲಿ ಒಂದಾಗಿರುವ ಸ್ವೀಡನ್‌ನಲ್ಲಿ ಇದು ವರೆಗೆ ರಾಜಕೀಯದ ಉನ್ನತ ಹುದ್ದೆಯಲ್ಲಿ ಮಹಿಳೆಯರಿಗೆ ಸ್ಥಾನ ದೊರೆತಿರಲಿಲ್ಲ.

ಆಂಡರ್ಸನ್ ಅವರಿಗೆ ವಿರುದ್ದವಾಗಿ 174 ಮಂದಿ ಮತ ಚಲಾಯಿಸಿದ್ದರೂ, ಸ್ವೀಡನ್ ಸಂವಿಧಾನದ ಪ್ರಕಾರ, ಕನಿಷ್ಠ 175 ಮತಗಳು ಆಂಡರ್ಸನ್ ವಿರುದ್ದವಾಗಿರದ ಕಾರಣ, ಪ್ರಧಾನಿಯಾಗಿ ಆಯ್ಕೆಯಾಗಿರುತ್ತಾರೆ.