Sunday, 15th December 2024

ಸ್ವೀಡನ್‌ ಪ್ರಧಾನಿಯಾಗಿ ಆಯಂಡರ್ಸನ್ ಮರುನೇಮಕ

ಸ್ಟಾಕ್ ಹೋಮ್: ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನ ಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಮ್ಯಾಗ್ಡಲೀನಾ ಆಯಂಡರ್ಸನ್ ಇದೀಗ ಉನ್ನತ ಹುದ್ದೆಗೆ ಮರುನೇಮಕಗೊಂಡಿದ್ದಾರೆ.

ಕಳೆದ ವಾರ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ರಾಜಕೀಯ ಪ್ರಕ್ಷುಬ್ಧತೆಯಿಂದಾಗಿ ರಾಜೀನಾಮೆ ನೀಡಿದ್ದರು. ಸೋಮವಾರ ನಡೆದ ಹೊಸ ಮತದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮ್ಯಾಗ್ಡಲೀನಾ ಆಯಂಡರ್ಸನ್ ಅವರನ್ನು ಸಂಸದರು ಕಡಿಮೆ ಅಂತರದಿಂದ ಬೆಂಬಲಿಸಿದ್ದಾರೆ.

ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಯುವವರೆಗೆ ಅವರು ಏಕಪಕ್ಷ ಸರಕಾರವನ್ನು ಮುನ್ನಡೆಸಲು ಪ್ರಯತ್ನಿಸುತ್ತಾರೆ. ಕಳೆದ ಬುಧವಾರ ಅವರ ಸಮ್ಮಿಶ್ರ ಸರಕಾರ ಪತನದ ನಂತರ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು.