ಕಾಬೂಲ್: ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯು ಭಾನುವಾರ ರಾಜಧಾನಿ ಕಾಬೂಲ್ ಹೊರ ವಲಯಕ್ಕೆ ಲಗ್ಗೆ ಹಾಕಿದೆ.
ಮಾಹಿತಿ ಬಿಡುಗಡೆ ಮಾಡುವುದಕ್ಕೆ ಯಾವುದೇ ರೀತಿ ಅಧಿಕಾರ ಇಲ್ಲದಿರುವ ತಮ್ಮ ಅನಾ ಮಧೇಯ ಸ್ಥಿತಿಯ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಹೋರಾಟ ನಡೆಸುವುದಕ್ಕೆ ಏನೂ ಉಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಲಿಬಾನ್ ಉಗ್ರ ಸಂಘಟನೆಯು ಕ್ವಾರಾಬಾಗ್, ಕಲಕನ್ ಮತ್ತು ಪಾಘಮನ್ ಜಿಲ್ಲೆಗಳಲ್ಲಿ ಅಧಿಪತ್ಯ ಸಾಧಿಸಿದ್ದಾರೆ.
ಬಂಡಾಯ ಎದ್ದಿರುವ ತಾಲಿಬಾನ್ ಸಂಘಟನೆಯವರು ರಾಜಧಾನಿಯಲ್ಲಿ ತಮ್ಮ ಇರುವಿಕೆ ಬಗ್ಗೆ ಒಪ್ಪಿಕೊಂಡಿಲ್ಲ. ಮುಂಜಾಗ್ರತಾ ಕ್ರಮವಾಗಿ, ಆದಾಗ್ಯೂ, ಭಾನುವಾರ ಮುಂಜಾನೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿ ಸುವ ಅಧಿಕಾರಿಗಳನ್ನು ಮತ್ತು ಕೆಲಸಗಾರರನ್ನು ಮನೆಗೆ ವಾಪಸ್ ಕಳುಹಿಸಲು ಆರಂಭಿಸಿದವು ಎಂದು ತಿಳಿದು ಬಂದಿದೆ.
ಅಫ್ಗಾನಿಸ್ತಾನದ ಮೇಲೆ ಬಿಗಿ ಹಿಡಿತ ಸಾಧಿಸಿರುವ ತಾಲಿಬಾನ್, ಭಾನುವಾರ ಕಾಬೂಲ್ ನಗರದ ಹೊರ ವಲಯವನ್ನು ಪ್ರವೇಶಿಸಿದೆ. ‘ಯಾವುದೇ ವ್ಯಕ್ತಿಯ ಜೀವ, ಆಸ್ತಿ ಮತ್ತು ಘನತೆಗೆ ಧಕ್ಕೆ ತರುವುದಿಲ್ಲ. ಕಾಬೂಲ್ ನಾಗರಿಕರ ಜೀವಕ್ಕೂ ಯಾವುದೇ ರೀತಿಯ ಅಪಾಯವಿಲ್ಲ’ ಎಂದು ತಾಲಿಬಾನ್ ತಿಳಿಸಿದೆ.
ಕಾಬೂಲ್ ಬಳಿಯ ಕಲಕನ್, ಖರಾಬಾಗ್ ಮತ್ತು ಪಘಮಾನ್ ಜಿಲ್ಲೆಗಳಲ್ಲಿ ತಾಲಿಬಾನ್ ಉಗ್ರರು ಬೀಡುಬಿಟ್ಟಿದ್ದಾರೆ ಎಂದು ಅಘ್ಗಾನಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಸಾವಿರಾರು ನಾಗರಿಕರು ಕಾಬೂಲ್‌ನ ಉದ್ಯಾನಗಳಲ್ಲಿ ಮತ್ತು ಬಯಲು ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ. ತಾವು ಉಳಿತಾಯ ಮಾಡಿದ ಹಣ ವಾಪಸ್ ಪಡೆಯಲು ನೂರಾರು ಮಂದಿ ಖಾಸಗಿ ಬ್ಯಾಂಕ್‌ಗಳ ಮುಂದೆ ಸೇರಿದ್ದಾರೆ.
‘ಅಂತರರಾಷ್ಟ್ರೀಯ ಪಡೆಗಳ ನೆರವಿನೊಂದಿಗೆ ಭದ್ರತಾ ಪಡೆಗಳು ಕಾಬೂಲ್ ನಗರವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ತಿಳಿಸಿದೆ. ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಹೆಲಿಕಾಪ್ಟರ್‌ಗಳು ಬಂದಿಳಿದಿವೆ. ಹಲವು ಸೂಕ್ಷ್ಮ ದಾಖಲೆಗಳಿಗೆ ರಾಜತಾಂತ್ರಿಕರು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ ಎಂದು ಅಮೆರಿಕದ ಇಬ್ಬರು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.