ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಸಕಲ ಸಿದ್ಧತೆ ನಡೆಸಿದ್ದು, ನಾಳೆ ತಾಲಿಬಾನಿಗಳ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ.
ನೂತನ ಪ್ರಧಾನಿಯಾಗಿ ಮೊಹಮ್ಮದ್ ಹಸನ್ ಅಖುಂದರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜಿ ಸಂಧಾನದ ಮೂಲಕ ತಾಲಿಬಾನ್ ನಾಯಕ ಆಯ್ಕೆ ಮಾಡಲಾಗಿದೆ.
ಅಫಘಾನಿಸ್ತಾನದ ಹೊಸ ಪ್ರಧಾನಿಗೆ ಇಬ್ಬರು ಡೆಪ್ಯುಟಿಗಳಾಗಿ ಮುಲ್ಲಾ ಅಖುಂದಾ, ಮುಲ್ಲಾ ಅಬ್ಬಾಸ್ ಸಲಾಂನನ್ನ ನೇಮಕ ಮಾಡಲಾಗಿದೆ. ಸಿರಾಜುದ್ದೀನ್ ಹಕ್ಕಾನಿಗೆ ಒಳಾಡಳಿತ ಮಂತ್ರಿ ಸ್ಥಾನ ನೀಡಲಿದ್ದು, ಮುಲ್ಲಾ ಯಾಕೂಬ್ ಒಮರ್ ರಕ್ಷಣಾ ಮಂತ್ರಿಯಾಗಿ ಆಯ್ಕೆಯಾಗಿದ್ದಾನೆ.ಜಬೀವುಲ್ಲಾ ಮುಜಾಯಿದ್‌ಗೆ ಪ್ರಧಾನಿ ವಕ್ತಾರನ ಸ್ಥಾನ ನೀಡಲಾಗಿದ್ದು, ಮುಲ್ಲಾ ಅಮೀರ್ ಖಾಲ್ ಮುಟಾಕಿಗೆ ವಿದೇಶಾಂಗ ಖಾತೆ ನೀಡಲಾಗಿದೆ.