ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸಂಭವಿಸಿದ ಸರಣಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 103ಕ್ಕೆ ಏರಿದೆ.
ಸ್ಫೋಟದಲ್ಲಿ ಕನಿಷ್ಠ 90 ಅಫ್ಘಾನ್ ನಾಗರಿಕರನ್ನು ಬಲಿ ತೆಗೆದುಕೊಂಡಿವೆ. ಪೆಂಟಗನ್ 13 ಸೈನಿಕರ ಸಾವನ್ನು ದೃಢಪಡಿಸಿದೆ.
ಕಾಬೂಲ್ ವಿಮಾನ ನಿಲ್ದಾಣ ಮತ್ತು ಅದರ ಹೊರವಲಯವನ್ನು ಗುರಿಯಾಗಿಸಿಕೊಂಡು ಗುರು ವಾರ, ಕನಿಷ್ಠ ನಾಲ್ಕು ಸ್ಫೋಟಗಳು ನಡೆದವು. ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಭಯೋತ್ಪಾದಕ ಗುಂಪು ಈ ದಾಳಿಯ ಹೊಣೆ ಹೊತ್ತಿದೆ ಎಂದು ವರದಿಯಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಅಮೆರಿಕದ ಜನರನ್ನು ನಾವು ರಕ್ಷಿಸುತ್ತೇವೆ, ನಮ್ಮ ಕಾರ್ಯಾ ಚರಣೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಹೆಚ್ಚುವರಿ ಮಿಲಿಟರಿ ನಿಯೋಜನೆ ಕುರಿತಂತೆ ಒಂದು ವೇಳೆ ಹೆಚ್ಚುವರಿ ಮಿಲಿಟರಿ ಪಡೆ ಅಗತ್ಯವಾದರೆ ಅದಕ್ಕೆ ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ.