ಟೆಲ್ ಅವಿವ್: ಅಮೆರಿಕದ (America) ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (THAAD) ವ್ಯವಸ್ಥೆಯು ಇಸ್ರೇಲ್ (Israel) ನೆಲದಲ್ಲಿ ಕಾರ್ಯವನ್ನು ಪ್ರಾರಂಭ ಮಾಡಿದೆ. ಇಸ್ರೇಲ್‌ನ ಒಂದು ಭಾಗವನ್ನು ಗುರಿಯಾಗಿಸಿಕೊಂಡು ಯಮೆನ್‌ನಿಂದ ಹೌತಿ (Houthi Missile) ಉಡಾವಣೆ ಮಾಡಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಶುಕ್ರವಾರ ಬೆಳಗ್ಗೆ THAAD ತಡೆಹಿಡಿಯುವಲ್ಲಿ ಯಶಸ್ವಿಯಾಯಿತು.
ಮಾರಣಾಂತಿಕ ಕ್ಷಿಪಣಿ ದಾಳಿಯನ್ನು ತಟಸ್ಥಗೊಳಿಸುವಲ್ಲಿ ಇಸ್ರೇಲಿ ರಕ್ಷಣಾ ವ್ಯವಸ್ಥೆ ಕೂಡ ಸಹ ಪಾತ್ರ ವಹಿಸಿದೆ. ಅಮೆರಿಕ, ಈ ವರ್ಷದ ಅಕ್ಟೋಬರ್‌ನಲ್ಲಿ 100 ಸದಸ್ಯರ ಸಿಬ್ಬಂದಿಯೊಂದಿಗೆ ಥಾಡ್ ಅನ್ನುಇಸ್ರೇಲ್‌ನಲ್ಲಿ ನಿಯೋಜಿಸಿತ್ತು. ಇರಾನ್ ದಾಳಿಗಳನ್ನು ತಡೆಯಲು ಮತ್ತು ಇಸ್ರೇಲ್‌ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ವಾಯು ರಕ್ಷಣಾ ವ್ಯವಸ್ಥೆಯನ್ನು ಅಮೆರಿಕ ನಿಯೋಜಿಸಿದೆ.
ಈ ರಕ್ಷಣಾ ವ್ಯವಸ್ಥೆಯು ಇಂಟರ್‌ಸೆಪ್ಟರ್ ಅನ್ನು ಉಡಾಯಿಸುತ್ತಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಮೆರಿಕನ್ ಸೈನಿಕನೊಬ್ಬ “ಹದಿನೆಂಟು ವರ್ಷಗಳಿಂದ ನಾನು ಇದಕ್ಕಾಗಿ ಕಾಯುತ್ತಿದ್ದೇನೆ” ಎಂದು ಹೇಳುವುದು ಕೇಳುತ್ತದೆ.
מערכת ה- THAAD האמריקנית לקחה חלק ביירוט הטיל הבליסטי ששוגר אמש מתימן. אפשר לשמוע את אחד החיילים האמריקניים מתרגש "18 שנים חיכיתי לזה" pic.twitter.com/s4VoMfMhaF
— איתי בלומנטל 🇮🇱 Itay Blumental (@ItayBlumental) December 27, 2024
THAAD ವಾಯು ರಕ್ಷಣಾ ವ್ಯವಸ್ಥೆಯನ್ನು ಅಮೇರಿಕನ್ ಕಂಪನಿ ಲಾಕ್ಹೀಡ್ ಮಾರ್ಟಿನ್ ಅಭಿವೃದ್ಧಿಪಡಿಸಿದೆ. ಹಾರಾಟದ ಅಂತಿಮ ಹಂತದಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಪಡಿಸುವುದು ಇದರ ಪ್ರಾಥಮಿಕ ಗುರಿಯಾಗಿದೆ. ಇದನ್ನು ಇಸ್ರೇಲ್‌ನ ಆರೋ-3 ರಕ್ಷಣಾ ವ್ಯವಸ್ಥೆಗೆ ಹೋಲಿಸಬಹುದಾಗಿದೆ.
ಇಸ್ರೇಲ್ ಮೇಲೆ ಕೇವಲ ಎಂಟು ದಿನಗಳಲ್ಲಿ ಐದು ಬಾರಿ ಹೌತಿ ಕ್ಷಿಪಣಿಯ ದಾಳಿಯಾಗಿದೆ. . ಇರಾನ್ ಬೆಂಬಲಿತ ಗುಂಪು ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ಮಾಡುತ್ತಿವೆ. ಪ್ರತ್ಯುತ್ತರವಾಗಿ ಇಸ್ರೇಲಿ ಯುದ್ಧವಿಮಾನಗಳು ಯೆಮೆನ್‌ನಲ್ಲಿ ಹೌತಿ ಕ್ಷಿಪಣಿ ಮೇಲೆ ದಾಳಿ ಪ್ರಾರಂಭ ಮಾಡಿವೆ. ಮೂಲಗಳ ಪ್ರಕಾರ ಕಳೆದ ಒಂದು ವರ್ಷದಲ್ಲಿ ಇರಾನ್ ಇಸ್ರೇಲ್‌ನಲ್ಲಿ 200 ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು 170 ಡ್ರೋನ್‌ಗಳನ್ನು ಉಡಾಯಿಸಿದೆ. ಅವುಗಳಲ್ಲಿ ಹೆಚ್ಚಿನವುಗಳನ್ನು ತಡೆಹಿಡಿಯಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಈ ಸುದ್ದಿಯನ್ನೂ ಓದಿ : Israel Airstrike: ಇರಾನ್ ಮೇಲೆ ಇಸ್ರೇಲ್ ಎರಡನೇ ಏರ್‌ಸ್ಟ್ರೈಕ್; ಇಲ್ಲಿದೆ ಭೀಕರ ದಾಳಿಯ ವಿಡಿಯೋ