ಬೆಂಗಳೂರು : ಲೆಬನಾನ್ ಬೈರುತ್ ಮೇಲೆ ಹೆಜ್ಬುಲ್ಲಾ ಉಗ್ರ ಸಂಘಟನೆಯನ್ನು ಗುರಿಯಾಗಿಸಿ (Israel Strikes Lebanon) ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಉಗ್ರಗಾಮಿ ಗುಂಪಿನ ಉನ್ನತ ಕಮಾಂಡರ್ ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 50 ಜನರು ಗಾಯಗೊಂಡಿದ್ದಾರೆ ಎಂದು ಉಗ್ರಗಾಮಿ ಗುಂಪು ಮತ್ತು ಲೆಬನಾನ್ ಆರೋಗ್ಯ ಸಚಿವಾಲಯಕ್ಕೆ ಹತ್ತಿರವಿರುವ ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Imad Mughniyeh was Hezbollah's military commander-in-chief. He was eliminated by Israel in 2008 💀
— Dr. Eli David (@DrEliDavid) September 20, 2024
Fuad Shukr replaced him. He was eliminated in July 2024 💀
Ibrahim Aqil replaced him. He was eliminated today 💀 pic.twitter.com/gE3Pea6GPr
ಕಳೆದ ಜುಲೈನಲ್ಲಿ ಇಸ್ರೇಲ್ ವಾಯು ದಾಳಿಯಲ್ಲಿ ಹೆಜ್ಬುಲ್ಲಾ ಕಮಾಂಡರ್ ಫುವಾದ್ ಶುಕ್ರ್ ಮೃತಪಟ್ಟ ನಂತರ ಇದೀಗ ಎರಡನೇ ಅಧಿಕಾರಿ ಮೃತಪಟ್ಟಂತಾಗಿದೆ. ರಾಡ್ವಾನ್ ಫೋರ್ಸ್ ಕಮಾಂಡರ್ ಇಬ್ರಾಹಿಂ ಅಕಿಲ್ ಈ ಬಾರಿ ಮೃತಪಟ್ಟ ಹೆಜ್ಬುಲ್ಲಾ ನಾಯಕ.
ಬೈರುತ್‌ನಲ್ಲಿ “ಉದ್ದೇಶಿತ ದಾಳಿ” ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ನಗರದ ದಕ್ಷಿಣದಲ್ಲಿರುವ ಹಿಜ್ಬುಲ್ಲಾದ ಭದ್ರಕೋಟೆಯ ಮೇಲೆ ವಾಯು ದಾಳಿ ನಡೆಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. “ಐಡಿಎಫ್ (ಇಸ್ರೇಲಿ ಮಿಲಿಟರಿ) ಬೈರುತ್‌ನಲ್ಲಿ ಹೆಜ್ಬುಲ್ಲಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
2023ರ ಅಕ್ಟೋಬರ್‌ನಲ್ಲಿ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ನಂತರ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ನಡೆದ ಮೂರನೇ ವಾಯು ದಾಳಿ ಇದಾಗಿದೆ. ದಕ್ಷಿಣ ಬೈರುತ್‌ನಲ್ಲಿ ನಡೆದ ಈ ಹಿಂದಿನ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತ ಕಮಾಂಡರ್ ಫುವಾದ್ ಶುಕರ್ ಮೃತಪಟ್ಟಿದ್ದ. ಅದೇ ರೀತಿ ಜನವರಿ 2 , 2024 ರಂದು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ನಾಯಕ ಸಲೇಹ್ ಅಲ್-ಅರೂರಿ ಮೃತಪಟ್ಟಿದ್ದ.
150ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದ ಹಿಜ್ಬುಲ್ಲಾ
ದಕ್ಷಿಣ ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಹಿಜ್ಬುಲ್ಲಾ ಉತ್ತರ ಇಸ್ರೇಲ್ ಮೇಲೆ 150 ರಾಕೆಟ್‌ಗಳ ದಾಳಿ ನಡೆಸಿದೆ. ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ರಾತ್ರಿಯಿಡೀ ಬಾಂಬ್ ದಾಳಿ ನಡೆಸಿತ್ತು. ಹೀಗಾಗಿ ಕನಿಷ್ಠ ಆರು ಇಸ್ರೇಲಿ ಮಿಲಿಟರಿ ನೆಲೆಗಳನ್ನು ರಾಕೆಟ್‌ಗಳ ಮೂಲಕ ಗುರಿಯಾಗಿಸಿಕೊಂಡಿರುವುದಾಗಿ ಹಿಜ್ಬುಲ್ಲಾ ಹೇಳಿದೆ.
ಇದನ್ನೂ ಓದಿ: BSF Personnel : ಜಮ್ಮು& ಕಾಶ್ಮೀರದಲ್ಲಿ ಬಸ್ ಕಂದಕಕ್ಕೆ ಉರುಳಿ 3 ಬಿಎಸ್ಎಫ್ ಸಿಬ್ಬಂದಿ ಸಾವು, 28 ಮಂದಿ ಗಾಯ
ಲೆಬನಾನ್ ಗಡಿಯುದ್ದಕ್ಕೂ ಇರುವ ಸ್ಥಳಗಳನ್ನು ಗುರಿಯಾಗಿಸಿಕೊಂಡು ಶುಕ್ರವಾರ ಮಧ್ಯಾಹ್ನ ಮೂರು ಅಲೆಗಳಲ್ಲಿ ರಾಕೆಟ್‌ಗಳು ಬಂದಿದ್ದವು ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ರಕ್ಷಣಾ ನೆಲೆಗಳು ಮತ್ತು ಇಸ್ರೇಲಿ ಶಸ್ತ್ರಸಜ್ಜಿತ ಬ್ರಿಗೇಡ್‌ನ ಪ್ರಧಾನ ಕಚೇರಿ ಸೇರಿದಂತೆ ಗಡಿಯುದ್ದಕ್ಕೂ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ರಾಕೆಟ್ ದಾಳಿ ಮಾಡಲಾಗಿದೆ.