ಟ್ವಿಟರ್ ಸ್ಪೇಸ್ಗಳ ಉತ್ಪನ್ನ ನಿರ್ವಾಹಕ ಇವಾನ್ ಜೋನ್ಸ್ ಅವರು ತಮ್ಮ ಬಾಸ್ ಕಚೇರಿಯ ನೆಲದ ಮೇಲೆ ಗಾಢ ನಿದ್ದೆಯಲ್ಲಿ ರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಮಾಧ್ಯಮಗಳ ಪ್ರಕಾರ, ಟ್ವಿಟರ್ನಲ್ಲಿನ ಉದ್ಯೋಗಿಗಳು ಹೆಚ್ಚು ಸಮಯ ಕೆಲಸ ಮಾಡುತ್ತಿದ್ದಾರೆ. ಏಕೆಂದರೆ ಮಸ್ಕ್ ಅವರು ಟ್ವಿಟರ್ ಉದ್ಯೋಗಿಗಳು ವಾರದ ಏಳು ದಿನವೂ 12 ಗಂಟೆ ಕೆಲಸ ಮಾಡಬೇಕು. ಇಲ್ಲದಿದ್ದರೆ, ಅವರನ್ನು ಕೆಲಸದಿಂದ ತೆಗೆದು ಹಾಕಲಾಗುವ ನಿರ್ಧಾರ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಅಧಿಕಾವಧಿ ವೇತನ, ಪರಿಹಾರದ ಸಮಯ ಅಥವಾ ಉದ್ಯೋಗ ಭದ್ರತೆಯ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಈ ಸೂಚನೆಗಳನ್ನು ನೀಡಲಾಗಿದೆ ಎಂದು ವರದಿ ಹೇಳಿದೆ.