Friday, 22nd November 2024

ಮನೆಯಿಂದಲೇ ಟಾಯ್ಲೆಟ್‌ ಪೇಪರ್‌ ತನ್ನಿ: ಟ್ವಿಟರ್‌ ಮಾಲೀಕ ಸೂಚನೆ

ನ್ಯೂಯಾರ್ಕ್‌: ತಮ್ಮ ಮನೆಯಿಂದಲೇ ಟಾಯ್ಲೆಟ್‌ ಪೇಪರ್‌ ತರುವಂತೆ ಉದ್ಯೋಗಿಗಳಿಗೆ ಟ್ವಿಟರ್‌ ಕಂಪನಿ ಸೂಚಿಸಿದೆ.

ಇದು ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್ ಇಂತಹ ತಮ್ಮ ಕಠಿಣ ಕ್ರಮಗಳನ್ನು ಮುಂದುವರಿಸಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಕಚೇರಿಯ ಹಲವು ಹೌಸ್‌ ಕೀಪಿಂಗ್‌ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.

ಈ ಕ್ರಮದಿಂದಾಗಿ ಟ್ವಿಟರ್‌ನ ಸ್ಯಾನ್‌ಫ್ರಾನ್ಸಿಸ್ಕೊ ಪ್ರಧಾನ ಕಚೇರಿ ಮತ್ತು ಸಿಯಾಟೆಲ್‌ ಕಚೇರಿಯ ಶೌಚಾಲಯಗಳು ನರಕ ಸದೃಶವಾಗಿವೆ. 4 ಅಂತಸ್ತಿತ ಕಚೇರಿಯ ಪೈಕಿ 2 ಅಂತಸ್ತುಗಳನ್ನು ಮುಚ್ಚಲಾಗಿದ್ದು, ಬಾಕಿ ಎರಡು ಅಂತಸ್ತುಗಳಲ್ಲಿ ಉದ್ಯೋಗಿ ಗಳನ್ನು ಕುರಿ ಮಂದೆಯಂತೆ ತುಂಬಿಸಲಾಗಿದೆ. ಹೌಸ್‌ ಕೀಪಿಂಗ್‌ ಸಿಬ್ಬಂದಿ ಕೊರತೆಯಿಂದ ಕ್ಯಾಂಟೀನ್‌ ಮತ್ತು ಶೌಚಾಲಯಗಳು ದುರ್ನಾತ ಬೀರುತ್ತಿವೆ ಎಂದು ವರದಿ ಮಾಡಿವೆ.

ಡಿಸೆಂಬರ್‌ ಆರಂಭದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಅನೇಕ ಹೌಸ್‌ ಕೀಪಿಂಗ್‌ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿತ್ತು.

2021ರ ಜನವರಿಯಿಂದ ಇಲ್ಲಿಯವರೆಗೆ ಎಲಾನ್‌ ಮಸ್ಕ್ ತಮ್ಮ ಸಂಪತ್ತಿನಲ್ಲಿ ಬರೋಬ್ಬರಿ 20 ಸಾವಿರ ಬಿಲಿಯನ್‌ ಡಾಲರ್‌ ನಷ್ಟ ಅನುಭವಿಸಿದ್ದಾರೆ. ಈ ಮೂಲಕ ಸಂಪತ್ತಿನಲ್ಲಿ 20 ಸಾವಿರ ಬಿಲಿಯನ್‌ ಡಾಲರ್‌ ಕಳೆದುಕೊಂಡ ಮೊದಲಿಗರಾಗಿದ್ದಾರೆ.

Read E-Paper click here