Saturday, 4th January 2025

Ukraine-Russia: ರಷ್ಯಾದ ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್‌ ನೌಕಾ ಡ್ರೋನ್‌

Ukraine - Russia

ಕೈವ್: ಬೂದಿ ಮುಚ್ಚಿದ ಕೆಂಡಂತಿರುವ ರಷ್ಯಾ-ಉಕ್ರೇನ್‌ ಘರ್ಷಣೆ ಇದೀಗ ಮತ್ತೆ ಕಿಡಿ ಹಾರಿದೆ.  ಉಕ್ರೇನ್‌ನ ಮಿಲಿಟರಿ ಗುಪ್ತಚರ ಇಲಾಖೆಯು (Defence intelligence of Ukraine) ತಮ್ಮ ನೌಕಾಪಡೆಯ ಡ್ರೋನ್‌ ರಷ್ಯಾದ Mi-8 ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ. ಮಂಗಳವಾರ ತನ್ನ ನೌಕಾ ಡ್ರೋನ್‌ ಬಳಸಿಕೊಂಡು ಕಪ್ಪು ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದೆ ಎಂದು ಉಕ್ರೇನ್‌ ಹೇಳಿದೆ. (Ukraine – Russia)

ಈ ಬಗ್ಗೆ ಟ್ವೀಟ್‌ ಮಾಡಿರುವ ಉಕ್ರೇನ್‌ನ ಮಿಲಿಟರಿ ಗುಪ್ತಚರ ಇಲಾಖೆ ಉಕ್ರೇನಿಯನ್ ಮಗರಾ V5 ನೇವಲ್ ಡ್ರೋನ್ ಬಳಸಿ ರಷ್ಯಾದ Mi-8 ಹೆಲಿಕಾಪ್ಟರ್ ಅನ್ನು ಉರುಳಿಸಿದ ವೀಡಿಯೊವನ್ನು ಪೋಸ್ಟ್ ಮಾಡಿದೆ.

ಉಕ್ರೇನಿಯನ್ ನೌಕಾಪಡೆಯ ಡ್ರೋನ್ ರಷ್ಯಾದ ಹೆಲಿಕಾಪ್ಟರ್ ಅನ್ನು ಉರುಳಿಸಿದ್ದು ಇದೇ ಮೊದಲು. ವೀಡಿಯೊದಲ್ಲಿ, ಥರ್ಮಲ್ ಇಮೇಜರ್ ಮೂಲಕ ಹೆಲಿಕಾಪ್ಟರ್ ಅನ್ನು ನೋಡಬಹುದಾಗಿದೆ.  ಡ್ರೋನ್‌ ದಾಳಿ ಆದ ಬಳಿಕ ರಷ್ಯಾದ ವಿಮಾನ ಕಪ್ಪುಸಮುದ್ರದಲ್ಲಿ ಮುಳುಗಿದೆ. ರಷ್ಯಾದ ವಿಮಾನ ಪತನಗೊಳ್ಳುತ್ತಲೇ ಉಕ್ರೇನ್‌ ಪೈಲೆಟ್‌ ಒಬ್ಬರು ಮಾತನಾಡಿರುವ ಆಡಿಯೋ ರೇಡಿಯೊ ಸಂವಹನದಲ್ಲಿ ರೆಕಾರ್ಡ್‌ ಆಗಿದೆ. ಆತ ಐಯಾಮ್ ಹಿಟ್, ಗೋಯಿಂಗ್ ಡೌನ್ (ನಾನು ಹೊಡೆದಿದ್ದೇನೆ, ಕೆಳಗೆ ಹೋಗುತ್ತಿದ್ದೇನೆ) ಎಂದು ಹೇಳಿದ್ದಾನೆ.

ರಷ್ಯಾ ಹಾಗೂ ಉಕ್ರೇನ್‌ ಯುದ್ಧ ಶುರುವಾಗಿ ಶುರುವಾಗಿ 1,040 ದಿನಗಳು ಕಳೆದಿದೆ. 2022 ರಲ್ಲಿ ಆರಂಭವಾಗಿದ್ದ ರಷ್ಯಾ & ಉಕ್ರೇನ್ ಯುದ್ಧವು ಆರ್ಥಿಕವಾಗಿ , ರಾಜಕೀಯವಾಗಿ, ಸಾಮಾಜಿಕವಾಗಿ ಹಲವು ಸಮಸ್ಯೆಗಳನ್ನು ತಂದಿಟ್ಟಿದೆ.

ಯುದ್ಧಕ್ಕೆ ಪ್ರಮುಖ ಕಾರಣ ಎಂದರೆ ಉಕ್ರೇನ್‌ ನ್ಯಾಟೋಗೆ ಸೇರಲು ಮುಂದಾಗಿದ್ದು, ಉಕ್ರೇನ್‌ ಏನಾದರೂ ನ್ಯಾಟೋಗೆ ಸೇರಿದರೆ ಯುರೋಪ್‌ನಲ್ಲಿ ತನ್ನ ಪ್ರಾಬಲ್ಯ ಕಡಿಮೆಯಾಗುತ್ತದೆ ಎಂಬ ಅಂದಾಜಿನಲ್ಲಿ ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿತು. ಈ ಹಿಂದೆ ಸೊವಿಯತ್‌ ಒಕ್ಕೂಟದ್ದೇ ಭಾಗವಾಗಿದ್ದ ಉಕ್ರೇನ್‌ ರಷ್ಯಾವನ್ನು ಬಿಟ್ಟು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಬೆಂಬಲಕ್ಕೆ ಕರೆಯುತ್ತಿರುವುದು ರಷ್ಯಾಗೆ ಇಷ್ಟವಾಗಲಿಲ್ಲ. ಇದರಿಂದ ರಷ್ಯಾಗೆ ಅಪಾಯ ಎಂದು ತಿಳಿದ ವ್ಲಾಡಿಮರ್ ಪುಟಿನ್‌‌ ಅವರು ಯುದ್ಧ ಘೋಷಿಸಿದ್ದರು.

ಈ ಸುದ್ದಿಯನ್ನೂ ಓದಿ : Viral Video: ಲ್ಯಾಂಡಿಂಗ್ ವೇಳೆ ರಷ್ಯಾ ವಿಮಾನಕ್ಕೆ ಬೆಂಕಿ; ಇಲ್ಲಿದೆ ಭಯಾನಕ ವಿಡಿಯೊ