Friday, 22nd November 2024

ಶಾಕ್‌ನಲ್ಲಿ ವಿಜಯ್‌ ಮಲ್ಯ: ದಿವಾಳಿ ಎಂದು ಘೋಷಿಸಿದ ಬ್ರಿಟನ್ ನ್ಯಾಯಾಲಯ

ಲಂಡನ್‌: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಇಂಗ್ಲೆಂಡ್‌ಗೆ ಪರಾರಿಯಾಗಿರುವ ವಿಜಯ್ ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿವಾಳಿಯಾಗಿದ್ದಾರೆ ಎಂದು ಸೋಮವಾರ ಪ್ರಕಟಿಸಿದೆ.

ಈ ಆದೇಶದಿಂದಾಗಿ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಾಲ ನೀಡಿ ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತ ವಸೂಲು ಮಾಡಲು ವಿಶ್ವದಾದ್ಯಂತ ಅವರ ಆಸ್ತಿ ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟದ ಪ್ರಯತ್ನವನ್ನು ಹಾದಿಯನ್ನು ಸುಗಮಗೊಳಿಸಿದೆ.

ಲಂಡನ್ ಹೈಕೋರ್ಟ್ ಚಾನ್ಸರಿ ವಿಭಾಗದ ವರ್ಚುಯಲ್ ವಿಚಾರಣೆ ವೇಳೆಯಲ್ಲಿ ವಿಜಯ್ ಮಲ್ಯ ದಿವಾಳಿಯೆಂದು ಐಸಿಸಿ ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ತೀರ್ಪಿನಲ್ಲಿ ಹೇಳಿದ್ದಾರೆ. ಮಲ್ಯ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಈ ತೀರ್ಪಿನಿಂದಾಗಿ ಅವಕಾಶ ಸಿಕ್ಕಂತಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮಲ್ಯ ಇದೇ ವೇಳೆ ಹೇಳಿದ್ದಾರೆ, ಆದರೆ ಅನುಮತಿ ನಿರಾಕರಿಸಲಾಗಿದೆ.

ಭಾರತದಲ್ಲಿ ಇರುವ ಆಸ್ತಿಗಳ ಮೇಲೆ ತಮ್ಮ ಆಸ್ತಿಗೆ ಭದ್ರತೆಯನ್ನು ನೀಡಬೇಕು ಎಂದು ವಿಜಯ್​ ಮಲ್ಯ ಅವರು ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದರು.