ಬೀಜಿಂಗ್: ಸಾಮಾನ್ಯವಾಗಿ ಕಚೇರಿಯಲ್ಲಿ ಯಾರಾದರೂ ನಿದ್ದೆ ಹೋದರೆ ಬಾಸ್ನ ಕೆಂಗಣ್ಣಿಗೆ ಗುರಿಯಾಗುವುದು ಖಚಿತ. ಇದರಿಂದ ನೌಕರಿ ಹೋದರೂ ಅಚ್ಚರಿಯಿಲ್ಲ ಎನ್ನುವ ಪರಿಸ್ಥಿತಿ ಹಲವಾರು ಕಂಪನಿಗಳಲ್ಲಿವೆ. ಆದರೆ ಈತ ಮಾತ್ರ ಕಚೇರಿಯಲ್ಲಿ ನಿದ್ದೆ ಮಾಡಿ 40 ಲಕ್ಷ ರೂ. ಗಳಿಸಿದ್ದಾನೆ. ಇದು ಅಚ್ಚರಿ ನೀಡುವ ಸಂಗತಿಯಾದರೂ ಸತ್ಯವಾದ ವಿಚಾರ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral News) ಆಗಿದೆ.
ಕೆಲಸದ ನಡುವೆ ಚಿಕ್ಕ ನಿದ್ರೆ ಮಾಡುತ್ತಿದ್ದ ಆತನನ್ನು ಆರಂಭದಲ್ಲಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೆ ಅದೇ ಚಟುವಟಿಕೆಯು ಅನಂತರ ಆತನಿಗೆ 3,50,000 ಯುವಾನ್ ಅಂದರೆ ಸರಿಸುಮಾರು 40,78,150 ರೂ. ಗಳನ್ನು ಪಡೆಯುವಂತೆ ಮಾಡಿತು. ಅದು ಹೇಗೆಂದರೆ ನಿದ್ದೆ ಮಾಡಿದ್ದಕ್ಕಾಗಿ ಕೆಲಸದಿಂದ ವಜಾಗೊಂಡ ಉದ್ಯೋಗಿ ಕಂಪೆನಿಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ.
ಚೀನಾದ ವ್ಯಕ್ತಿಯೊಬ್ಬ ತಡವಾಗಿ ಕೆಲಸ ಮಾಡಿ ದಣಿದಿದ್ದರಿಂದ ತನ್ನ ಮೇಜಿನ ಮೇಲೆ ಮಲಗಿದ್ದಾನೆ. ಸುಮಾರು ಒಂದು ಗಂಟೆ ನಿದ್ದೆ ಮಾಡಿದ ಆತನನ್ನು ಗಮನಿಸಿದ ಮಾನವ ಸಂಪನ್ಮೂಲ ಸಿಬ್ಬಂದಿ ಆತನ ವಿರುದ್ಧ ಕ್ರಮಕೈಗೊಂಡು ಕೆಲಸದಿಂದ ವಜಾಗೊಳಿಸಿದರು. ಕೆಲಸದ ಅವಧಿಯಲ್ಲಿ ನಿದ್ರೆ ಮಾಡಿರುವುದಕ್ಕೆ ಆತನನ್ನು ವಜಾಗೊಳಿಸಲಾಯಿತು. ಹೀಗೆ ವಜಾಗೊಂಡ ಉದ್ಯೋಗಿಯನ್ನಯ ಆಗ್ನೇಯ ಚೀನಾದ ಕೆಮಿಕಲ್ ಕಂಪೆನಿಯೊಂದರಲ್ಲಿ ಡಿಪಾರ್ಟ್ಮೆಂಟ್ ಮ್ಯಾನೇಜರ್ ಆಗಿರುವ ಜಾಂಗ್ ಎಂದು ಗುರುತಿಸಲಾಗಿದೆ.
ಈ ಕುರಿತು ಅವರು ಮತ್ತು ಮಾನವ ಸಂಪನ್ಮೂಲ ಸಿಬ್ಬಂದಿ ನಡುವೆ ನಡೆದ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿ ಚಾಟ್ ನಲ್ಲಿ ಸಂವಾದ ನಡೆಸಿದ ಅವರೊಂದಿಗೆ ಹೆಚ್ ಆರ್ ಸಿಬ್ಬಂದಿ ಸಂವಾದ ನಡೆಸಿದ್ದಾರೆ. ಮ್ಯಾನೇಜರ್ ಜಾಂಗ್, ನೀವು ಆ ದಿನ ಎಷ್ಟು ಹೊತ್ತು ನಿದ್ದೆ ಮಾಡಿದ್ದೀರಿ? ಅದಕ್ಕೆ ಚಾಂಗ್, ಸುಮಾರು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಎಂದು ಹೇಳಿದ್ದಾರೆ.
ಇದು ಕೆಲಸದ ಮೇಲೆ ಪರಿಣಾಮ ಬೀರಿದ್ದು, ಇದರಿಂದ ಕಂಪನಿಯು ನಿಮ್ಮನ್ನು ವಜಾಗೊಳಿಸುವುದಾಗಿ ಕಂಪೆನಿ ತಿಳಿಸಿದೆ. ಜಾಂಗ್ ಕಂಪನಿ ವಿರುದ್ಧ ಕಾನೂನು ಹೋರಾಟ ಪ್ರಾರಂಭಿಸಿದ್ದಾರೆ. ಕಂಪನಿಯಿಂದ ವಜಾಗೊಂಡ ಜಾಂಗ್ ನ್ಯಾಯಾಲಯವನ್ನು ಸಂಪರ್ಕಿಸಿ, ಕಚೇರಿಯಲ್ಲಿ ಸಣ್ಣ ನಿದ್ರೆ ಮಾಡಿರುವುದಕ್ಕೆ ತಮ್ಮನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದರು.
ನ್ಯಾಯಾಲಯವು ಈ ಪ್ರಕರಣವನ್ನು ಪರಿಶೀಲನೆ ನಡೆಸಿದ ಟೈಕ್ಸಿಂಗ್ ಪೀಪಲ್ಸ್ ಕೋರ್ಟ್ನ ನ್ಯಾಯಾಧೀಶರಾದ ಜುಕಿ, ಉದ್ಯೋಗಿಯ ಪರವಾಗಿ ತೀರ್ಪು ನೀಡಿದರು. ಚಾಂಗ್ ಗೆ 3,50,000 ಯುವಾನ್ ಪರಿಹಾರವನ್ನು ನೀಡಲು ಆದೇಶಿಸಲಾಯಿತು. ಅದರಂತೆ ಜಾಂಗ್ ಈ ಭಾರೀ ಮೊತ ಪರಿಹಾರ ಪಡೆದಿದ್ದಾನೆ.