Saturday, 28th December 2024

Viral News: ಇದು ಪ್ರೈವೇಟ್ ಜೆಟ್‌ಗಳೇ ತುಂಬಿರುವ ಊರು! – ಇಲ್ಲಿ ಮನೆ ಮುಂದೆ ವಿಮಾನ ನಿಂತಿರುತ್ತೆ..!

ನವದೆಹಲಿ: ‘ವಾರೆ ವಾ ಚಂದ್ರು ಹೊಸ ಮನೆ.. ಹೊಸ ಹೆಂಡ್ತಿ.. ಹೊಸ ಕಾರು..’ ಎಂಬ ಕಮರ್ಷಿಯಲ್ ಒಂದನ್ನು ನೀವು ನೋಡೇ ಇರ್ತಿರಿ. ಅಂದ್ರೆ, ಪ್ರತಿಷ್ಠಿತ ಏರಿಯಾದಲ್ಲಿ ಸುಂದರವಾದ ಒಂದು ಮನೆ, ಅದರ ಮುಂದೆ ಒಂದೊಳ್ಳೆಯ ಕಾರು.. ಇದು ಎಲ್ಲರ ಕನಸು. ಹಾಗೆ ನಾವೊಂದು ಹೊಸ ಮನೆ ಕಟ್ಟಿಸುವ ಸಂದರ್ಭದಲ್ಲಿ, ಕಾರಿಗಾಗಿ ಒಂದು ಸುಸಜ್ಜಿತ ಶೆಡ್ ಕಟ್ಟಿಸುವುದು ವಾಡಿಕೆ. ಆದರೆ ಅಮೆರಿಕಾದ (USA) ಕ್ಯಾಲಿಫೋರ್ನಿಯಾದಲ್ಲಿರುವ (California) ಈ ನಗರದಲ್ಲಿ ಮನೆ ಕಟ್ಟಿಸುವವರು ತಮ್ಮ ಮನೆ ಮುಂದೆ ಒಂದು ಕಿರು ವಿಮಾನ ನಿಲುಗಡೆಗೆ ಹ್ಯಾಂಗರ್ ನಿರ್ಮಾಣದ ಪ್ಲ್ಯಾನ್ ಮಾಡುತ್ತಾರೆ. ಯಾಕೆಂದ್ರೆ ಈ ಹಳ್ಳಿಯಲ್ಲಿರುವ ಪ್ರತಿಯೊಬ್ಬರ ಬಳಿಯೂ ಪ್ರೈವೃಟ್ ವಿಮಾನವಿದೆ (Private Jet)! ಇದೇ ಇವತ್ತಿನ ವೈರಲ್ ಸುದ್ದಿ (Viral News).

ಕ್ಯಾಲಿಫೋರ್ನಿಯದಲ್ಲಿರುವ ಕ್ಯಾಮರೂನ್ ಏರ್ ಪಾರ್ಕ್ (Cameron airpark) ಸಿಟಿಯಲ್ಲಿ ಪ್ರತಿಷ್ಠಿತ ಬ್ಯಸಿನೆಸ್ ಮ್ಯಾನ್ ಗಳು ಮತ್ತು ಇನ್ನಿತರ ಕೆಲಸಗಳಲ್ಲಿ ಇರುವ ಪ್ರತಿಯೊಬ್ಬರಲ್ಲೂ ಪ್ರೈವೇಟ್ ಜೆಟ್ ಇದೆ.

ಈ ಏರ್ ಪಾರ್ಕ್ ಸಿಟಿ ಕಾನ್ಸೆಪ್ಟ್ ಗೆ ಎರಡನೆ ವಿಶ್ವ ಯುದ್ಧದ (World War II) ಸಂದರ್ಭದ ಲಿಂಕ್ ಇದೆ. ವಿಶ್ವ ಯುದ್ಧದ ಬಳಿಕ ಯುದ್ಧದ ಬಳಕೆಗಾಗಿ ದೇಶಾದ್ಯಂತ ನಿರ್ಮಿಸಲಾಗಿದ್ದ ಹಲವರು ಏರ್ ಫೀಲ್ಡ್ ಗಳು (Air Field) ಅನಾಥ ಸ್ಥಿತಿ ತಲುಪಿದವು. ಮತ್ತು ದೇಶದಲ್ಲಿ ಪೈಲೆಟ್ ಗಳ ಸಂಖ್ಯೆಯಲ್ಲೂ ಬಹಳಷ್ಟು ಏರಿಕೆಯಾಗಿತ್ತು. 31 ಸಾವಿರದಷ್ಟಿದ್ದ ತರಬೇತು ಹೊಂದಿದ ಪೈಲೆಟ್ ಗಳ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಮಾನಯಾನ ಪ್ರಾಧಿಕಾರವು ದೇಶಾದ್ಯಂತ ಇರುವ ಬಳಸದೇ ಇರುವ ಏರ್ ಸ್ಟ್ರಿಪ್ ಗಳನ್ನು ನಿವೃತ್ತ ರಕ್ಷಣಾ ವಿಭಾಗದ ಪೈಲೆಟ್‌ಗಳಿಗಾಗಿ ಜನವಸತಿ ಏರ್ ಪಾರ್ಕ್ ಮಾಡುವ ನಿರ್ಧಾರವನ್ನು ಮಾಡುತ್ತದೆ.

ಹೀಗೆ, 1963ರಲ್ಲಿ ಸ್ಥಾಪನೆಗೊಂಡ ಈ ಕ್ಯಾಮರೂನ್ ಏರ್ ಪಾರ್ಕ್ ಆ ಬಳಿಕದ ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗೆ ಒಳಪಟ್ಟಿದೆ. ಇದೀಗ ಈ ಪಟ್ಟಣದಲ್ಲಿ ಮನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಸದ್ಯಕ್ಕೆ ಇಲ್ಲಿ 124  ಮನೆಗಳಿವೆ ಮತ್ತು ಎಲ್ಲಾ ಮನೆಗಳ ಮುಂಭಾಗದಲ್ಲೂ ಖಾಸಗಿ ಜೆಟ್ ಪಾರ್ಕಿಂಗ್ ಗೆ ಹ್ಯಾಂಗರ್ ಇದೆ.

ಈ ಪಟ್ಟಣದ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ನಿಮಗೆ ಪ್ರೈವೇಟ್ ಜೆಟ್‌ಗಳೇ ಕಾಣ ಸಿಗುತ್ತವೆ. ಮೇಲಿನಿಂದ ಈ ಪಟ್ಟಣದ ನೋಟ ನಿಮಗೆ ಐಷಾರಾಮಿ ಕಾರುಗಳ ಬದಲಿಗೆ ಲೋಹದ ಹಕ್ಕಿಗಳು ಸಾಲುಗಟ್ಟಿ ನಿಂತಿರುವುದನ್ನು ನೋಡುವುದೇ ಕಣ್ಣುಗಳಿಗೆ ಒಂದು ಹಬ್ಬ!

ಈ ಸುದ್ದಿಯನ್ನೂ ಓದಿ: Viral Video: ನವದಂಪತಿಯ ಟ್ರಕ್ ‘ಅಂಬಾರಿ’ – ಪತಿಯ ಜೊತೆಗೇ ಇರಲು ಕೆಲಸ ಬಿಟ್ಟು ಟ್ರಕ್ ಏರಿದ ಪತ್ನಿ!

 ಫ್ಲೈ-ಇನ್ ಕಮ್ಯುನಿಟಿ ಎಂದು ಕರೆಸಿಕೊಳ್ಳುವ ಈ ರೆಸಿಡೆಂಟ್ ಏರ್ ಪಾರ್ಕ್ ಖಾಸಗಿ ವ್ಯಕ್ತಿಗಳ ಸುಪರ್ದಿಯಲ್ಲಿರುವುದರಿಂದ ಇಲ್ಲಿಗೆ ಹೊರಗಿನ ವ್ಯಕ್ತಿಗಳಿಗೆ ಸೂಕ್ತ ಅನುಮತಿಯಿಲ್ಲದೇ ಪ್ರವೇಶ ನಿಷಿದ್ಧವಾಗಿದೆ.ಇಲ್ಲಿ ಬೀದಿ ದೀಪಗಳು, ಲೆಟರ್ ಬಾಕ್ಸ್‌ಗಳು ಮತ್ತು ರಸ್ತೆ ಸೂಚನಾ ಫಲಕಗಳನ್ನು ಉಳಿದ ಕಡೆಗಳಿಂತ ಕಡಿಮೆ ಎತ್ತರದಲ್ಲಿ ಸ್ಥಾಪಿಸಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಪ್ರೈವೇಟ್ ಜೆಟ್‌ಗಳ ಲ್ಯಾಂಡಿಂಗ್ ಮತ್ತು ಟೇಕಾಫ್‌ಗೆ ಯಾವುದೇ ತೊಂದರೆಯುಂಟಾಗುವುದಿಲ್ಲ.