ಉಗಾಂಡಾ: ಮಹಾಭಾರತದ ದೃತರಾಷ್ಟ್ರನಿಗೆ 101 ಮಕ್ಕಳಿದ್ದರು ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇಂದಿನ ಯುಗದಲ್ಲಿ ಇಲ್ಲೊಬ್ಬ ಮಹಾಶಯ 12 ಹೆಂಡತಿಯರೊಂದಿಗೆ 102 ಮಕ್ಕಳಿಗೆ ತಂದೆಯಾಗಿದ್ದಾನೆ! ಈತ ಉಗಾಂಡಾ (Uganda) ದೇಶದ ವ್ಯಕ್ತಿಯಾಗಿದ್ದು, ಆತನ ಮಕ್ಕಳ ಪಟ್ಟಿ ಎಷ್ಟು ಉದ್ದವಾಗಿದೆ ಎಂದರೆ ಆತನಿಗೆ ತನ್ನ ಮಕ್ಕಳ ಹೆಸರೇ ನೆನಪೇ ಇಲ್ಲವಂತೆ (Viral News)
ಪೂರ್ವ ಉಗಾಂಡಾದ ಮುಕಿಜಾ ಗ್ರಾಮದ ನಿವಾಸಿಯಾದ ಮೂಸಾ ಹಸಹ್ಯಾ ಕಸೇರಾ ಅವರು ಇದೀಗ ತಮ್ಮ ಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 102 ಮಕ್ಕಳಿಗೆ ತಂದೆಯಾಗಿರುವುದು ಮಾತ್ರವಲ್ಲದೆ ಅವರು 578 ಮೊಮ್ಮಕ್ಕಳಿಗೆ ಅಜ್ಜ ಕೂಡ ಆಗಿದ್ದಾರೆ.
ಇಷ್ಟೊಂದು ಮಕ್ಕಳನ್ನು ಮಾಡಿ ಈಗ ಆರ್ಥಿಕ ಹಿಂಜರಿತದ ಕಾರಣ ನೀಡಿ ತಾನು ಇನ್ನು ಮುಂದೆ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ ಎಂಬ ಈತನ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಮಗೆ ಆರ್ಥಿಕ ಸಂಕಷ್ಟವಿದ್ದು, ಕುಟುಂಬವನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದೆ ಎಂದಿದ್ದಾರೆ. ಈತನ ಪತ್ನಿಯರು ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಲು ಶುರು ಮಾಡಿದ್ದಾರೆ ಎಂದು ಈತ ಹೇಳಿಕೆ ನೀಡಿದ್ದಾರೆ.
ಜೀವನಕ್ಕೆ ತಗಲುವ ವೆಚ್ಚ ಹಾಗೂ ಕುಟುಂಬವೂ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಸಾಗಿದ್ದರಿಂದ ವರ್ಷದಿಂದ ವರ್ಷಕ್ಕೆ ನನ್ನ ಆದಾಯ ಕುಸಿಯುತ್ತಾ ಬಂದಿದೆ. ನಾನು ಒಂದಾದ ಮೇಲೆ ಒಂದು ಮಹಿಳೆಯನ್ನು ಮದುವೆಯಾಗುತ್ತಾ ಹೋದೆ ಎಂದು ಹೇಳಿದ ಆತ ಹೇಗೆ ಕೇವಲ ಒಂದು ಹೆಣ್ಣಿನಿಂದ ತೃಪ್ತಿ ಪಡೆಯಲು ಸಾಧ್ಯ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾನೆ. ಈತನ ಕೊನೆಯ ಹೆಂಡತಿ ಈತನ ಹಿರಿಯ ಮಗನಿಗಿಂತ 21 ವರ್ಷ ಚಿಕ್ಕವಳಾಗಿದ್ದಾಳೆ. ಈತ ತನ್ನ ಎಲ್ಲಾ ಪತ್ನಿಯರನ್ನು ಒಂದೇ ಮನೆಯಲ್ಲಿ ಇಟ್ಟಿದ್ದು, ಅವರನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಹಾಗೂ ಅವರು ಬೇರೆಯವರೊಂದಿಗೆ ಓಡಿ ಹೋಗದಂತೆ ತಡೆಯಲು ಸುಲಭವಾಗುತ್ತದೆ ಎಂದು ಈ ಯೋಜನೆ ರೂಪಿಸಿದ್ದಾನಂತೆ.
ಮೂಸಾ ತನ್ನ ಪ್ರತಿ ಹೆಂಡತಿಯೊಂದಿಗೆ ಎಂಟು ಅಥವಾ ಒಂಬತ್ತು ಮಕ್ಕಳನ್ನು ಪಡೆದಿದ್ದಾರೆ. ಮೂಸಾ ಅವರ ಮೊದಲ ಮದುವೆ 1972 ರಲ್ಲಿ ನಡೆದಿದ್ದು, ಆಗ ಅವರು ಕೇವಲ 17 ವರ್ಷದವರಾಗಿದ್ದರು. ಕಾಲಾನಂತರದಲ್ಲಿ, ಅವರು 12 ಮಹಿಳೆಯರನ್ನು ವಿವಾಹವಾದರು.
ಈ ಸುದ್ದಿಯನ್ನೂ ಓದಿ : Viral Video: ಏಕಾಏಕಿ ಕುಸಿದು ಬಿದ್ದ 533 ಮೀ. ಉದ್ದದ ಸೇತುವೆ; ಭೀಕರ ದೃಶ್ಯ ಭಾರೀ ವೈರಲ್