ಥೈಲ್ಯಾಂಡ್: 2024ರ ವರ್ಷಕ್ಕೆ ಗುಡ್ ಬೈ ಹೇಳಿ 25ನೇ ವರ್ಷವನ್ನು ಸ್ವಾಗತಿಸುತ್ತಿದ್ದು, ಇಂದು ಮೊದಲ ದಿನದಲ್ಲಿದ್ದೇವೆ. ಮೊದಲ ದಿನವೇ ಹತ್ತಾರು ವಿಷಯಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದ್ದು, ಇಲ್ಲೊಂದು ಆಸಕ್ತಿದಾಯಕ ವಿಚಾರ ವೈರಲ್ ಆಗಿದೆ. ಥೈಲ್ಯಾಂಡ್ ತೆರಳುತ್ತಿದ್ದ ಮಹಿಳೆ, ಸನ್ಯಾಸಿಯ ಸಂಭಾಷಣೆಗೆ ವೇದಿಕೆಯಾಗಿದ್ದು ಇದರ ಫೊಟೋ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ(Viral News).
ಸ್ಮಾರ್ಟ್ಫೋನ್ಗಳ ಈ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಎನ್ನುವುದು ನಮ್ಮ ಜೀವನದಲ್ಲಿ ಯಾವ ರೀತಿ ಬಳಕೆ ಮಾಡಿಕೊಳ್ಳುತ್ತೇವೆ ಎನ್ನುವುದಕ್ಕೆ ಇಲ್ಲೊಂದು ಮಹಿಳೆ ಮತ್ತು ಥಾಯ್ ಸನ್ಯಾಸಿಯೊಬ್ಬರ ಸಂವಾದ ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರ ಈ ಪೋಸ್ಟ್ ಬಹಳಷ್ಟು ಸದ್ದು ಮಾಡುತ್ತಿದ್ದು ಥೈಲ್ಯಾಂಡ್‌ಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಸನ್ಯಾಸಿ ಮತ್ತು ಮಹಿಳೆಯ ನಡುವೆ ನಡೆದ ಸಂವಾದ ಜನರ ಹೃದಯವನ್ನೇ ಗೆದ್ದಿದೆ.
ಹೊಸವರ್ಷದ ಆಚರಣೆಗಾಗಿ ಮಹಿಳೆಯೊಬ್ಬರು ಥೈಲ್ಯಾಂಡ್‌ಗೆ ಪ್ರಯಾಣ ಮಾಡಿದ್ದಾರೆ. ಈ ಸಂದರ್ಭ ದಲ್ಲಿ ಆಕೆಗೆ ಸಂವಹನ ಮಾಡಲು ಭಾಷೆ ಸಮಸ್ಯೆಯಾಗಿದ್ದು ಥೈಲಾಂಡ್ ಭಾಷೆಯನ್ನು ಪ್ರಯಾಣಿಕನೊಂದಿಗೆ ಸಂವಹನ ನಡೆಸಲು ಭಾಷಾಂತರ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಥೈಲ್ಯಾಂಡ್‌ಗೆ ಪ್ರಯಾಣಿಸುವ ಮಹಿಳೆ Google ಅನುವಾದದ ಮೂಲಕ ಅಲ್ಲಿನ ಭಾಷೆಯನ್ನು ಅನುವಾದ ಮಾಡಿ ಅವರ ಜೊತೆ ಇದಂತಹ ಸಹ ಪ್ರಯಾಣಿಕ ಸನ್ಯಾಸಿಗೆ ತೋರಿಸುತ್ತಾರೆ. ಆ ವ್ಯಕ್ತಿ ಕೂಡ ಕೂಡ ಗೂಗಲ್ ಅನುವಾದದ ಮೂಲಕ ಅವರಿಗೆ ಉತ್ತರ ನೀಡುತ್ತಾರೆ. ತಾನು ಸಂವಹನ ನಡೆಸಲು ಭಾಷಾಂತರ ತಂತ್ರಜ್ಞಾನವನ್ನು ಈ ಹೊಸ ವರ್ಷದಲ್ಲಿ ಹೇಗೆ ಬಳಸಿಕೊಂಡೆ ಎಂದು ಪೋಸ್ಟ್ ಮಾಡಿದ್ದಾರೆ
ಥೈಲ್ಯಾಂಡ್‌ಗೆ ಭೇಟಿ ಮಾಡಿದ ಆ ಸನ್ಯಾಸಿಯ ಪೋಟೊವನ್ನು ಅವರು ತಮ್ಮ Instagram ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದು ನನಗೆ ಮೆಮೊರೆಬಲ್ ಎಂದು ಅವರು ಬರೆದುಕೊಂಡಿದ್ದಾರೆ. ಈ ಎಲ್ಲಾ ನೆನಪುಗಳಿಗೆ ಧನ್ಯವಾದಗಳು. ಒಳ್ಳೆಯದು ಅಥವಾ ಕೆಟ್ಟದ್ದೊ ಸನ್ಯಾಸಿಯೊಂದಿಗಿನ ಈ ಸಂವಹನ ತುಂಬಾ ಸಕಾರಾತ್ಮಕತೆಯನ್ನು ತಂದಿದೆ. ನನ್ನ ಈ ಹೊಸ ವರ್ಷ ಈ ಮೂಲಕ ಆರಂಭವಾಯಿತು ಎಂದು ಬರೆದುಕೊಂಡಿದ್ದಾರೆ.
ಈ ವೈರಲ್ ಪೋಸ್ಟ್ ನೋಡಿ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ವಾವ್ ನಿಮ್ಮ ಯೋಚನೆ ಚೆನ್ನಾಗಿದೆ! ಎಂದು Instagram ಬಳಕೆದಾರರೊಬ್ಬರು ಪ್ರತಿಕ್ರಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಇದು ನಂಬಲಾಗದ್ದು Google translate ಹೀಗೂ ಬಳಕೆಯಾಗುತ್ತೆ ಎಂದು ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ.ಈ ಮೂಲಕ ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಈ ಗೂಗಲ್ ಅನ್ನೋದು ಪ್ರಯಾಣ ಮಾಡೋರಿಗೆ ಎಷ್ಟು ಅನುಕೂಲ ಎಂಬುದು ಈ ಮೂಲಕ ಸಾಬೀತಾಗಿದೆ.
ಈ ಸುದ್ದಿಯನ್ನೂ ಓದಿ: Viral Video: AI ಚಮತ್ಕಾರದಿಂದ ಸಾಂತಾಕ್ಲಾಸ್ ವೇಷದಲ್ಲಿ ಕಾಣಿಸಿಕೊಂಡ ಕೇಜ್ರಿವಾಲ್; ವಿಡಿಯೊ ಫುಲ್ ವೈರಲ್!