Saturday, 4th January 2025

Viral Post: ಈ ವರ್ಷ 3ನೇ ಮಹಾಯುದ್ಧ ಫಿಕ್ಸ್… ಕೊರೋನಾ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದವನಿಂದ ಮತ್ತೊಂದು ಭಯಾನಕ ಭವಿಷ್ಯವಾಣಿ!

ನವದೆಹಲಿ: ಎಲ್ಲರಿಗೂ ತಿಳಿದಿರೋ ಹಾಗೇ, 2012 ರಲ್ಲಿ ಪ್ರಳಯ ಆಗುತ್ತೆ. ಜಗತ್ತು ಅಂತ್ಯ (The End Of The World) ಕಾಣುತ್ತೆ ಎಂಬ ವದಂತಿಗಳು ಹಬ್ಬಿತ್ತು. 2009 ರಿಂದ 2012ರವರೆಗೆ ಜಗತ್ತಲ್ಲಿ ಪ್ರಳಯಾಂತಕಾರಿ ಘಟನೆಗಳು ನಡೆದು, ನಂತರ 2012 ಡಿಸೆಂಬರ್ 21ಕ್ಕೆ ಜಗತ್ತು ಸರ್ವನಾಶ (The world is in ruins) ಆಗುತ್ತದೆ ಎಂದು ಹೇಳಲಾಗಿತ್ತು. ಈ ಸುದ್ದಿಯನ್ನು ನಾವು, ನೀವೆಲ್ಲಾ ಕೇಳಿರುತ್ತೀರಿ (Viral Post).

ಆದರೆ ಅದೆಲ್ಲಾ ಸುಳ್ಳಾಗಿತ್ತು. ಇನ್ನು ವಿಶ್ವ ಅಸ್ತಿತ್ವದಲ್ಲಿರುವುದು ನಮ್ಮ ಕಣ್ಣಿಗೆ ಕಾಣುತ್ತಲೇ ಇದೆ. ಆದರೆ ಇದೇ ರೀತಿಯ ಒಂದು ಸುದ್ದಿ ಈಗ ಮುನ್ನೆಲೆಗೆ ಬಂದಿದೆ. ಜಗತ್ತು ಪ್ರಳಯವಾಗುತ್ತೆ ಎಂಬ ಸುದ್ದಿ ಒಂದು ಈಗ ಭಾರೀ ವೈರಲ್‌ ಆಗಿದೆ. ಈ ಕುರಿತು 2018 ರಲ್ಲಿ ಕೊರೊನಾ ರೀತಿಯ ಸಾಂಕ್ರಾಮಿಕ ರೋಗ ಬರಲಿದೆ ಮತ್ತು ಲಕ್ಷಾಂತರ ಜನರು ಸಾಯುತ್ತಾರೆ ಎಂದು ಭವಿಷ್ಯವಾಣಿ ನುಡಿದಿದ್ದ ವ್ಯಕ್ತಿ ಮತ್ತೇ ಜಗತ್ತಿನಲ್ಲಿ ಮುಂಬರುವ ದಿನಗಳಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಭವಿಷ್ಯ ಹೇಳಿದ್ದು, ಸದ್ಯದಲ್ಲೇ ವಿಶ್ವ ಅಂತ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೆ ಆ ವ್ಯಕ್ತಿ ಹೇಳಿದ್ದೇನು ನೋಡೋಣಾ ಬನ್ನಿ?

ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಂಬಾ ವಂಗಾ ಅವರು ನುಡಿದಿರುವ ಹೆಚ್ಚಿನ ಭವಿಷ್ಯವಾಣಿಗಳು ನಿಜವಾಗಿವೆ. ಹೌದು ಅಮೆರಿಕದ ಮೇಲೆ ಉಗ್ರರ ದಾಳಿ, ಕೋವಿಡ್‌ ಸಾಂಕ್ರಾಮಿಕ ರೋಗ ಮುಂತಾದ ಪ್ರಮುಖ ಘಟನಾವಳಿಗಳ ಬಗ್ಗೆ ಅವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಇತ್ತೀಚಿಗಷ್ಟೇ ಅವರು ಡೊನಾಲ್ಡ್‌ ಟ್ರಂಪ್‌ ಬಗ್ಗೆ ನುಡಿದಿದ್ದ ಶಾಕಿಂಗ್‌ ಭವಿಷ್ಯವಾಣಿಯ ಸುದ್ದಿಯೊಂದು ಸಖತ್‌ ವೈರಲ್‌ ಆಗಿತ್ತು.

ಆದರೆ ಇದೀಗ 38 ವರ್ಷದ ವ್ಯಕ್ತಿ ನಿಕೋಲಸ್ ಔಜುಲಾ(Nicholas Aujula) ಅಚ್ಚರಿಯ ಮಾತುಗಳನ್ನಾಡಿದ್ದು, ಈ ವರ್ಷ ನಡೆಯುವ ಆಘಾತಕಾರಿ ಘಟನೆಗಳ ಕುರಿತು ಅವರು ಭವಿಷ್ಯ ನುಡಿದಿದ್ದಾರೆ. ಹೌದು 2018 ರಲ್ಲಿ ಕೊರೊನಾ ರೀತಿಯ ಸಾಂಕ್ರಾಮಿಕ ರೋಗ ಬರಲಿದೆ ಮತ್ತು ಲಕ್ಷಾಂತರ ಜನರು ಸಾಯುತ್ತಾರೆ ಎಂದು ಹೇಳಿದ್ದ ನಿಕೋಲಸ್ ಮಹಾಯುದ್ದ ನಡೆಯುವ ಸೂಚನೆ ನೀಡಿದ್ದು, ಇಲ್ಲಿಯವರೆಗೂ ನಿಕೋಲಸ್ ನುಡಿದಿರುವ ಎಲ್ಲಾ ಭವಿಷ್ಯಗಳು ನಿಜವಾಗಿದೆ.

ಈಗ ಅದೇ ವ್ಯಕ್ತಿ ಯುದ್ದ ಸಂಭವಿಸುವ ಬಗ್ಗೆ ಸುಳಿವು ನೀಡಿದ್ದು, 2025ರಲ್ಲಿ ಮೂರನೇ ಮಹಾಯುದ್ಧ ಖಚಿತ ಎಂದು ಔಜುಲಾ ಹೇಳಿದ್ದಾರೆ. ಧರ್ಮ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ಜನರು ಪರಸ್ಪರ ಕತ್ತು ಸೀಳಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ರಾಜಕೀಯ ಹತ್ಯೆಗಳು ನಡೆಯುತ್ತಿವೆ. ದುಷ್ಟ ಮತ್ತು ಹಿಂಸೆ ಈ ಭೂಮಿಯನ್ನು ಆವರಿಸಿಕೊಳ್ಳಲಿದೆ. ಹೊಸ ವರ್ಷದಲ್ಲಿ ಪ್ರಯೋಗಾಲಯದಲ್ಲಿ ಅಂಗಗಳನ್ನು ತಯಾರಿಸಲಾಗುವುದು ಎಂದು ನಿಕೋಲಸ್ ಔಜುಲಾ ಭವಿಷ್ಯ ನುಡಿದಿದ್ದಾರೆ.

ಅಷ್ಟೇ ಅಲ್ಲ, ಭಾರೀ ಮಳೆ ಮತ್ತು ವಿನಾಶಕಾರಿ ಪ್ರವಾಹ ಸಂಭವಿಸುತ್ತದೆ. ಇದರಿಂದ ಲಕ್ಷಾಂತರ ಮನೆಗಳಿಗೆ ಹಾನಿಯಾಗಲಿದೆ. ಲಕ್ಷ ಮಂದಿ ನಿರಾಶ್ರಿತರಾಗುತ್ತಾರೆ. ಸಮುದ್ರ ಮಟ್ಟವು ವೇಗವಾಗಿ ಏರುತ್ತದೆ, ಇದರಿಂದಾಗಿ ಅನೇಕ ನಗರಗಳು ಮುಳುಗುತ್ತವೆ. ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜಕೀಯ ಪತನವನ್ನು ಎದುರಿಸಬೇಕಾಗುತ್ತದೆ. ಜಗತ್ತಿನಲ್ಲಿ ಹಣದುಬ್ಬರ ವೇಗವಾಗಿ ಏರುತ್ತಿದೆ. ಇಷ್ಟೇ ಅಲ್ಲ, ಬ್ರಿಟನ್ ರಾಜಕುಮಾರ ವಿಲಿಯಂ ಹ್ಯಾರಿ ನಡುವೆ ರಾಜಿಯಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರವನ್ನು ನಿಕೊಲಸ್‌ ನುಡಿದಿದ್ದಾರೆ.

ನಿಕೋಲಸ್ ಔಜುಲಾ ಅವರು 17 ವರ್ಷ ವಯಸ್ಸಿನವರಾಗಿದ್ದಾಗ, ಯಾರೋ ಕನಸಿನಲ್ಲಿ ಬಂದು ಭವಿಷ್ಯದ ಬಗ್ಗೆ ಹೇಳಿದದರು ಎಂದು ಹೇಳಿಕೊಂಡರು. ಅವರು ಇಲ್ಲಿಯವರೆಗೆ ಯಾವುದೇ ಭವಿಷ್ಯ ನುಡಿದಿದ್ದರೂ ಅದು ಆ ಕನಸನ್ನು ಆಧರಿಸಿದೆ. ಅಮೆರಿಕಾದ ಅತಿದೊಡ್ಡ ಚಳುವಳಿಗಳಲ್ಲಿ ಒಂದಾದ ಬ್ಲ್ಯಾಕ್ ಲೈವ್ಸ್ ಮ್ಯಾಟರ್, ಡೊನಾಲ್ಡ್ ಟ್ರಂಪ್ ಅವರ ಗೆಲುವು, ಕೃತಕ ಬುದ್ಧಿಮತ್ತೆಯ ಉದಯ, ನೊಟ್ರೆ ಡೇಮ್ ಬೆಂಕಿ, ಕೋವಿಡ್ ಮತ್ತು ರೋಬೋಟ್ ಸೈನ್ಯದ ಬಗ್ಗೆ ಅಜುಲಾ ಅವರ ನಿಖರವಾದ ಮುನ್ಸೂಚನೆಗಳನ್ನು ನೀವು ನಂಬುವುದಿಲ್ಲ. ನಿಕೋಲಸ್‌ ಅವರು ಹೇಳಿರುವ ಭವಿಷ್ಯಗಳು ಇಲ್ಲಿಯವರೆಗೂ ನಿಜವಾಗಿದೆ.

ನಿಕೋಲಸ್‌ ಹದಿಹರೆಯದವನಾಗಿದ್ದಾಗ ಈ ರೀತಿಯ ಅತೀಂದ್ರಿಯ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಹರಿತುಕೊಂಡಿರುವುದಾಗಿ ಹೇಳಿದ್ದಾರೆ. ಕೆಲವು ದಿನಗಳವರೆಗೆ ಕೋಮಾಕ್ಕೆ ಹೋಗಿದ್ದ ಅರು ಹಿಂದಿನ ಜೀವನದ ದರ್ಶನಗಳನ್ನು ನೋಡಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ. ನಾನು ಈಜಿಪ್ಟಿನಲ್ಲಿ ಒಬ್ಬ ರಾಣಿಯನ್ನು ನೋಡಿದೆ. ಚೀನಾದಲ್ಲಿ ಟೈಲರ್ ಆಗಿ ಮತ್ತು ಹಿಮಾಲಯದಲ್ಲಿ ಸನ್ಯಾಸಿನಿಯಾಗಿ ಕೆಲಸ ಮಾಡುತ್ತಿದ್ದಾನೆ. ನಾನು ಆಫ್ರಿಕಾದಲ್ಲಿ ಜನಿಸಿದಾಗ ನಾನು ಮಾಟಗಾತಿಯಾಗಿ ಜನಿಸಿದೆ. ಆಗ ನಾನೂ ಸಿಂಹವಾಗಿ ಹುಟ್ಟಿದ್ದೆ. ನಾನು ಅನೇಕ ವಿಭಿನ್ನ ಅನುಭವಗಳನ್ನು ಹೊಂದಿದ್ದೇನೆ ಅದು ನನಗೆ ಭವಿಷ್ಯ ನುಡಿಯುವ ಶಕ್ತಿಯನ್ನು ನೀಡುತ್ತದೆ. ಸಾವು ಅಂತ್ಯವಲ್ಲ ಎಂದು ನಮಗೆ ತಿಳಿದಿದೆ, ಏಕೆಂದರೆ ಆತ್ಮವು ಎಂದಿಗೂ ಸಾಯುವುದಿಲ್ಲ. ನಾವು ಮತ್ತೆ ಹುಟ್ಟುತ್ತೇವೆ ಎಂದು ನಿಕೋಲಸ್ ಹೇಳುತ್ತಾರೆ.

ಈ ಸುದ್ದಿಯನ್ನೂ ಓದಿ: Viral Video: ಮೊದಲ ಬಾರಿಗೆ ಪಿಜ್ಜಾ-ಬರ್ಗರ್‌ ಸವಿದ 90ರ ಅಜ್ಜಿ! ಕ್ಯೂಟ್ ರಿಯಾಕ್ಷನ್ ವಿಡಿಯೊ ಫುಲ್ ವೈರಲ್