ನವದೆಹಲಿ: ಇಂದು ಹೊರ ದೇಶಕ್ಕೆ ಟ್ರಿಪ್ ಹೋಗುವುದು, ಜಾಲಿ ಮಾಡುವುದು ಸಾಮಾನ್ಯವಾಗಿದೆ. ಅನೇಕರು ಹೊಸ ಸ್ಥಳಗಳನ್ನು ಅನ್ವೇಷಿಸಲು ಅಲ್ಲಿನ ವಿಶೇಷತೆ ಬಗ್ಗೆ ತಿಳಿಯಲು ಹೊರ ದೇಶಕ್ಕೆ ಪ್ರಯಾಣ ಮಾಡಿದರೆ, ಇನ್ನು ಹೆಚ್ಚಿನವರು ಸೋಷಿಯಲ್ ಮೀಡಿಯಾದ ಬ್ಲಾಗ್, ಯೂಟ್ಯೂಬ್‌ಗಾಗಿ ದೇಶ ವಿದೇಶ ಸುತ್ತುತ್ತಾರೆ. ಆದರೆ ಇಲ್ಲೊಂದು 19 ವರ್ಷದ ಮಹಿಳೆ ಚಿಕ್ಕ ವಯಸ್ಸಿನಲ್ಲೇ ದೇಶ, ವಿದೇಶಗಳನ್ನು ಸುತ್ತಿ ಪ್ರಸಿದ್ಧಿಯಾಗಿದ್ದು ಕೋಟ್ಯಾಂತರ ಜನರ ಹೃದಯ ಗೆದ್ದಿದ್ದಾರೆ.(viral Video)
ಈಕೆ ಈಗಾಗಲೇ 90 ದೇಶಗಳಿಗೆ ಪ್ರಯಾಣಿಸಿದ್ದು ಇತ್ತೀಚೆಗೆ ಭೇಟಿಯಾದ ತನ್ನ ಆರು ನೆಚ್ಚಿನ ಸ್ಥಳಗಳನ್ನು Instagramನಲ್ಲಿ ಹಂಚಿಕೊಂಡಿದ್ದು ಇವರ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗಿದೆ. ಸೋಫಿಯಾ ಲೀ ಎನ್ನುವ 19 ವರ್ಷದ ಕಂಟೆಂಟ್ ಕ್ರಿಯೇಟರ್, ತಾನು 90 ದೇಶಗಳಿಗೆ ಭೇಟಿ ನೀಡಿದ್ದೇನೆ ಎಂದು ತನ್ನ ಬಯೋದಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ತಿಂಗಳು ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಅವರು 19 ನೇ ವಯಸ್ಸಿಗೆ 90 ದೇಶಗಳಿಗೆ ಭೇಟಿ ನೀಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗೆಯೇ ತನ್ನ ಆರು ನೆಚ್ಚಿನ ದೇಶಗಳ ಪಟ್ಟಿಯನ್ನು ಹಂಚಿಕೊಂಡಿದ್ದು ಅದರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಮೊದಲ ಆಯ್ಕೆ ಭಾರತ!
ಸೋಫಿಯಾ ಪ್ರಾರಂಭದಲ್ಲಿ ತಾಂಜಾನಿ ದೇಶವನ್ನು ಆರನೇ ಸ್ಥಾನಕ್ಕೆ ನಂತರ ಫ್ರಾನ್ಸ್ ಐದನೇ ಸ್ಥಾನ ಕೋಸ್ಟರಿಕಾ ನಾಲ್ಕನೇ, ಜಾರ್ಜಿಯಾ ಮೂರನೇ, ಥೈಲ್ಯಾಂಡ್ ಎರಡನೇ ಮತ್ತು ಭಾರತಕ್ಕೆ ಮೊದಲ ಸ್ಥಾನ ನೀಡಿದ್ದಾರೆ. ಭಾರತ ನಂಬರ್ ಒನ್ ಸ್ಥಾನ ಪಡೆದಿರುವುದನ್ನು ನೋಡಿದ ಅನೇಕ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊ 3 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದ್ದು ಹಲವು ಬಳಕೆದಾರರು ಆಕೆಯ ದೇಶ ಸುತ್ತುವ ಹವ್ಯಾಸಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಒಬ್ಬ ಬಳಕೆದಾರರು ತನ್ನ ಮುಂದಿನ ಭೇಟಿಗೆ ಈಶಾನ್ಯ ಭಾರತ ಆಯ್ಕೆ ಮಾಡಿ ಎಂದು ಭಾರತೀಯರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಆಕೆಯನ್ನು ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಹೇಳಿದ್ದಾರೆ. ಒಟ್ಟಿನಲ್ಲಿ ಭಾರತ ತನ್ನ ನೆಚ್ಚಿನ ಆಯ್ಕೆ ಎಂದಿದ್ದಕ್ಕೆ ಭಾರತೀಯರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: School Trips: ಶೈಕ್ಷಣಿಕ ಪ್ರವಾಸಗಳ ರದ್ದು; ಸುದ್ದಿಗೆ ಸ್ಪಷ್ಟನೆ ನೀಡಿದ ಶಿಕ್ಷಣ ಇಲಾಖೆ