ಶಾಂಡಾಂಗ್: ಪ್ರಾಣಿಗಳು ಮನುಷ್ಯರ ಭಾವನೆಯನ್ನು, ಮಾತುಗಳನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತವೆ ಎನ್ನುವುದಕ್ಕೆ ಈ ವಿಡಿಯೊವೊಂದು ಸಾಕ್ಷಿಯಾಗಿದೆ. ಆನೆಯೊಂದು ತನ್ನ ಆವರಣದೊಳಗೆ ಆಕಸ್ಮಿಕವಾಗಿ ಬಿದ್ದಂತಹ ಪುಟ್ಟ ಮಗುವಿನ ಶೂ ಅನ್ನು ಹಿಂತಿರುಗಿಸುವ ಈ ವಿಡಿಯೊ ನೆಟ್ಟಿಗರ ಹೃದಯ ಗೆದ್ದಿದ್ದು ಆನೆ ತೋರಿದ ಬುದ್ಧಿವಂತಿಕೆ ನೋಡಿ ನೆಟ್ಟಿಗರೇ ಶಾಕ್ ಆಗಿದ್ದಾರೆ(Viral Video).
ಚೀನಾದ ಮೃಗಾಲಯವೊಂದರಲ್ಲಿ ಈ ಘಟನೆ ನಡೆದಿದ್ದು ಮಗುವೊಂದು ಆನೆಯನ್ನು ನೋಡುತ್ತಿದ್ದ ಸಂದರ್ಭ ಪುಟ್ಟ ಮಗುವಿನ ಕಾಲಲ್ಲಿ ಇದ್ದ ಶೂ ಆನೆಯ ಆವರಣದ ಒಳಗೆ ಬಿದ್ದಿದೆ. ಮಗುವಿನ ಶೂ ಆಕಸ್ಮಿಕವಾಗಿ ಆನೆಯಿದ್ದ ಆವರಣದೊಳಗೆ ಬಿದ್ದಿದ್ದು ಆನೆ ಇದನ್ನು ಗಮನಿಸಿ ತನ್ನ ಸೊಂಡಿಲಿನಿಂದ ಬಿದ್ದಂತಹ ಶೂ ಅನ್ನು ಎತ್ತಿ ಕೊಡುತ್ತದೆ. ಈ ಮುದ್ದಾದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ಈ ಘಟನೆ ಚೀನಾದ ಶಾಂಡಾಂಗ್‌ನಲ್ಲಿ ನಡೆದಿದ್ದು, ಇದೊಂದು ಹಳೆಯ ವಿಡಿಯೊ ಆಗಿದೆ. ಇದೀಗ ಮತ್ತೆ ವೈರಲ್ ಆಗುತ್ತಿದೆ. ಐಎಫ್ಎಸ್ ಅಧಿಕಾರಿ ನಿವೃತ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ ಅವರು ಈ ವಿಡಿಯೊವನ್ನು ಹಂಚಿಕೊಂಡಿದ್ದು ಆನೆಯೊಂದು ಆಕಸ್ಮಿಕವಾಗಿ ತನ್ನ ಆವರಣಕ್ಕೆ ಬಿದ್ದ ಶೂ ಅನ್ನು ತನ್ನ ಸೊಂಡಿಲಿನಿಂದ ಹಿಂತಿರುಗಿಸುವ ವಿಡಿಯೊ ನೋಡುಗರಿಗೆ ಆಶ್ಚರ್ಯಕರವಾಗುತ್ತದೆ. ಆನೆ ದೈತ್ಯ ಸೆರೆಯಲ್ಲಿದ್ದರೂ ಅದರ ಹೃದಯ ಮಾತ್ರ ಸ್ವತಂತ್ರವಾಗಿದೆ ಆನೆಯು ಆಕಸ್ಮಿಕವಾಗಿ ತನ್ನ ಆವರಣಕ್ಕೆ ಬಿದ್ದ ಮಗುವಿನ ಶೂ ಅನ್ನು ಯಾವ ರೀತಿ ಹಿಂದಿರುಗಿಸುತ್ತದೆ ನೋಡಿ ಎಂದು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ
He is confined. But not his spirits & compassion 😊😊
— Susanta Nanda (@susantananda3) September 28, 2023
Returns the shoe of a child which accidentally fell in its enclosure.
(Free wild from cages) pic.twitter.com/odJyfIjM9Y
ವಿಡಿಯೊದಲ್ಲಿ ಏನಿದೆ?
ತನ್ನ ಆವರಣದಲ್ಲಿರುವ ಆನೆಯೊಂದು ತನ್ನ ಬುದ್ದಿವಂತಿಕೆಯ ಮೂಲಕ ಸೊಂಡಿಲಿನಲ್ಲಿ ಶೂ ಹಿಡಿದುಕೊಳ್ಳುತ್ತೆ. ಇದಾದ ಬಳಿಕ ಆನೆ ಸೊಂಡಿಲನ್ನು ಮೇಲೆ ಚಾಚಿ ಶೂ ನೀಡುತ್ತದೆ. ಮಗು ಕೈಚಾಚಿ ಆನೆಯ ಸೊಂಡಿಲಿಂದ ಶೂ ಪಡೆದುಕೊಳ್ಳುತ್ತದೆ. ಈ ಮುದ್ದಾದ ವಿಡಿಯೊ ನೋಡಿ ಬಳಕೆದಾರರು ಆನೆಯನ್ನು ಕಂಡು ಕೊಂಡಾಡಿದ್ದಾರೆ.
ಸೆರೆಯಲ್ಲಿದ್ದ ಆನೆ ತನ್ನ ದಯೆ ಮತ್ತು ಬುದ್ಧಿವಂತಿಕೆಯನ್ನು ತೋರಿಸಿ ತನ್ನ ಆವರಣದೊಳಗೆ ಬಿದ್ದ ಮಗುವಿನ ಶೂ ಅನ್ನು ಹಿಂದಿರುಗಿಸುವ ವಿಡಿಯೊ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೊ ನೋಡಿದ ಬಳಕೆದಾರರೊಬ್ಬರು ಈ ವಿಡಿಯೊ ನೋಡಿದಷ್ಟು ಸಾಲದು ಎಂದು ಬರೆದು ಕೊಂಡಿದ್ದಾರೆ. ಮೊತ್ತೊಬ್ಬ ಬಳಕೆದಾರರು ನಿಜಕ್ಕೂ ಈ ಆನೆ ತುಂಬಾ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು ನಿಜಕ್ಕೂ ಈ ಆನೆಯನ್ನು ಮುದ್ದಾಡಬೇಕು ಅನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: AI ಚಮತ್ಕಾರದಿಂದ ಸಾಂತಾಕ್ಲಾಸ್ ವೇಷದಲ್ಲಿ ಕಾಣಿಸಿಕೊಂಡ ಕೇಜ್ರಿವಾಲ್; ವಿಡಿಯೊ ಫುಲ್ ವೈರಲ್!