ಇಂಡೋನೇಷ್ಯಾ: ಇತ್ತೀಚೆಗೆ ನಾಗರ ಹಾವಿನ ಪಕೋಡ ತಯಾರಿಸುವ ವಿಡಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೊ ನೋಡಿದ ನೆಟ್ಟಿಗರೇ ಬೆಚ್ಚಿ ಬಿದ್ದಿದ್ದಾರೆ. ಹಾವೆಂದರೆ ಅಂದ್ರೆ ಸಾಕು ಹೆದರಿ ಮಾರುದ್ದ ಓಡುವವರಿದ್ದಾರೆ. ಆದರೆ ಇಲ್ಲೊಂದು ಕಡೆ ನಡು ಬೀಡಿಯಲ್ಲೇ ಹಾವಿನ ಪಕೋಡ ತಯಾರಿಸುತ್ತಾರೆ ಎನ್ನುವ ವಿಚಾರ ಕೇಳಿದ್ರೆ ಯಾರಿಗೆ ತಾನೇ ಶಾಕ್ ಆಗಲ್ಲ ಹೇಳಿ.(Viral Video)
ಭಾರತೀಯ ವ್ಲಾಗರ್ (Volger) ಒಬ್ಬ ಇಂಡೋನೇಷ್ಯಾದ ಬೀದಿ ಆಹಾರಗಳ ಬಗ್ಗೆ ಒಂದು ವಿಡಿಯೊ ಮಾಡಲು ಅಲ್ಲಿಗೆ ತೆರಳಿದ್ದಾರೆ. ಅಲ್ಲಿ ಕೊಬ್ರಾ ಪಕೋಡ ಅನ್ನುವ ಬೋರ್ಡ್ ನೋಡಿ ಆತನೇ ಬೆಚ್ಚಿಬಿದ್ದಿದ್ದಾನೆ. ರಾಶಿ ರಾಶಿ ಹಾವುಗಳನ್ನು ಒಂದು ಕಡೆ ಕೂಡಿಟ್ಟು ಅವುಗಳನ್ನು ಒಂದೊಂದಾಗಿ ಕತ್ತರಿಸಿ ಅದರ ಪಕೋಡಾ ಮಾಡಿ ಮಾರಾಟ ಮಾಡುತ್ತಿರುವ ಈ ವಿಡಿಯೊ ನಿಜಕ್ಕೂ ನೋಡುಗರನ್ನು ಬೆಚ್ಚಿ ಬಿಳಿಸಿದೆ.
ಈ ವೈರಲ್ ವಿಡಿಯೊವನ್ನು kaash_chaudhary ಎಂಬ ಬಳಕೆದಾರರು Instagram ನಲ್ಲಿ ಹಂಚಿ ಕೊಂಡಿದ್ದು ಒಂದು ನಾಗರಹಾವಿನ ಬೆಲೆ 2 ಮಿಲಿಯನ್ ಎಂದು ಹಾವಿನ ಪಕೋಡ ತಯಾರಿಸುವ ವ್ಯಕ್ತಿ ವಿವರಿಸುತ್ತಾನೆ. ಹಾವುಗಳನ್ನು ಕತ್ತರಿಸಿ ಅಲ್ಲಿಯೇ ಪಕೋಡಾ ಮಾಡುವ ದೃಶ್ಯದೊಂದಿಗೆ ನಾಗರಹಾವಿನ ರಕ್ತವನ್ನು ಆರ್ಡರ್ ಮಾಡಿ ಕುಡಿಯುವ ದೃಶ್ಯ ಕೂಡ ವಿಡಿಯೊದಲ್ಲಿ ಕಾಣಬಹುದು. ಅದು ಅಲ್ಲದೇ ಈ ಪಕೋಡಾ ಇಂಡೋನೇಷಿಯಾದ ಜನರಿಗೆ ಸಿಕ್ಕಾಪಟ್ಟೆ ಇಷ್ಟದ ಆಹಾರ ಎಂದು ಕೂಡ ತಿಳಿಸಿದ್ದಾನೆ. ಹಾವಿನ ಮಾಂಸ ತಿನ್ನುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ ಎನ್ನುವುದು ಇಲ್ಲಿಯ ಜನರ ನಂಬಿಕೆಕೂಡ ಆಗಿದೆಯಂತೆ ಎಂದು ವ್ಲಾಗರ್ ವಿವರಿಸಿದ್ದಾನೆ.
ಈ ವಿಡಿಯೊವನ್ನು ವೀಕ್ಷಿಸಿದ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಅಲ್ಲಿನ ವ್ಯಕ್ತಿ ಜೀವಂತ ನಾಗರ ಹಾವು ಗಳನ್ನು ಕೂಡಿ ಹಾಕಿ ಕೊಂದಿ ದ್ದರಿಂದ ನೆಟ್ಟಿಗರು ಅಸಮಾಧಾನಗೊಂಡು ಆತನ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಹಿಂದೂ ಪುರಾಣಗಳಲ್ಲಿ ನಾಗರಹಾವಿನ ಪ್ರಾಮುಖ್ಯತೆ, ಜೀವಂತ ದೇವರು ಎಂದು ಪೂಜಿಸುವ ಹಿಂದುಗಳಿಗೆ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತೆ ಆಗಿದೆ ಎಂದು ಗರಂ ಆಗಿದ್ದಾರೆ. ಹೆಚ್ಚಿನ ನೆಟ್ಟಿಗರು ಹರ್ ಹರ್ ಮಹಾದೇವ್! ಓ ನಮ: ಶಿವಾಯ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: 19ನೇ ವಯಸ್ಸಿಗೆ 90 ದೇಶ ಸುತ್ತಿದ ಯುವತಿ! ಈ ವಿಡಿಯೊ ಭಾರೀ ವೈರಲ್