Sunday, 12th January 2025

Viral Video: ಬಾಯಲ್ಲಿ ನೀರೂರಿಸುತ್ತೆ ಪಾಕಿಸ್ತಾನದ ಈ ಸೊಪ್ಪಿನ ಖಾದ್ಯ- ಈ ವಿಡಿಯೊಗೆ ಆಹಾರ ಪ್ರಿಯರು ಫುಲ್‌ ಫಿದಾ!

viral video

ಇಸ್ಲಮಾಬಾದ್‌: ಈಗಂತು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಬಗೆಯ ಹೊಸ ಹೊಸ ರೀತಿಯ ಅದೆಷ್ಟೋ ಖಾದ್ಯ ರೆಸಿಪಿಗಳ ಪರಿಚಯ ಆಗುತ್ತಲೇ ಇರುತ್ತದೆ. ಅದರಲ್ಲಿ ಕೆಲವೊಂದು ವಿಲಕ್ಷಣ ಖಾದ್ಯಗಳು ಜನರನ್ನು ಅಚ್ಚರಿಪಡಿಸಿದರೆ ಇನ್ನು ಕೆಲವು  ಖಾದ್ಯಗಳು ನೋಡಿದ ತಕ್ಷಣ ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ. ಸದ್ಯ  ಇಂತಹ ವಿಡಿಯೊವೊಂದು ನೆಟ್ಟಿಗರ ಗಮನ ಸೆಳೆದಿದೆ.(Viral Video)

ಪಾಕಿಸ್ತಾನದಲ್ಲಿ ಸೊಪ್ಪಿನ ಸಾಗ್‌ ತಯಾರಿಸುವ ವಿಡಿಯೊಂದು ನೆಟ್ಟಿಗರ  ಗಮನ ಸೆಳೆಯುತ್ತಿದೆ. ಇದನ್ನು ವಿಶೇಷವಾಗಿ ರೊಟ್ಟಿ‌ಯೊಂದಿಗೆ ಸವಿಯಲಾಗುತ್ತದೆ. ಪಾಕಿಸ್ತಾನದ ಫೈಸಲಾಬಾದ್‌ನ ಹಳ್ಳಿಯೊಂದರಲ್ಲಿ ಈ ಖಾದ್ಯ ತಯಾರಿಕೆಯ ವಿಡಿಯೊ ವೈರಲ್ ಆಗಿದ್ದು ಈ ಸಾಗ್ ತಯಾರಿಕೆಯ ವಿಧಾನವೇ  ನೋಡಲು ಬಲು ಆಸಕ್ತಿಕರ ಎಂದೆನಿಸಿದೆ. ಈ ವಿಡಿಯೊ ಇದೀಗ ಬಹಳಷ್ಟು ವೈರಲ್ ಆಗಿದೆ.

ಈ ವಿಡಿಯೊವನ್ನು Instagramನ mrzezothefoodie ಪೇಜ್ ಮೂಲಕ  ಹಂಚಿಕೊಳ್ಳಲಾಗಿದ್ದು, ತಾಜಾ ಸೊಪ್ಪಿನ ಮೂಲಕ ತಯಾರಿಸುವ ಈ ಸಾಗ್ ಅನ್ನು ಚೌಧರಿ ಸಲೀಮ್ ಎನ್ನುವ ವ್ಯಕ್ತಿ ತಯಾರಿಸುತ್ತಿದ್ದಾರೆ. ಪ್ರತಿ ವರ್ಷ ತನ್ನ ಸ್ನೇಹಿತರಿಗೆ ಈ ಸಾಗ್ ತಯಾರಿಸಿ ನೀಡುತ್ತಾರೆ. ತಾಜಾ ಸೊಪ್ಪನ್ನು  ಕತ್ತರಿಸಿ ಕೊಂಡ್ಯೊಯುವ ಮೂಲಕ ಅದನ್ನು ಸ್ವಚ್ಛಗೊಳಿಸಿ ಬಳಿಕ  ಯಂತ್ರದ ಮೂಲಕ ಕತ್ತರಿಸಲಾಗುತ್ತದೆ. ಬಳಿಕ ಸೊಪ್ಪು ಕ್ಲೀನ್ ಮಾಡಿ ದೊಡ್ಡ ಮಡಕೆಗೆ ವರ್ಗಾಯಿಸಲಾಗುತ್ತದೆ.

ನಂತರ ಸಾಗ್ ಅನ್ನು ಬೇಯಿಸಿ ಬೇಕಾದಷ್ಟು ಪ್ರಮಾಣದ ನೀರು ಉಪ್ಪು ಮತ್ತು ಹಸಿರು ಮೆಣಸಿನಕಾಯಿ ಬಳಸಿ  ಪೇಸ್ಟ್  ಮಾಡಲಾಗುತ್ತದೆ. ಮತ್ತೆ ಸರಿಪ್ರಮಾಣದಲ್ಲಿ ಬೇಯಿಸುವ ಮೂಲಕ  ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿ ಸಾಗ್ ತಯಾರಿಸಿ ಸ್ನೇಹಿತರಿಗೆ ಕಳುಹಿಸಲು ಪ್ಯಾಕ್ ಮಾಡುತ್ತಿರುವ ವಿಡಿಯೊ ನೆಟ್ಟಿಗರಿಗೆ ಬಹಳ ಆಕರ್ಷಿಸಿದೆ.

ವಿಡಿಯೊ ನೋಡಿದ  ಬಹುತೇಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದನ್ನು ಸವಿಯುವ ಇಚ್ಛೆಯನ್ನೂ  ತಿಳಿಸಿದ್ದಾರೆ.ಅನೇಕ ಇಂಟರ್ನೆಟ್ ಬಳಕೆದಾರರು  ಈ ವಿಡಿಯೊ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರ “ಚೌಧರಿ ಸಾಬ್ ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬ ಬಳಕೆದಾರ “ದಯವಿಟ್ಟು ಇನ್ನೂ ಹೆಚ್ಚಿನ ವಿಡಿಯೊ ಹಾಕಿ ಎಂದು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬ ವ್ಯಕ್ತಿ  “ಸಾಗ್ ತಯಾರಿಸುವ ಉತ್ತಮ ವಿಧಾನ ಎಂದು ಕಾಮೆಂಟ್ ಮಾಡಿದ್ದಾರೆ. ಮೊತ್ತೊಬ್ಬರು ನಾನು ಪಾಕಿಸ್ತಾನದ  ಖಾದ್ಯವನ್ನು ಪ್ರೀತಿಸುತ್ತೇನೆ ಎಂದು ಬರೆದು ಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕೆಳಗೆ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆಯ ಮುದ್ದಾದ ವಿಡಿಯೊ ವೈರಲ್

Leave a Reply

Your email address will not be published. Required fields are marked *