Friday, 10th January 2025

Viral Video: ವೈನ್‌ಗೆ ಬೇಯಿಸಿದ ರೈಸ್ ಮಿಕ್ಸ್ ಮಾಡಿ ಸವಿದ ಭೂಪಾ! ಈ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಗರಂ

Viral Video

ಸಿಂಗಾಪುರ: ವಿಲಕ್ಷಣ  ರೀತಿಯ ವಿವಿಧ ರೆಸಿಪಿ ತಯಾರಿಸಿ  ಆಹಾರ ಪ್ರಿಯರಲ್ಲಿ ಅಸಮಾಧಾನ ತರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುವುದು ಹೊಸದೇನೂ ಅಲ್ಲ. ಆಗಾಗ ಇಂತಹ ವಿಡಿಯೊಗಳು ನೆಟ್ಟಿಗರನ್ನು ಕುತೂಹಲ ಮೂಡಿಸುವ ಜೊತೆಗೆ ಅಸಹ್ಯಕರವು ಎನಿಸಲಿದೆ. ಈಗ ಇದೇ ಬಗೆಯ ವಿಲಕ್ಷಣ ಆಹಾರಕ್ಕೆ ಇನ್ನೊಂದು  ಸೇರ್ಪಡೆ‌ಯಾಗಿದೆ. ಸದ್ಯ ಇಂತಹದ್ದೊಂದು ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಹಜವಾಗಿಯೇ ಇದು ಆಹಾರಪ್ರಿಯರಲ್ಲಿ ಆಶ್ಚರ್ಯ ಜೊತೆಗೆ  ಅಸಹ್ಯ ಮೂಡಿಸಿದೆ.(Viral Video)

ಸಿಂಗಾಪುರದ  ವ್ಯಕ್ತಿಯೊಬ್ಬ  ಬೇಯಿಸಿದ ಅನ್ನವನ್ನು ವೈನ್‌ಗೆ ಸೇರಿಸಿ ರುಚಿ ನೋಡುವ ವಿಡಿಯೊವೊಂದು  ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಈ ವಿಡಿಯೊ ಕಂಡು ನೆಟ್ಟಿಗರು ‌ಅಸಹ್ಯಕರ ಎಂದು ಕಿಡಿಕಾರಿದ್ದಾರೆ. ಸಾಕಷ್ಟು ನೆಟ್ಟಿಗರು ಈ ವಿಡಿಯೊ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀವು ವಿಡಿಯೊದಲ್ಲಿ ನೋಡಬಹುದು‌‌‌ ವ್ಯಕ್ತಿಯೊಬ್ಬ ಪ್ಲೇಟ್‌ನಿಂದ ಬೇಯಿಸಿದ ಅನ್ನವನ್ನು‌ ತೆಗೆದುಕೊಂಡು  ವೈನ್ ತುಂಬಿದ ಗಾಜಿನೊಳಗೆ ಸೇರಿಸುತ್ತಾನೆ. ಮೊದಲಿಗೆ, ಅವನು  ವೈನ್ ಗ್ಲಾಸ್‌ಗೆ  ಸ್ವಲ್ಪ ಅನ್ನ ಸೇರಿಸಿ‌ ಅದನ್ನು  ಚೆನ್ನಾಗಿ ಬೆರೆಸಿ ಕುಡಿಯುವ ದೃಶ್ಯ ವಿಡಿಯೊದಲ್ಲಿದೆ. ಈತ‌ ಅನ್ನವನ್ನು‌ ಬಳಸಿ ಅಕ್ಕಿಯ ವೈನ್ ತಯಾರಿಸುತ್ತಿದ್ದಾನೆ ಎಂದು ವಿಡಿಯೊದಲ್ಲಿ ಕಂಡು ಬಂದರೂ ನೋಡುಗರಿಗೆ ಅಸಹ್ಯ ಎನಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ‌ 27,000 ಕ್ಕೂ ಹೆಚ್ಚು ನೆಟ್ಟಿಗರು ಈ  ವಿಡಿಯೊವನ್ನು ವೀಕ್ಷಿಸಿದ್ದಾರೆ. ವಿಡಿಯೊದಲ್ಲಿ  ಬೇಯಿಸಿದ ಅನ್ನವನ್ನು ತೆಗೆದುಕೊಂಡು ಅದನ್ನು ವೈನ್ ತುಂಬಿದ ಗಾಜಿನೊಳಗೆ ಹಾಕುತ್ತಾನೆ.  ಆಹಾರ ಪ್ರಯೋಗಕ್ಕಾಗಿ ವೈನ್ ಮೇಕರ್ಸ್ಗ ಈ ರೀತಿ ಬಳಸುತ್ತಾರೆ. ಬಹುಶಃ ಈ ವ್ಯಕ್ತಿ  ನೋಡುಗರಿಗೆ ರೈಸ್ ವೈನ್ ಅನ್ನು ತಯಾರಿಸುವ  ವಿಧಾನ‌ ಹೇಳಿರಬಹುದು.

ಸಹಜವಾಗಿಯೇ ಈ ವಿಡಿಯೊ  ಆಹಾರಪ್ರಿಯರ ಗಮನ ಸೆಳೆದಿದ್ದು ಆದಾಗ್ಯೂ,ಈ  ಪಾನೀಯವು ಕೆಟ್ಟ ಆಲೋಚನೆಯಲ್ಲ. ಆಸಕ್ತರು ಇದನ್ನು ಪ್ರಯತ್ನಿಸಬಹುದು ಎಂದು ಈ ವ್ಯಕ್ತಿ‌  ಹಂಚಿಕೊಂಡಿದ್ದಾನೆ. ಒಂದಷ್ಟು ಮಂದಿ ಇದರ ‌ರುಚಿ ಸವಿಯಬೇಕು  ಎಂದು ಬಯಸಿದರೆ, ಬಹುತೇಕರು ಅಸಹ್ಯಕರ ವಿಧಾನ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಲೈವ್ ಸಂದರ್ಶನದ ವೇಳೆ ಕಾಲಿಗೆ ಗುಂಡು ಹಾರಿಸಿಕೊಂಡ ರ‍್ಯಾಪರ್‌; ವಿಡಿಯೊ ವೈರಲ್

Leave a Reply

Your email address will not be published. Required fields are marked *