ಕೆಲವರು ಎಷ್ಟು ಅತಿಯಾಗಿ ಕುಡಿಯುತ್ತಾರೆ ಎಂದರೆ ಬಳಿಕ ಮನೆಗೆ ಹೋಗಲೂ ಕಷ್ಟ ಪಡುತ್ತಾರೆ. ಕೆಲವೊಮ್ಮೆ ಅವರ ಸ್ನೇಹಿತರು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯನ್ನು ಮನೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋದವರು ಯಾರೆಂದು ತಿಳಿದರೆ ನಿಮಗೆ ಶಾಕ್ ಆಗುವುದಂತು ಖಂಡಿತ. ಹೌದು, ಬ್ರೆಜಿಲ್‌ನಲ್ಲಿ ಗೂಳಿಯೊಂದು ಕುಡಿದ ಮತ್ತಿನಲ್ಲಿದ್ದ ತನ್ನ ಮಾಲೀಕನನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗಿದೆ. ಗೂಳಿ ಮಾಲೀಕನನ್ನು ಕರೆದೊಯ್ಯುತ್ತಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
ಇಲ್ಲಿ ಗೂಳಿ “ಜವಾಬ್ದಾರಿಯುತ ಸ್ನೇಹಿತನ” ಪಾತ್ರವನ್ನು ವಹಿಸಿಕೊಂಡಿದೆ. ನೇಚರ್ ಈಸ್ ಅಮೇಜಿಂಗ್ ಎಂಬ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಇತ್ತೀಚೆಗೆ ಹಂಚಿಕೊಂಡ ಈ ವಿಡಿಯೊದಲ್ಲಿ ಗೂಳಿ ಮತ್ತಿನಲ್ಲಿದ ಮಾಲೀಕನನ್ನು ರಸ್ತೆಯಲ್ಲಿ ಸಮಾಧಾನವಾಗಿ ತಳ್ಳಿಕೊಂಡು ಮನೆಗೆ ಕರೆದುಕೊಂಡು ಹೋಗಿರುವುದು ಸೆರೆಯಾಗಿದೆ. ಇದು ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ.
A Bull in Brazil taking his drunk owner Home pic.twitter.com/pkMhrU9lf8
— Nature is Amazing ☘️ (@AMAZlNGNATURE) December 31, 2024
ಈ ವಿಡಿಯೊದಲ್ಲಿ ನಶೆಯಿಂದಾಗಿ ಮಾಲೀಕನಿಗೆ ತನ್ನ ಕಾಲುಗಳ ಮೇಲೆ ನಿಯಂತ್ರಿಣವಿರಲಿಲ್ಲ. ಆದರೂ ಗೂಳಿ ಆತನನ್ನು ಮನೆಗೆ ಹೋಗುವ ಮಾರ್ಗದಲ್ಲೇ ಕರೆದುಕೊಂಡು ಹೋಗಿದೆ. ಗೂಳಿಯ ಈ ಕೆಲಸವನ್ನು ನೋಡಿದರೆ ಪ್ರಾಣಿಗಳನ್ನು ನೋಡಿಕೊಳ್ಳುವವರು ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ನಮ್ಮನ್ನು ಅತ್ಯಂತ ಅನಿರೀಕ್ಷಿತ ರೀತಿಯಲ್ಲಿ ನೋಡಿಕೊಳ್ಳುತ್ತವೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಈ ಸುದ್ದಿಯನ್ನೂ ಓದಿ:ಈ ಬಾಲಿವುಡ್ ಹಾಡಿನ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ ತಾಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪಾಲ್
ʼʼಬ್ರೆಜಿಲ್‍ನಲ್ಲಿ ಗೂಳಿಯೊಂದು ಕುಡಿದ ಮತ್ತಿನಲ್ಲಿದ್ದ ತನ್ನ ಮಾಲೀಕನನ್ನು ಮನೆಗೆ ಕರೆದೊಯ್ಯುತ್ತಿದೆ” ಎಂದು ಈ ವಿಡಿಯೊಕ್ಕೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೊ ಅನೇಕರ ಹೃದಯವನ್ನು ಗೆದ್ದಿದೆ. ಹಾಗಾಗಿ ಇದಕ್ಕೆ ಸೋಶಿಯಲ್ ಮೀಡಿಯಾ ನೆಟ್ಟಿಗರು ಉಲ್ಲಾಸಕರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಪ್ರತಿಯೊಬ್ಬರಿಗೂ ಈ ರೀತಿಯ ಉತ್ತಮ ಸ್ನೇಹಿತ ಬೇಕು” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಗೂಳಿ, ಸರಿ, ಬಾ, ನಿನ್ನನ್ನು ಮಲಗಿಸಲು ಮನೆಗೆ ಕರೆದೊಯ್ಯೋಣ ಎನ್ನುವಂತಿದೆʼʼ ಒಬ್ಬ ವ್ಯಕ್ತಿ ತಮಾಷೆಯಾಗಿ ಬರೆದಿದ್ದಾರೆ. ಇನ್ನೊಬ್ಬರು “ಬ್ರೋ ಎಚ್ಚರವಾದಾಗ ನಾನು ಮನೆಗೆ ಹೇಗೆ ಬಂದೆ ಎಂಬುದನ್ನು ಕೇಳಿದರೆ ನಂಬುವುದಿಲ್ಲ” ಎಂದಿದ್ದಾರೆ. “ಗೂಳಿ ಅವನನ್ನು ಹುಡುಕಲು ಬಂದಿದೆಯೇ ಅಥವಾ ಅವನು ಅದನ್ನು ತನ್ನೊಂದಿಗೆ ಬಾರ್‌ಗೆ ತಂದಿದ್ದಾನೆಯೇ? ಉತ್ತರಗಳ ಅಗತ್ಯವಿರುವ ಪ್ರಮುಖ ಪ್ರಶ್ನೆಗಳಿವೆ!” ಎಂದಿದ್ದಾರೆ ಇನ್ನೊಬ್ಬರು. ಈ ವಿಡಿಯೊ ಇದುವರೆಗೆ ಸುಮಾರು 8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.