Friday, 22nd November 2024

Vivek Ramaswamy: ಟ್ರಂಪ್‌ ಸಂಪುಟದಲ್ಲಿ ಸ್ಥಾನ ಪಡೆದಿರೋ ವಿವೇಕ್‌ ರಾಮಸ್ವಾಮಿಯ ಈ ವಿಡಿಯೊ ಫುಲ್‌ ವೈರಲ್! ಇದರಲ್ಲಿ ಅಂತಹದ್ದೇನಿದೆ?

Vivek Ramaswamy

ವಾಷಿಂಗ್ಟನ್‌: ಇತ್ತೀಚೆಗೆ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ(US Presidential Election) ಡೊನಾಲ್ಡ್‌ ಟ್ರಂಪ್‌ (Donald Trump) ಭಾರತ ಮೂಲದ ಕಮಲಾ ಹ್ಯಾರಿಸ್‌ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇದೀಗ ಅವರ ಸಂಪುಟ ಸದಸ್ಯರ ಹೆಸರು ಬಹಿರಂಗಗೊಂಡಿದ್ದು, ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ (Vivek Ramaswamy) ಅವರು ಸಂಪುಟ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಅವರು ತಮ್ಮ ಹೈಸ್ಕೂಲ್‌ನಲ್ಲಿ ಮಾಡಿದ್ದ ಭಾಷಣದ ವಿಡಿಯೋವೊಂದು ವೈರಲ್‌ ಆಗಿದೆ.

18 ವರ್ಷದ ವಿದ್ಯಾರ್ಥಿಯಾಗಿದ್ದ ರಾಮಸ್ವಾಮಿ ಪ್ರಾರಂಭಿಕ ಭಾಷಣ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಓಹಿಯೋದ ಸೇಂಟ್ ಕ್ಸೇವಿಯರ್ ಹೈಸ್ಕೂಲ್‌ನಲ್ಲಿ ತಮ್ಮ ಪದವೀಧರ ವರ್ಗ, ಶಿಕ್ಷಕರು ಮತ್ತು ಅತಿಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಶಾಲೆಯಲ್ಲಿ ತಮ್ಮ ಅನುಭವವನ್ನು ಪ್ರಾಮಾಣಿಕವಾಗಿ ಸಭಿಕರೆದುರು ತೆರೆದಿಟ್ಟಿದ್ದಾರೆ. ಮುಂದಿನ ತಮ್ಮ ಪದವಿ ಜೀವನದ ಬಗ್ಗೆ ಉಲ್ಲೇಖಿಸುತ್ತಾರೆ. ಹಾಗೂ ಅಧಿಕಾರಿ ಶಾಹಿಗಳ ವಿರುದ್ಧ ತಮ್ಮ ಆಲೋಚನೆಯನ್ನು ವ್ಯಕ್ತ ಪಡಿಸಿದ್ದರು.

ವೈರಲ್‌ ಆದ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಮರುಪೋಸ್ಟ್ ಮಾಡುತ್ತಾ, ಅವರು ಆಗಲೂ ನಾನು ಅಧಿಕಾರಶಾಹಿಯ ವಿರುದ್ಧ ಇದ್ದೆ ಎಂದು ಬರೆದಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ತಮ್ಮ ಪರವಾಗಿ ಗಟ್ಟಿಯಾಗಿ ನಿಂತು ಪ್ರಚಾರ ಮಾಡಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಹಾಗೂ ಮೈಸೂರು ನಂಟು ಹೊಂದಿರುವ ಅಮೆರಿಕ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರಿಗೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡಿದ್ದಾರೆ. ಟ್ರಂಪ್‌ ಅವರ 2ನೇ ಅವಧಿಯ ಸರ್ಕಾರದಲ್ಲಿ ಹುದ್ದೆ ಪಡೆದ ಮೊದಲ ಭಾರತೀಯ ಅಮೆರಿಕನ್‌ ಉದ್ಯಮಿ ವಿವೇಕ್‌ ರಾಮಸ್ವಾಮಿ ಆಗಿದ್ದಾರೆ. ರಾಮಸ್ವಾಮಿ ಅವರ ತಂದೆ- ತಾಯಿ ಮೂಲತಃ ಕೇರಳದವರಾಗಿದ್ದು, ಉದ್ಯೋಗ ಅರಸಿ ಅಮೆರಿಕಗೆ ವಲಸೆ ಹೋಗಿದ್ದರು.

ಇದನ್ನೂ ಓದಿ : Trump-Biden: 4 ವರ್ಷಗಳ ನಂತರ ಶ್ವೇತ ಭವನಕ್ಕೆ ತೆರಳಿದ ಟ್ರಂಪ್‌-ಬೈಡನ್‌ ಜತೆ ಮಾತುಕತೆ

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಹುದ್ದೆಗಾಗಿ ಸ್ಪರ್ಧಿಸಿದ್ದ ವಿವೇಕ್‌ ಕೊನೆಗೆ ಟ್ರಂಪ್‌ಗೆ ಬೆಂಬಲ ಸೂಚಿಸಿ ಕಣದಿಂದ ಹಿಂದಕ್ಕೆ ಸರಿದಿದ್ದರು. ಸರ್ಕಾರಿ ಅಧಿಕಾರಶಾಹಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸಿ, ಹೆಚ್ಚುವರಿ ನಿಯಂತ್ರಣಗಳನ್ನು ಕಡಿತಗೊಳಿಸಿ, ಅನಗತ್ಯ ಖರ್ಚುಗಳನ್ನು ತಗ್ಗಿಸಿ, ಸರ್ಕಾರಿ ಸಂಸ್ಥೆಗಳ ಪುನಾರಚನೆ ಮಾಡಬೇಕು ಎಂದು ಟ್ರಂಪ್‌ ಅವರು ಸೂಚಿಸಿದ್ದಾರೆ.