Thursday, 3rd October 2024

ವಿಕಿಪೀಡಿಯ ಮಾಲೀಕರಿಗೆ 19.93 ಲಕ್ಷ ರೂ. ದಂಡ

ಷ್ಯಾ: ರಷ್ಯಾದ ಮಿಲಿಟರಿಗೆ ಸಂಬಂಧಿಸಿದ ‘ನಿಷೇಧಿತ ವಿಷಯ’ ಅಳಿಸುವ ಆದೇಶ ಪಾಲಿಸದ ಕಾರಣ ರಷ್ಯಾದ ನ್ಯಾಯಾಲಯ ವಿಕಿಪೀಡಿಯ ಮಾಲೀಕರಿಗೆ 19.93 ಲಕ್ಷ ರೂ. ದಂಡ ವಿಧಿಸಿದೆ.

ಹೊಸ ದಂಡಗಳು ವಿಕಿಪೀಡಿಯ ವಿರುದ್ಧ ರಷ್ಯಾದ ನ್ಯಾಯಾಲಯಗಳು ವಿಧಿಸುತ್ತಿರುವ ದಂಡಗಳ ಸಂಖ್ಯೆಗೆ ಮತ್ತೊಂದು ಸೇರ್ಪಡೆಯಾಗಿದೆ.

ಆರು ದಿನಗಳ ಹಿಂದೆ, ಮಾಸ್ಕೋದ ನ್ಯಾಯಾಲಯವು ನಡೆಯುತ್ತಿರುವ ಉಕ್ರೇನ್ ಸಂಘರ್ಷದ ಬಗ್ಗೆ ರಷ್ಯನ್ ಭಾಷೆಯ ಲೇಖನಕ್ಕಾಗಿ ಲಾಭರಹಿತ ಸಂಸ್ಥೆಗೆ 1.5 ಮಿಲಿಯನ್ ರೂಬಲ್ಸ್ ದಂಡ ವಿಧಿಸಿದೆ.

ಇದಕ್ಕೂ ಮುನ್ನ ಮಾಸ್ಕೋದ ಟ್ಯಾಗನ್ಸ್ಕಿ ಜಿಲ್ಲಾ ನ್ಯಾಯಾಲಯವು ವಿಕಿಮೀಡಿಯಾ ಫೌಂಡೇಶನ್ಗೆ 800,000 ರೂಬಲ್ಸ್ ದಂಡ ವಿಧಿಸಿತ್ತು.