Saturday, 4th January 2025

Xi Jinping: ಮತ್ತೆ ಕ್ಯಾತೆ ತೆಗೆದ ಚೀನಾ… ತೈವಾನ್‌ ತಮಗೆ ಸೇರಿದ್ದು ಎಂದ ಕ್ಸಿ ಜಿನ್‌ಪಿಂಗ್

Xi Jinping

ಬೀಜಿಂಗ್‌:ತೈವಾನ್ (China-Taiwan) ನಮಗೆ ಸೇರಿದ್ದು, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಚೀನಾ ಮತ್ತೆ ಕ್ಯಾತೆ ತೆಗೆದಿದೆ. ಹೊಸವರ್ಷದ ಸಂದೇಶದಲ್ಲಿ ಚೀನಾ ಅಧ್ಯಕ್ಷ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಮಾತನಾಡಿದ್ದು, ಈ ಮೂಲಕ ತೈವಾನ್‌ ಬೆಂಬಲಿತವಾಗಿರುವ ಅಮೆರಿಕಗೆ ಎಚ್ಚರಿಕೆ ರವಾನಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಚೀನಾ ಅಧ್ಯಕ್ಷ ತೈವಾನ್ ಜಲಸಂಧಿಯ ಎರಡೂ ಬದಿಯಲ್ಲಿರುವ ಚೀನೀಯರು ಒಂದೇ ಕುಟುಂಬಕ್ಕೆ ಸೇರಿದವರು. ನಮ್ಮ ನಡುವಿನ ರಕ್ತಸಂಬಂಧದ ಬಂಧವನ್ನು ಯಾರೂ ಕಡಿದು ಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಚೀನಾ ಹಾಗೂ ತೈವಾನ್‌ ಒಗ್ಗೂಡುವ ಅನಿವಾರ್ಯತೆ ಇದೆ. ತೈವಾನ್‌ ಇದಕ್ಕೆ ಒಪ್ಪಿಕೊಳ್ಳಬೇಕು ಚೀನಾ ರಾಷ್ಟ್ರದ ಪುನರುಜ್ಜೀವನದ ವೈಭವದಲ್ಲಿ ಪಾಲ್ಗೊಳ್ಳಬೇಕು ಅವರು ಎಂದು ಹೇಳಿದ್ದಾರೆ.

ಚೀನಾ – ತೈವಾನ್‌ ವಿವಾದ

ಚೀನಾದ ಗಡಿಗೆ ತಾಗಿಕೊಂಡಿರುವ ತೈವಾನ್ ಒಂದು ಪುಟ್ಟ ದ್ವೀಪ ರಾಷ್ಟ್ರವಾಗಿದೆ. ಇನ್ನು ಈ ದ್ವೀಪವನ್ನು ಚೀನಾ ಮೊದಲಿನಿಂದಲೂ ಈ ದ್ವೀಪ ತನ್ನದೇ ಭಾಗ ಎಂದು ಹೇಳಿಕೊಂಡು ಬಂದಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಆರಂಭವಾದ ದಿನವನ್ನು ಸಂಭ್ರಮಾಚರಿಸಲು ಚೀನಾ ತನ್ನ ರಾಷ್ಟ್ರೀಯ ದಿನವನ್ನಾಗಿ ಅಕ್ಟೋಬರ್ 1ರಂದು ಆಚರಣೆ ಮಾಡಿತ್ತು. ಅಂದಿನಿಂದಲೂ ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. 72ನೇ ವಾರ್ಷಿಕೋತ್ಸವದ ಆಚರಣೆಯೊಂದಿಗೆ, ಚೀನಾ ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯಕ್ಕೆ 100ಕ್ಕೂ ಹೆಚ್ಚು ಫೈಟರ್ ಜೆಟ್‌ಗಳನ್ನು ಹಾರಿಸಿತ್ತು. ಇದು ತೈವಾನ್‌ಗೆ ಆತಂಕ ಉಂಟಾಯಿತು ಮತ್ತು ಚೀನಾ ತನ್ನ ಬಲದಿಂದ ದ್ವೀಪ ರಾಷ್ಟ್ರವಾದ ತೈವಾನ್‌ ವಶಪಡಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಪ್ರಪಂಚದಾದ್ಯಂತ ಎಚ್ಚರಿಕೆ ನೀಡಿತು.

ಕಳೆದ ವರ್ಷ, ಕೋವಿಡ್ ಮತ್ತು ವ್ಯಾಪಾರದ ಮೇಲೆ ಅಮೆರಿಕ-ಚೀನಾ ಸಂಬಂಧಗಳು ಹದಗೆಡುತ್ತಿರುವಾಗ, ಚೀನಾ ವಿದೇಶಾಂಗ ಇಲಾಖೆ ತನ್ನ ಅತ್ಯುನ್ನತ ಶ್ರೇಣಿಯ ನಿಯೋಗವನ್ನು ತೈಪೆಗೆ ಕಳುಹಿಸಿತು. ಭೇಟಿಯ ಸಮಯದಲ್ಲಿ, ಚೀನಾದವರು ತೈವಾನ್ ಜಲಸಂಧಿಯಲ್ಲಿ (Taiwan Strait) ಮಿಲಿಟರಿ ವ್ಯಾಯಾಮ ನಡೆಸಿದರು. ಇದು ತೈವಾನ್ ಅನ್ನು ಚೀನಾದ ಮುಖ್ಯ ಭೂಭಾಗದಿಂದ ಪ್ರತ್ಯೇಕಿಸುತ್ತದೆ.

ಯುದ್ಧಕ್ಕೆ ಸಿದ್ಧರಾಗಿ ಎಂದಿದ್ದ ಚೀನಾ ಅಧ್ಯಕ್ಷ

ಕಳೆದ ಅಕ್ಟೋಬರ್‌ನಲ್ಲಿ ಚೀನಾ ದೇಶದ ಸೇನೆಯು ಹೆಚ್ಚಿನ ಸಂಖ್ಯೆಯ ಯುದ್ಧ ವಿಮಾನಗಳು, ಡ್ರೋನ್‌ಗಳು, ಯುದ್ಧ ನೌಕೆಗಳು, ತಟ ರಕ್ಷಣಾ ಪಡೆ ನೌಕೆಗಳನ್ನು ತೈವಾನ್ ಸುತ್ತಲೂ ನಿಯೋಜಿಸಲ್ಪಟ್ಟಿದ್ದವು. ಯುದ್ಧಕ್ಕೆ ರೆಡಿಯಾಗುವಂತೆ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದರು. ನಂತರ ಜಾಗತಿಕ ಒತ್ತಡಕ್ಕೆ ಮಣಿದು ಯುದ್ಧ ಘೋಷಣೆಯನ್ನು ಹಿಂಪಡೆದಿತ್ತು.

ಈ ಸುದ್ದಿಯನ್ನೂ ಓದಿ : Viral Video: ಚಳಿಯಿಂದ ನಡುಗುತ್ತಿದ್ದ ಬೆಕ್ಕಿನ ಮರಿಗೆ ಚೀನಾದ ಹುಡುಗಿ ಮಾಡಿದ್ದೇನು? ವಿಡಿಯೊ ನೋಡಿ