ಬೆಳಗಿನ ಉಪಹಾರ(Breakfast Tips) ಬಹಳ ಪ್ರಮುಖವಾದುದು ಎನ್ನಲಾಗುತ್ತದೆ. ಯಾಕೆಂದರೆ ಬೆಳಿಗ್ಗೆ ನೀವು ಸೇವಿಸುವಂತಹ ಉಪಹಾರ ನಿಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವುದರ ಮೂಲಕ ನಿಮಗೆ ದಿನವಿಡೀ ಕೆಲಸದಲ್ಲಿ ಸಕ್ರಿಯರಾಗಿರಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರು ತಪ್ಪದೇ ಉಪಹಾರವನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಉಪಹಾರದ ವೇಳೆ ಉತ್ತಮ ಆಹಾರವನ್ನು ಸೇವಿಸಬೇಕು. ಯಾಕೆಂದರೆ ನೀವು ಸೇವಿಸುವ ಉಪಾಹಾರವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಉಪಹಾರದ ವೇಳೆ ಯಾವ ಆಹಾರವನ್ನು ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂಬುದನ್ನು ತಿಳಿಯಿರಿ.
ಬೆಳಗಿನ ಉಪಹಾರಕ್ಕೆ ಉತ್ತಮ ಆಹಾರಗಳು:
ನಾರಿನಾಂಶದಿಂದ ಸಮೃದ್ಧವಾಗಿರುವ ಓಟ್ ಮೀಲ್ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ ಮತ್ತು ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಹಾಗಾಗಿ ತಾಜಾ ಹಣ್ಣುಗಳು, ಬೀಜಗಳನ್ನು ನಿಮ್ಮ ಉಪಹಾರದಲ್ಲಿ ಸೇರಿಸಿ.
ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಕೋಲೀನ್‍ನಂತಹ ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಅವು ಸಂತೃಪ್ತಿಯನ್ನು ನೀಡುತ್ತವೆ. ಸ್ನಾಯು ನಿರ್ವಹಣೆಯನ್ನು ಬೆಂಬಲಿಸುತ್ತವೆ.
ಪ್ರೋಟೀನ್ ಮತ್ತು ಪ್ರೋಬಯಾಟಿಕ್‍ಗಳಿಂದ ತುಂಬಿರುವ ಗ್ರೀಕ್ ಮೊಸರು ಕರುಳಿನ ಆರೋಗ್ಯವನ್ನು ಬೆಂಬಲಿಸುತ್ತದೆ ಮತ್ತು ಹಸಿವನ್ನು ನಿವಾರಿಸುತ್ತದೆ. ಹಾಗಾಗಿ ಉಪಹಾರದಲ್ಲಿ ಇದನ್ನು ಆಯ್ಕೆ ಮಾಡಿ ಮತ್ತು ಇದಕ್ಕೆ ನೈಸರ್ಗಿಕ ಸಿಹಿಗಾಗಿ ಬೆರಿಗಳು ಅಥವಾ ಜೇನುತುಪ್ಪವನ್ನು ಸೇರಿಸಿ.
ಆವಕಾಡೊಗಳು ಆರೋಗ್ಯಕರ ಕೊಬ್ಬು ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ. ದೇಹದ ಶಕ್ತಿಗಾಗಿ ಇದನ್ನು ಟೋಸ್ಟ್ ಮೇಲೆ ಹಾಕಿ ಅಥವಾ ಮೊಟ್ಟೆಗಳೊಂದಿಗೆ ಸೇವಿಸಿ.
ಸೊಪ್ಪುಗಳು, ಹಣ್ಣುಗಳು, ಮೊಸರು ಅಥವಾ ಪ್ರೋಟೀನ್ ಪುಡಿಯಂತಹ ಪ್ರೋಟೀನ್ ಮೂಲಗಳು ಮತ್ತು ನಟ್ ಬೆಣ್ಣೆಯಂತಹ ಆರೋಗ್ಯಕರ ಕೊಬ್ಬುಗಳ ಮಿಶ್ರಣದೊಂದಿಗೆ ಮನೆಯಲ್ಲಿ ತಯಾರಿಸಿದ ಸ್ಮೂಥಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದನ್ನು ಉಪಹಾರದಲ್ಲಿ ಸೇವಿಸಿದರೆ ಒಳ್ಳೆಯದು.
ಬೆಳಗಿನ ಉಪಾಹಾರಕ್ಕೆ ಕೆಟ್ಟ ಆಹಾರಗಳು
ಸಂಸ್ಕರಿಸಿದ ಸಕ್ಕರೆಗಳು ಹೆಚ್ಚು ಮತ್ತು ಫೈಬರ್ ಕಡಿಮೆ ಇರುವ ಧಾನ್ಯಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತು ನಂತರ ಇದು ಮಧುಮೇಹಕ್ಕೆ ಕಾರಣವಾಗಬಹುದು. ಇದು ನಿಮ್ಮನ್ನು ದಣಿವು ಮತ್ತು ಹಸಿವಿನಿಂದ ಬಳಲುವಂತೆ ಮಾಡುತ್ತದೆ. ಇವು ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಅವುಗಳ ಹೆಚ್ಚಿನ ಸಕ್ಕರೆ ಮತ್ತು ಕೊಬ್ಬಿನ ಅಂಶವು ತೂಕ ಹೆಚ್ಚಳ ಮತ್ತು ಶಕ್ತಿಯ ಮಟ್ಟವನ್ನು ಕಡಿಮೆಮಾಡಬಹುದು.
ಬಿಳಿ ಬ್ರೆಡ್‍ನಲ್ಲಿ ಫೈಬರ್ ಮತ್ತು ಪೋಷಕಾಂಶಗಳು ಕಡಿಮೆ ಇದ್ದು, ಇದು ರಕ್ತದಲ್ಲಿನ ಸಕ್ಕರೆಯ ತ್ವರಿತ ಏರಿಕೆಗೆ ಕಾರಣವಾಗುತ್ತದೆ. ಹಾಗಾಗಿ ಇದರ ಬದಲು ಪೂರ್ಣ ಧಾನ್ಯದ ಟೋಸ್ಟ್ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಪ್ರೀ ಫ್ಲೇವರ್ ಯುಕ್ತ ಮೊಸರುಗಳು ಹೆಚ್ಚಾಗಿ ಹೆಚ್ಚುವರಿ ಸಕ್ಕರೆಗಳಿಂದ ತುಂಬಿರುತ್ತವೆ. ಇದು ಅವು ಆರೋಗ್ಯಕ್ಕೆ ಒಳ್ಳೆಯದಲ್ಲ. ಸರಳ ಅಥವಾ ಸಿಹಿರಹಿತ ಮೊಸರು ಉತ್ತಮ ಆಯ್ಕೆಯಾಗಿದೆ.
ಈ ಸುದ್ದಿಯನ್ನೂ ಓದಿ:ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡಿಕೊಂಡು ತಿನ್ನುತ್ತಿದ್ದೀರಾ….? ಹಾಗಾದ್ರೆ ಇಲ್ಲಿ ಸ್ವಲ್ಪ ನೋಡಿ!
ಅಂಗಡಿಗಳಲ್ಲಿ ತಯಾರಿಸಿದ ಹೆಚ್ಚಿನ ಹಣ್ಣಿನ ರಸಗಳಲ್ಲಿ ಸಕ್ಕರೆ ಅಧಿಕವಾಗಿರುತ್ತದೆ ಮತ್ತು ಫೈಬರ್ ಕಡಿಮೆ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಅದರ ಬದಲಿಗೆ ಸಂಪೂರ್ಣ ಹಣ್ಣುಗಳನ್ನು ಸೇವಿಸಿ.