Wednesday, 25th December 2024

Health Tips: ಯಾವ ವಯಸ್ಸಿನವರು ಎಷ್ಟು ಹೊತ್ತು ನಿದ್ದೆ ಮಾಡ್ಬೇಕು? ಆರೋಗ್ಯ ಇಲಾಖೆ ಹೇಳೋದೇನು?

Sleep time

ನವದೆಹಲಿ: ನಾವು ಆರೋಗ್ಯಕರವಾಗಿರಲು ಪ್ರತಿದಿನ 7 ಗಂಟೆಗಳ ಕಾಲ ನಿದ್ರೆ ಮಾಡುವುದು ಅಗತ್ಯ ಎನ್ನುವ ಮಾಹಿತಿಯನ್ನು ‌ನೀವು ಕೇಳಿರಬಹುದು. ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಚಟುವಟಿಕೆ ಮತ್ತು ವಯಸ್ಸಿನ ಪ್ರಕಾರ ಇಂತಿಷ್ಟು ನಿದ್ರೆ  ಬೇಕು ಅಂತ ಆರೋಗ್ಯ ಇಲಾಖೆ ಇದೀಗ ಶಿಫಾರಸ್ಸು ಮಾಡಿದೆ (Sleep Pattern). ಆರೋಗ್ಯ ತಜ್ಞರು ಹೇಳುವ ಪ್ರಕಾರ  ನಿದ್ರಾ ಸಮಯ ಎನ್ನುವುದು ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗಿರುತ್ತದೆ. ಹಾಗಾಗಿ ಯಾವ ವಯಸ್ಸಿನ ಜನರು ಎಷ್ಟು ಸಮಯ ನಿದ್ದೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ(Health Tips).

ಇಂತಿಷ್ಟು ನಿದ್ದೆ ಅಗತ್ಯ ಇದೆ

ಪ್ರತಿ ದಿನ ದೇಹಕ್ಕೆ 7 ರಿಂದ ಎಂಟು ಗಂಟೆಗಳ ನಿದ್ದೆ ಅಗತ್ಯವಿದೆ. ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಶೇ .52  ಹೆಚ್ಚು ಜನರು ನಿದ್ರಾಹೀನತೆಯ ಸಮಸ್ಯೆ ಯಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಹಾಗಾಗಿ ಪ್ರತಿಯೊಬ್ಬರ ಆರೋಗ್ಯ ಸುಧಾರಿಸಿ ಕೊಳ್ಳಲು 3 ತಿಂಗಳ ಮಗು ದಿನಕ್ಕೆ 14-17 ಗಂಟೆ, 4-12 ತಿಂಗಳ ಮಗು 12-16ಗಂಟೆ, 1-2ವರ್ಷದ ಮಗು  11-14 ಗಂಟೆ, 3-5 ವಯಸ್ಸಿನ ಮಕ್ಕಳು 10-13  ಗಂಟೆ, 6-12 ವಯಸ್ಸಿನ ಮಕ್ಕಳು 9-12 ಗಂಟೆಗಳ ಕಾಲ ನಿದ್ರಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು ಹದಿಹರೆಯದ  ವಯಸ್ಸಿನವರು 8-10ಗಳ ಕಾಲ ನಿದ್ದೆ ಮಾಡಬೇಕು.18-60 ವರ್ಷ ವಯಸ್ಸಿನವರು ಕನಿಷ್ಠ 7 ಗಂಟೆ ನಿದ್ದೆ ಮಾಡಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಡಿಮೆ ನಿದ್ರೆಯಿಂದ ಆರೋಗ್ಯದ ಮೇಲೆ ಪರಿಣಾಮ

ವ್ಯಕ್ತಿಯು ದಿನಕ್ಕೆ ಸರಿಯಾದ ನಿದ್ರೆ ಮಾಡದೇ ಇದ್ದಲ್ಲಿ ಮಧುಮೇಹದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು.ನಾವು ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡದಿದ್ದಲ್ಲಿ ಅನೇಕ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು  ಮುಂದಕ್ಕೆ ಎದುರಿಸಬೇಕಾಗುತ್ತೆ, ಎಂದು ಸಂಶೋಧನೆಗಳು ಮಾಹಿತಿ ನೀಡಿವೆ.  ಹಾಗಾಗಿ ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡುವುದು ಅಗತ್ಯ

  • ಸರಿಯಾಗಿ ನಿದ್ದೆ ಮಾಡದಿರುವುದು ಅಧಿಕ ರಕ್ತದೊತ್ತಡ, ಬೊಜ್ಜು, ಹೃದ್ರೋಗ ಮತ್ತು ಖಿನ್ನತೆಗೆ ಕಾರಣ ವಾಗಬಹುದು.
  • ನಿದ್ರೆಯ ಸಮಸ್ಯೆಯು  ಟೈಪ್ 2 ಮಧುಮೇಹದ ಅಪಾಯ ಉಂಟು ಮಾಡಬಹುದು
  • ಮಾನಸಿಕ ತೊಂದರೆ, ಬುದ್ಧಿಮಾಂದ್ಯತೆಯ ಸಮಸ್ಯೆ ಉಂಟು ಮಾಡಬಹುದು
  • ನಿದ್ರೆ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬಿದ್ದು   ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗಕ್ಕೆ ಕಾರಣವಾಗಬಹುದು.
  • ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಬಹುದು.ನಿಮ್ಮ ಮನಸ್ಥಿತಿ, ಆಸಕ್ತಿ, ತಾಜಾತನ, ಇತರರೊಂದಿಗೆ ಬೆರೆಯುವ  ಆಸಕ್ತಿ ಕಡಿಮೆಯಾಗಬಹುದು.

ಈ ಸುದ್ದಿಯನ್ನೂ ಓದಿ:Peanut Benefits: ಚಳಿಗಾಲದ ಆಹಾರದಲ್ಲಿ ನೆಲಗಡಲೆಯನ್ನು ಸೇರಿಸಿದರೆ ಎಷ್ಟೊಂದು ಆರೋಗ್ಯ ಪ್ರಯೋಜನ!