Friday, 27th September 2024

Health Tips: ಮನೆಗೆ ಬಂದ ತಕ್ಷಣ ಪಾದಗಳನ್ನು ತೊಳೆಯುವುದರಿಂದ ಸಿಗುತ್ತವೆ ಹಲವು ಲಾಭಗಳು…

Health Tips

ಹೊರಗೆ ಹೋಗಿ ಮನೆಗೆ ಬಂದ ಬಳಿಕ ಪಾದಗಳನ್ನು ತೊಳೆದು (Washing feet benefits) ಮನೆಯೊಳಗೇ ಬರಬೇಕು (Health Tips) ಎನ್ನುತ್ತಾರೆ ಮನೆ ಹಿರಿಯರು. ಹೆಚ್ಚಿನ ಮನೆಗಳಲ್ಲಿ ಇದು ಸಾಮಾನ್ಯ ಅಭ್ಯಾಸವಾಗಿದೆ. ಆಯುರ್ವೇದವೂ (Ayurveda ) ಕೂಡ ಹೊರಗಿನಿಂದ ಮನೆ ಒಳಗೆ ಪ್ರವೇಶಿಸುವ ಮುಂಚೆ ಪಾದಗಳನ್ನು ತೊಳೆದು ಬರಬೇಕು ಎನ್ನುತ್ತದೆ. ಈ ಆಚರಣೆಯನ್ನು ಸಾಮಾನ್ಯವಾಗಿ ಪಾದಪ್ರಕ್ಷಲನ ಎಂದು ಕರೆಯಲಾಗುತ್ತದೆ. ಪದಪ್ರಕ್ಷಾಲನ್ ಎಂದರೆ ಪಾದವನ್ನು ಅಂದರೆ ಪಾದಗಳನ್ನು ಪ್ರಕ್ಷಲನ ಅಂದರೆ ಶುದ್ಧೀಕರಣ ಮಾಡುವುದು ಎಂದರ್ಥ.

ಆಯುರ್ವೇದದ ಪ್ರಕಾರ ಪಾದಗಳ ಶುದ್ದೀಕರಣವು ಹಲವಾರು ಕಾರಣಗಳಿಗಾಗಿ ಒಳ್ಳೆಯ ಆಚರಣೆಯಾಗಿದೆ.
ಹೊರಗಿನಿಂದ ಮನೆಗೆ ಮರಳಿದ ಬಳಿಕ ಪಾದಗಳನ್ನು ತೊಳೆದರೆ ವಿವಿಧ ಸೋಂಕಿನ ವಿರುದ್ಧ ಹೋರಾಡಲು, ದೇಹದ ಆಯಾಸವನ್ನು ನಿವಾರಣೆ ಮಾಡಲು, ದೇಹದ ಶಕ್ತಿ ಕಾಪಾಡಲು, ನೆಮ್ಮದಿಯ ನಿದ್ದೆಗಾಗಿ ಒಳ್ಳೆಯದು ಎನ್ನುತ್ತಾರೆ ಮುಂಬೈನ ಆಯುರ್ವೇದ ವೈದ್ಯೆ ಮನೀಶಾ ಮಿಶ್ರಾ .

ಆಯುರ್ವೇದದ ಪ್ರಕಾರ ಉಗುರು ಬೆಚ್ಚ ನೆಯ ನೀರನ್ನು ಬಳಸಿ ಪಾದಗಳನ್ನು ತೊಳೆದ ಬಳಿಕ ಕಾಲಿನ ಬೆರಳುಗಳ ನಡುವೆ ಸೇರಿದಂತೆ ಪಾದವನ್ನು ಸಂಪೂರ್ಣವಾಗಿ ಒಣಗಿಸಿಕೊಳ್ಳಬೇಕು.

Health Tips

ಏನು ಪ್ರಯೋಜನ ?

ಹೊರಗಿನಿಂದ ಮನೆಗೆ ಬಂದ ತಕ್ಷಣ ಪದಗಳನ್ನು ತೊಳೆಯುವುದರಿಂದ ಅನೇಕ ಲಾಭಗಳಿವೆ.

ಶುಚಿತ್ವ

ದಿನವಿಡೀ ನಾವು ಅಲ್ಲಿ ಇಲ್ಲಿ ಸುತ್ತಾಡುವಾಗ ಕಾಲಿನಲ್ಲಿ ಕಲ್ಮಶಗಳು ಅಂಟಿಕೊಂಡಿರುತ್ತದೆ. ಇದನ್ನು ಶುದ್ದೀಕರಿಸುವುದರಿಂದ ದೈಹಿಕ ಮತ್ತು ಆಧ್ಯಾತ್ಮಿಕ ಶುಚಿತ್ವಕ್ಕೆ ಆದ್ಯತೆ ನೀಡಿದಂತಾಗುತ್ತದೆ.

ವಿಶ್ರಾಂತಿ

ಮನೆಗೆ ಬಂದ ತಕ್ಷಣ ಪಾದಗಳನ್ನು ತೊಳೆಯುವುದು ದೇಹ, ಮನಸ್ಸಿಗೆ ವಿಶ್ರಾಂತಿ ಉಂಟಾಗುತ್ತದೆ. ಬಾಹ್ಯ ಪ್ರಪಂಚದ ಒತ್ತಡದಿಂದ ಮುಕ್ತರಾಗುತ್ತೇವೆ.

ರಕ್ತಪರಿಚಲನೆಗೆ ಉತ್ತೇಜನ

ಪಾದಗಳನ್ನು ತೊಳೆಯುವ ಮತ್ತು ಮಸಾಜ್ ಮಾಡುವ ಪ್ರಕ್ರಿಯೆಯು ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಚೈತನ್ಯ ತುಂಬುತ್ತದೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಪಾದದ ಆರೋಗ್ಯ

ನಿಯಮಿತವಾಗಿ ಪಾದಗಳನ್ನು ತೊಳೆಯುವುದು ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಇತರ ಸೋಂಕಿನಿಂದ ದೇಹವನ್ನು ಕಾಪಾಡುತ್ತದೆ. ಇದು ಪಾದದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪಾದಗಳಲ್ಲಿನ ಆಯಾಸ ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಪ್ರಯೋಜನಕಾರಿಯಾಗಿದೆ.

ಉತ್ತಮ ನಿದ್ರೆ

ಮಲಗುವ ಮೊದಲು ಪಾದಗಳನ್ನು ತೊಳೆಯುವುದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿದ್ರೆಗಾಗಿ ದೇಹವನ್ನು ಸಿದ್ದ ಮಾಡುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

Health Tips

ಪಾದಗಳನ್ನು ಹೇಗೆ ತೊಳೆಯಬೇಕು?

ಆರಾಮದಾಯಕವಾಗಿ ಕುಳಿತುಕೊಂಡು ಉಗುರು ಬೆಚ್ಚನೆಯ ನೀರನಲ್ಲಿ ಪಾದಗಳನ್ನು ತೊಳೆಯಿರಿ. ಈ ನೀರಿಗೆ ನಂಜುನಿರೋಧಕವಾದ ಲ್ಯಾವೆಂಡರ್ ಅಥವಾ ಶ್ರೀಗಂಧ ಎಣ್ಣೆಯ ಕೆಲವು ಹನಿ ಅಥವಾ ಗಿಡಮೂಲಿಕೆಗಳನ್ನು ಸೇರಿಸಬಹುದು.

Anti Aging : ಮುಪ್ಪನ್ನು ಮುಂದೂಡಬೇಕೆ? ಎಣ್ಣೆಯ ಮೊರೆ ಹೋಗಿ!

ಕೈಗಳಿಂದ ಅಥವಾ ಮೃದುವಾದ ಬಟ್ಟೆಯನ್ನು ಬಳಸಿ ಪಾದಗಳನ್ನು ನಿಧಾನವಾಗಿ ಉಜ್ಜಿ. ಕಾಲ್ಬೆರಳು ಮತ್ತು ಅಡಿಭಾಗಗಳ ನಡುವಿನ ಪ್ರದೇಶಗಳಿಗೂ ಗಮನ ಕೊಡಿ. ಇದು ಕೊಳಕು ಮತ್ತು ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಪಾದ ತೊಳೆದ ಬಳಿಕ ಅಗತ್ಯವಿದ್ದರೆ ನಿಧಾನಕ್ಕೆ ಪಾದಗಳನ್ನು ಮಸಾಜ್ ಮಾಡಿ. ಬಳಿಕ ಪಾದಗಳನ್ನು ಮೃದುವಾದ ಟವೆಲ್ ನಿಂದ ಪಾದಗಳನ್ನು ಒರೆಸಿ. ಪಾದಗಳ ಚರ್ಮವನ್ನು ಮೃದುವಾಗಿಡಲು ಎಣ್ಣೆ ಅಥವಾ ಲೋಷನ್ ಹಚ್ಚಬಹುದು.