ನವದೆಹಲಿ: ವಯಸ್ಸಾದವರಲ್ಲಿ ಕಂಡುಬರುವ ಮುಖ್ಯ ಮಾನಸಿಕ ಸಮಸ್ಯೆಯೆಂದರೆ ಅದು ಖಿನ್ನತೆ. ಅದರಲ್ಲೂ ನಿವೃತ್ತಿಯ ನಂತರ ಶೇ.80ರಷ್ಟು ವಯಸ್ಸಾದವರಲ್ಲಿ ಖಿನ್ನತೆಯ (Retirement depression) ಸಮಸ್ಯೆ ಹೆಚ್ಚಾಗಿದೆ ಎಂದು ಅಧ್ಯಯನಗಳು ಹೇಳಿವೆ. ಇಂದು ಭಾರತದಲ್ಲಿ ಖಿನ್ನತೆ ಅನ್ನೋದು ಹೆಚ್ಚಾಗುತ್ತಿದೆ ಎಂಬ ಆಘಾತಕಾರಿ ವಿಚಾರವನ್ನು ಮನೋತಜ್ಞರು ತಿಳಿಸಿದ್ದಾರೆ.
ನಿವೃತ್ತಿ ಅಂದಾಗ ಇಂದು ಹೆಚ್ಚಿನ ಜನರು ಖಿನ್ನತೆಗೆ ಒಳಪಡುತ್ತಾರೆ. ಈ ಖಿನ್ನತೆ ಅನ್ನೋದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀಳುತ್ತದೆ. ಅತಿಯಾದ ದೈಹಿಕ ಆರೋಗ್ಯ ಸಮಸ್ಯೆ, ನೆನಪಿನ ಶಕ್ತಿ ಸಮಸ್ಯೆ ಇತ್ಯಾದಿ ಕಾಡಲಿದೆ. ಹಾಗಾದರೆ ಇದನ್ನು ತಡೆಯುವುದು ಹೇಗೆ ಎನ್ನುದನ್ನು ಮನೋರೋಗ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.
ನಿವೃತ್ತಿಯೆಂಬುದು ಹೆಚ್ಚಿನವರಿಗೆ ಇಂದು ಅರಗಲಾರದ ಆಘಾತ, ಮೊದಲೆಲ್ಲಾ ನಿವೃತ್ತಿ ಅಂದಾಗ ಕೃಷಿ ಕೆಲಸ ಮಾಡಿಯೋ ಅಥವಾ ಮೊಮ್ಮಕ್ಕಳ ಜೊತೆಯೋ ಕಾಲ ಕಳೆದು ಜೀವನ ನಡೆಸುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ. ನಿವೃತ್ತಿಯ ನಂತರ ಏನು ?ಎಂಬ ಚಿಂತೆಗಳು ಹೆಚ್ಚಿನ ವಯಸ್ಸದವರಲ್ಲಿ ಈ ಪ್ರಶ್ನೆ ಇರಲಿದೆ.
ಏನು ಪರಿಹಾರ?
- ನಿವೃತ್ತಿಗೆ ಇನ್ನೇನು ಕೆಲವೇ ವರ್ಷ ಇದೆ ಅಂದಾಗ ಅದಕ್ಕಾಗಿ ಯೋಜನೆ ಮಾಡಿಕೊಳ್ಳಬೇಕು. ನಿವೃತ್ತಿಯ ನಂತರ ಹೇಗಿರಬೇಕು. ನಮ್ಮ ಹಣಕಾಸಿನ ವ್ಯವಸ್ಥೆಗೆ ಏನು ಮಾಡಬೇಕು? ಹೇಗೆ ಸಮಯ ಕಳೆಯಬೇಕು ಇತ್ಯಾದಿ.
- ಹಾಗೆಯೇ ಕೆಲವೊಂದು ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಪಾರ್ಟ್ ಟೈಮ್ ಜಾಬ್ ಮಾಡುವುದು, ಮಕ್ಕಳಿಗೆ ಟ್ಯೂಷನ್ ನೀಡುವುದು ಇತ್ಯಾದಿ.
- ಉತ್ತಮ ಆಹಾರ ವಿಹಾರ, ವ್ಯಾಯಾಮ, ಸುಖಕರ ನಿದ್ರೆ ಮಾಡಿ ಖಿನ್ನತೆ ಕಡಿಮೆ ಮಾಡಿಕೊಳ್ಳಬಹುದು
- ನಿವೃತ್ತಿಯ ನಂತರ ಜನರೊಂದಿಗೆ ಹೆಚ್ಚು ಹೆಚ್ಚು ಬೆರೆಯುವುದನ್ನ ರೂಢಿಸಿಕೊಳ್ಳಬೇಕು. ಇದರಿಂದ ಏಕಾಂಗಿತನ ದೂರವಾಗಲಿದೆ.
- ಧ್ಯಾನ ಮತ್ತು ದೈಹಿಕ ವ್ಯಾಯಾಮ ಮಾಡುವುದ ರಿಂದಲೂ ಖಿನ್ನತೆಯಿಂದ ಹೊರಬರಬಹುದು.
- ಹೊಸ ಕೌಶಲ್ಯಗಳನ್ನು ಅಭ್ಯಾಸ ಮಾಡಿಕೊಳ್ಳಿ ಹೊಸ ಕೆಲಸಗಳನ್ನು ಮಾಡಿ. ಪತ್ರಿಕೆ ಓದುವುದು, ಕ್ರಾಫ್ಟ್ ರಚನೆ, ಇತ್ಯಾದಿ ನಿಮ್ಮ ಆಸಕ್ತಿಕರ ವಿಚಾರವನ್ನು ತಿಳಿದುಕೊಳ್ಳಿ
ಖಿನ್ನತೆ ಲಕ್ಷಣ ಏನು?
- ಆತಂಕ, ಹಸಿವು ಮತ್ತು ತೂಕ ಇಳಿಕೆ ಸಮಸ್ಯೆ ಉಂಟಾಗಲಿದೆ.
- ನಿದ್ರೆಯ ಸಮಸ್ಯೆ ಜೊತೆಗೆ ಏಕಾಗ್ರತೆ ಕೊರತೆ ಅಥವಾ ನಿರ್ಧಾರ ತೆಗೆದುಕೊಳ್ಳಲು ಕಷ್ಟ ಆಗಬಹುದು.
- ನಿರುತ್ಸಾಹ, ಒಂಟಿತನ, ಭಾವನಾತ್ಮಕ ಏರಿಳಿತ, ನಿಶ್ಯಕ್ತಿ, ಆತ್ಮಹತ್ಯೆಯ ಚಿಂತನೆ ಇತ್ಯಾದಿ ಕಾಡಲಿದೆ.
- ನಿರಂತರ ಬೇಜಾರು ಅಥವಾ ಆತಂಕ, ಹಿಂದೆ ಮಾಡುತ್ತಿದ್ದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು ಇತ್ಯಾದಿ ಸಮಸ್ಯೆ ಆಗಲಿದೆ.
ಈ ಸುದ್ದಿಯನ್ನೂ ಓದಿ: ಖಿನ್ನತೆಯಿಂದ ಹೊರಬರಲು ಉಪಾಯಗಳು