ಮಹಿಳಾ ಉದ್ಯಮಿಗಳ ಕನಸಿಗೆ ಸ್ಥಳೀಯ ಸ್ಫೂರ್ತಿ, ಜಾಗತಿಕ ರೆಕ್ಕೆ : 'ಶೀ ಎಕ್ಸ್‌ಪೋರ್ಟ್ಸ್' ಮೂಲಕ ವಿಶ್ವ ಗೆಲ್ಲಲು ಸಿದ್ಧತೆ
ಉನ್ನತ ಮಟ್ಟದ ಚರ್ಚೆಯಿಂದ ಡಿಜಿಟಲ್, ಸಹಯೋಗ ಮತ್ತು ಗಡಿಯಾಚೆ ಉದ್ಯಮದ ವಿಸ್ತರಣೆ ಯ ಮಾರ್ಗಗಳನ್ನು ಮಹಿಳೆಯರು ತಿಳಿದುಕೊಂಡರು. 'ಶೀ ಎಕ್ಸ್‌ಪೋರ್ಟ್ಸ್' ಎನ್ನುವುದು ಆಸ್ಪೈರ್ ಫಾರ್ ಹರ್‌ನ ರಾಷ್ಟ್ರೀಯ ಉಪಕ್ರಮವಾದ್ದು, ಇದು ವಿಶೇಷವಾಗಿ ಟಯರ್ 2 ಮತ್ತು 3 ನಗರಗಳ ಮಹಿಳಾ ಉದ್ಯಮಿಗಳನ್ನು ಜಾಗತಿಕ ಕ್ಷೇತ್ರಕ್ಕೆ ತೆರೆದುಕೊಳ್ಳಲು ಬೇಕಾದ ಸಿದ್ಧತೆ ಹಾಗೂ ಆತ್ಮವಿಶ್ವಾಸವನ್ನು ನೀಡುತ್ತದೆ


ಬೆಂಗಳೂರು: ಭಾರತೀಯ ಮಹಿಳಾ ಉದ್ಯಮಿಗಳನ್ನು ಜಾಗತಿಕ ಕ್ಷೇತ್ರಕ್ಕೆ ವಿಸ್ತರಿಸಿ ಅವರನ್ನು ಸಬಲೀಕರಣಗೊಳಿಸುವ ಶೀ ಎಕ್ಸ್‌ಪೋರ್ಟ್ಸ್ ತಂಡದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಆಸ್ಪೈರ್ ಫಾರ್ ಹರ್, ಸೀಡ್ ಸಹಯೋಗ ಮತ್ತು ಪೇಯೋ ನೀರ್ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಫೀನಾ ಪ್ಲಾಜಾದ ಯೂಟೋರಿಯಲ್ಲಿ ಜಾಗತಿಕವಾಗಿ ವಿಸ್ತರಿಸಲು ಸಿದ್ಧರಿದ್ದೀರಾ? ಎಂಬ ವಿಷಯ ದಡಿ ನಡೆದ ಈ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು. ಉನ್ನತ ಮಟ್ಟದ ಚರ್ಚೆಯಿಂದ ಡಿಜಿಟಲ್, ಸಹಯೋಗ ಮತ್ತು ಗಡಿಯಾಚೆ ಉದ್ಯಮದ ವಿಸ್ತರಣೆ ಯ ಮಾರ್ಗಗಳನ್ನು ಮಹಿಳೆಯರು ತಿಳಿದುಕೊಂಡರು. 'ಶೀ ಎಕ್ಸ್‌ಪೋರ್ಟ್ಸ್' ಎನ್ನುವುದು ಆಸ್ಪೈರ್ ಫಾರ್ ಹರ್‌ನ ರಾಷ್ಟ್ರೀಯ ಉಪಕ್ರಮವಾದ್ದು, ಇದು ವಿಶೇಷವಾಗಿ ಟಯರ್ 2 ಮತ್ತು 3 ನಗರಗಳ ಮಹಿಳಾ ಉದ್ಯಮಿಗಳನ್ನು ಜಾಗತಿಕ ಕ್ಷೇತ್ರಕ್ಕೆ ತೆರೆದುಕೊಳ್ಳಲು ಬೇಕಾದ ಸಿದ್ಧತೆ ಹಾಗೂ ಆತ್ಮವಿಶ್ವಾಸವನ್ನು ನೀಡುತ್ತದೆ.

ಅಮೆರಿಕ ಮೂಲದ ಪೇಯೋನೀರ್ ಸಂಸ್ಥೆ ಯಾವುದೇ ಗಾತ್ರದ ಮತ್ತು ಯಾವುದೇ ಸ್ಥಳದಲ್ಲಿರುವ ಉದ್ಯಮಗಳಿಗೆ ಜಾಗತಿಕ ವ್ಯಾಪಾರ ಕ್ಷೇತ್ರಕ್ಕೆ ಪ್ರವೇಶಿಸಲು ಸಹಾಯ ಮಾಡುವ ದೃಷ್ಟಿಕೋನವನ್ನು ಹೊಂದಿದೆ. 2005ರಿಂದ ಕಳೆದ ಎರಡು ದಶಕದಲ್ಲಿ ಪೇಯೋನೀರ್ ಸಂಸ್ಥೆ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಬೆಳವಣಿಗೆಗೆ ಶಕ್ತಿ ತುಂಬಿ, ಜಗತ್ತನ್ನು ಸಂಪರ್ಕಿಸುವ ಆರ್ಥಿಕ ವೇದಿಕೆ ನಿರ್ಮಿಸಿದೆ.
ಇದನ್ನೂ ಓದಿ: Tata Avinya: ಅಮೆರಿಕದ ಟೆಸ್ಲಾ ಕಾರಿಗೆ ಟಾಟಾದ ಅವಿನ್ಯಾ ಸವಾಲ್!
ಭಾರತದಲ್ಲಿನ ಮಹಿಳಾ ಉದ್ಯಮಿಗಳನ್ನು ಪೇಯೋನೀರ್ ಬೆಂಬಲಿಸುತ್ತಿದ್ದು, ಭಾರತವನ್ನು ಜಗತ್ತಿಗೆ ಕೊಂಡೊಯ್ಯುವ ಮಹಿಳಾ ಉದ್ಯಮಿಗಳ ಕನಸಿಗೆ ನೀರೆರೆಯುತ್ತಿದೆ. ಅದೇ ರೀತಿ ಆಸ್ಪೈರ್ ಫಾರ್ ಹರ್ ತಂಡವು 2025ರ ವೇಳೆಗೆ ಹತ್ತು ಲಕ್ಷ ಮಹಿಳೆಯರನ್ನು ಆರ್ಥಿಕತೆಗೆ ಸೇರಿಸುವ ಗುರಿಯನ್ನು ಹೊಂದಿದೆ. ಮಹಿಳಾ ಉದ್ಯಮಿಗಳನ್ನು ಕೇಂದ್ರವಾಗಿಟ್ಟುಕೊಂಡು ಮಾಡುತ್ತಿರುವ ಕೆಲಸವು ವಿಶ್ವಸಂಸ್ಥೆಯ ಯುಎನ್ ವುಮೆನ್ ಸೇರಿ ಅನೇಕ ಪ್ರಶಸ್ತಿಗಳನ್ನು ಆಸ್ಪೈರ್ ಫಾರ್ ಹರ್ ತಂಡಕ್ಕೆ ತಂದುಕೊಟ್ಟಿದೆ.
ಶೀ ಎಕ್ಸ್‌ಪೋರ್ಟ್ಸ್ ವೇಳೆ ನಡೆದ ಉನ್ನತ ಮಟ್ಟದ ಚರ್ಚೆಯಲ್ಲಿ ಈ ಕೆಳಗಿನ ಗಣ್ಯರು ಭಾಗವಹಿಸಿದ್ದರು:
● ಆಂಡ್ರ್ಯೂ ಕಾಲಿಸ್ಟರ್: ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯಾದ ದೂತವಾಸ ಕಚೇರಿಯಲ್ಲಿ ರಾಯಭಾರಿ ಆಗಿರುವ ಆಂಡ್ರ್ಯೂ ಕಾಲಿಸ್ಟರ್ ಇದ್ದರು. ಆಸ್ಟ್ರೇಲಿಯನ್ ವಿದೇಶಾಂಗ ವ್ಯವಹಾರಗಳು ಮತ್ತು ವ್ಯಾಪಾರ ಇಲಾಖೆಯ ಅಧಿಕಾರಿಯಾಗಿರುವ ಇವರು ಆಸ್ಟ್ರೇಲಿಯಾವನ್ನು ವ್ಯಾಪಾರ ತಾಣವಾಗಿ ಪ್ರೋತ್ಸಾಹಿಸುವಲ್ಲಿ ಒಂದು ಹೆಜ್ಜೆ ಮುಂದೆ ಇದ್ದು, ಮಹಿಳಾ ಉದ್ಯಮಶೀಲತೆಗೆ ಪ್ರಬಲ ಬೆಂಬಲ ನೀಡುತ್ತಾರೆ.

● ಜುಹಿ ಸಂತಾನಿ: ರಿಟೇಲ್ ಡಿಸೈನ್ ಸೊಲ್ಯೂಷನ್ಸ್‌ನ ಸ್ಥಾಪಕಿಯಾದ ಜುಹಿ ಸಂತಾನಿ 2 ದಶಕಗಳಿಗೂ ಹೆಚ್ಚು ಕಾಲ 1500 ಯೋಜನೆಗಳು, 200 ಬ್ರ್ಯಾಂಡ್‌ಗಳು ಮತ್ತು 3 ಖಂಡಗಳಲ್ಲಿ ಸ್ಪೂರ್ತಿದಾಯಕ ರಿಟೇಲ್ ಮತ್ತು ಆತಿಥ್ಯ ಸ್ಥಳಗಳನ್ನು ನಿರ್ಮಿಸುವಲ್ಲಿ ಕಾರ್ಯನಿರ್ವಹಿಸಿದ್ದಾರೆ.
● ಪವಿತ್ರಾ ವೈ.ಎಸ್: ವಿಂಧ್ಯಾ ಇ-ಇನ್ಫೋಮೀಡಿಯಾದ ಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಪವಿತ್ರಾ ವೈಎಸ್ ಕೂಡ ಭಾಗವಹಿಸಿದ್ದರು. ಇದೊಂದು ವಿಶಿಷ್ಟ ಇಂಪ್ಯಾಕ್ಟ್ ಸೋರ್ಸಿಂಗ್ ಸೇವಾ ಪೂರೈಕೆದಾರ ಸಂಸ್ಥೆಯಾಗಿದ್ದು, ಇದು ಐಟಿ ಮತ್ತು ಬಿಪಿಓ ಕ್ಷೇತ್ರಗಳಲ್ಲಿ ಲಾಭವನ್ನು ಸಮಗ್ರ ಉದ್ಯೋಗದೊಂದಿಗೆ ವಿಲೀನಗೊಳಿಸುವ ಹೊಸ ಮತ್ತು ಸುಸ್ಥಿರ ವ್ಯಾಪಾರ ಮಾದರಿಗೆ ಜನಪ್ರಿಯ ವಾಗಿದೆ. ಭಾರತದ 5 ವಿತರಣಾ ಕೇಂದ್ರಗಳಲ್ಲಿ 2,600ಕ್ಕೂ ಹೆಚ್ಚು ವೈವಿಧ್ಯಮಯ ಉದ್ಯೋಗಿ ಗಳನ್ನು ಹೊಂದಿರುವ ಪವಿತ್ರಾ ಅವರು, ವಿಕಲಚೇತನರು ಮತ್ತು ಇತರ ಹಿಂದುಳಿದ ಪ್ರತಿಭೆಗಳಿಗೆ ತಮ್ಮ ಸಂಸ್ಥೆಯಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ನೀಡುತ್ತಾರೆ. ಈ ಹಿನ್ನೆಲೆ ಅವರನ್ನು ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.
ಈ ಚರ್ಚೆಯು ಸಮಗ್ರ ನಾಯಕತ್ವ, ವಿಸ್ತರಣಾ ತಂತ್ರಗಳು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಜಾಗತಿಕ ಅವಕಾಶಗಳ ಬಾಗಿಲನ್ನು ತೆರೆಯುವ ಬಗ್ಗೆ ಬಹಳಷ್ಟು ಪ್ರಮುಖ ಅಂಶಗಳನ್ನು ತೆರೆದಿಟ್ಟಿತು.
ಈ ಬಗ್ಗೆ ಮಾತನಾಡಿದ ಆಸ್ಪೈರ್ ಫಾರ್ ಹರ್ ಸಂಸ್ಥಾಪಕಿ ಹಾಗೂ ಸಿಇಒ ಮಧುರಾ ದಾಸ್‌ಗುಪ್ತಾ ಸಿನ್ಹಾ ಅವರು, ಶೀ ಎಕ್ಸ್‌ಪೋರ್ಟ್ಸ್ ಎನ್ನುವುದು ಕೇವಲ ಜಾಗತಿಕ ಪ್ರವೇಶಕ್ಕೆ ಮಾತ್ರ ಸೀಮಿತ ವಾಗಿಲ್ಲ. ಅದು ಮನಸ್ಥಿತಿಯನ್ನು ಬದಲಾಯಿಸುವ ಬಗ್ಗೆಯೂ ಇದೆ. ಇಂದಿನ ಕಾರ್ಯಕ್ರಮ ಮಹಿಳೆಯರಿಗಾಗಿ ಜಾಗತಿಕ ವೇದಿಕೆಯನ್ನು ನಿರ್ಮಿಸುವಲ್ಲಿ ಸಹಯೋಗ, ಸಹಕಾರದ ಶಕ್ತಿಯನ್ನು ಸಾಬೀತುಪಡಿಸಿದೆ ಎಂದಿದ್ದಾರೆ.
ಅದೇ ರೀತಿ ಪೇಯೋನೀರ್ ಇಂಡಿಯಾದ ಮಾರ್ಕೆಟಿಂಗ್ ಮ್ಯಾನೇಜರ್, APAC & PR ಮುಖ್ಯಸ್ಥ ರಾದ ಸಲೋನಿ ವೈಷ್ಣವ್ ಮಾತನಾಡಿ, ಶೀ ಎಕ್ಸ್‌ಪೋರ್ಟ್ಸ್ ಪೇಯೋನೀರ್‌ನ ಧ್ಯೇಯೋದ್ದೇಶಕ್ಕೆ ಅನುಗುಣವಾಗಿದೆ. ಅದಕ್ಕಾಗಿ ನಾವು ಶೀ ಎಕ್ಸ್‌ಪೋರ್ಟ್ಸ್‌ಗೆ ಬೆಂಬಲ ನೀಡುತ್ತಿದ್ದೇವೆ. ನಮ್ಮ ಉದ್ದೇಶ ಕೂಡ ಮಹಿಳೆಯರ ಉದ್ಯಮಗಳನ್ನು ಗಡಿ ಮೀರಿ ಯಶಸ್ವಿಯಾಗಿಸಲು ಸಹಾಯ ಮಾಡುವುದಾಗಿದೆ ಎಂದರು.